ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for February, 2014

 • ರಾಹುಲ್ ಮಾತು ನೋಡಲು, ಕೇಳಲು ಚೆಂದ, ಆದರೆ ಕಾರ್ಯಸಾಧುವಲ್ಲ, ಅವರ ಐಡಿಯಾಗಳಿಗೆ ಅವರಷ್ಟೇ ಖರೀದಿದಾರರು!

  ರಾಹುಲ್ ಜೊತೆ ‘ಅವರ ಮಾತುಗಳನ್ನು ಕೇಳಲು, ನೋಡಲು ಚೆಂದವಾಗಿತ್ತು. ಆದರೆ ಯಾವುದೂ ಕಾರ್ಯಸಾಧುವಲ್ಲ!’ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಶನಿವಾರ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಪತ್ರಿಕೆ-ಟಿವಿ ಚಾನೆಲ್ ಸಂಪಾದಕರ ಜತೆ ಸುಮಾರು ನಲವತ್ತೈದು ನಿಮಿಷಗಳ ಕಾಲ ನಡೆಸಿದ ಅನೌಪಚಾರಿಕ ಮಾತುಕತೆ ಮುಗಿದ ಬಳಿಕ ನನಗೆ ತಕ್ಷಣ ಅನಿಸಿದ್ದು ಇದು. ‘ಜನವರಿ 27ರಂದು ‘ಟೈಮ್ಸ್ ನೌ’ ಟಿವಿ ಚಾನೆಲ್‌ನ ಸಂಪಾದಕ ಅರ್ನಾಬ್ ಗೋಸ್ವಾಮಿಯವರಿಗೆ ರಾಹುಲ್‌ಗಾಂಧಿ ಅವರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ ಮೊಟ್ಟ ಮೊದಲ ಸಂದರ್ಶನದಲ್ಲಿ ಮಾತಾಡಿದ್ದರಲ್ಲ, ಅವರೊಂದಿಗಿನ […]

 • ಹುಡುಗ-ಹುಡುಗಿಯರಲ್ಲಿ ಲವ್ ಹುಟ್ಟಲು ಔಷಧಿ ಇದೆಯೇ?

  ಕೇಳ್ರಪ್ಪೋ ಕೇಳಿ * ತಲವಾಟ ಮಂಜುನಾಥ, ಸಾಗರ, 9480931611 ಹುಡುಗ-ಹುಡುಗಿಯರಲ್ಲಿ ಲವ್ ಹುಟ್ಟಲು ಔಷಧಿ ಇದೆಯೇ? ಲವ್ ಹುಟ್ಟೋದಕ್ಕೇ ಔಷಧಿ ಬೇಕು ಅಂದ್ರೆ ಮುಂದಿಂದೆಲ್ಲ ಹೇಗೆ ಮಾರಾಯಾ? * ಐಗೂರು ರವಿಪ್ರಿಯ, ಕೊಡಗು, 9483111096 ನಮ್ಮ ರಾಜ್ಯ ಸರ್ಕಾರದಿಂದ ಒಂದು ರುಪಾಯಿ ಕೆಜಿ ಅಕ್ಕಿ ಪಡೆದು, ಕೇಂದ್ರ ಸರ್ಕಾರ ನೀಡುವ ಸಾವಿರಾರು ರುಪಾಯಿಯ ‘ಗ್ಯಾಸ್‌’ನಲ್ಲಿ ಅಡುಗೆ ಮಾಡುವುದು ಹೇಗೆ? ಬಲಗೈಯಲ್ಲಿ ಕೊಟ್ಟು ಎಡಗೈಯಲ್ಲಿ ಇಸ್ಕೊಳ್ಳೋದು ಅಂದ್ರೆ ಇದೇ ನೋಡಿ. * ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088 ಸಾಹಿತಿಗಳೆಲ್ಲ […]

 • ಸ್ಪೂರ್ತಿಸೆಲೆ – 13 ಫೆಬ್ರವರಿ 2014

  ಜಗತ್ತಿನಲ್ಲಿ ಸಾವಿರಾರು ಸಮಸ್ಯೆಗಳಿವೆ. ಆದರೆ ಇವುಗಳ ನಿವಾರಣ ಉಪಾಯವೇ ಜನರಿಗೆ ಗೊತ್ತಿಲ್ಲ. ನೀವು ಇನ್ನೊಬ್ಬರ ಬಗ್ಗೆ ಹೆಚ್ಚು ಮಾತನಾಡುವುದನ್ನು ಬಿಡಿ. ಇದಕ್ಕೆ ಬದಲಾಗಿ ಇನ್ನೊಬ್ಬರೊಂದಿಗೆ ಮಾತನಾಡುವುದನ್ನು ಕಲಿತುಕೊಳ್ಳಿ. ಆಗ ಎಲ್ಲಾ ಸಮಸ್ಯೆಗಳೂ ಮಾಯವಾಗುತ್ತವೆ.

 • ವಕ್ರತುಂಡೋಕ್ತಿ – 13 ಫೆಬ್ರವರಿ 2014

  ಜೀವನದಲ್ಲಿ ಕೆಲ ಸ್ನೇಹಿತರನ್ನು ಎಂದೂ ಮರೆಯಲಾಗುವುದಿಲ್ಲ. ಕಾರಣ ಅವರು ನಮ್ಮಿಂದ ಸಾಲ ಪಡೆದಿರುತ್ತಾರೆ.

 • ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ?

  ನೂರೆಂಟು ನೋಟ ವಿಶ್ವೇಶ್ವರ ಭಟ್ ‘ಯೋಗಿ ದುರ್ಲಭಜೀ, ನಿಮ್ಮ ಜನ್ಮದಿನದಂದು ನಿಮಗೆ ಏನನ್ನು ಕಳಿಸಲಿ?’ ಎಂದು ಸಹಜವಾಗಿ ಕೇಳಿದೆ. ‘ಮೊದಲನೆಯದಾಗಿ ನನಗೆ ಜನ್ಮದಿನ ಆಚರಣೆಯಲ್ಲಿ ನಂಬಿಕೆಯಿಲ್ಲ. ನನಗೆ ಏನಾದರೂ ಮತ್ತೊಂದು ಒಳ್ಳೆಯ ಕೆಲಸವನ್ನು ಮಾಡಲು ಇದೊಂದು ನೆಪ ಅಷ್ಟೆ. ನಾನು ಯಾರ ಜನ್ಮದಿನವನ್ನೂ ಆಚರಿಸುವುದಿಲ್ಲ. ಆದರೆ ಆಯಾ ದಿನದಂದು ಅವರವರು ಮಾಡಿದ ಉತ್ತಮ ಕಾರ್ಯವನ್ನು ನೆನಪಿಸಿಕೊಂಡು ಪ್ರೇರಣೆ ಪಡೆಯುತ್ತೇನೆ. ಜನ್ಮದಿನಾಚರಣೆಯ ಉದ್ದೇಶ ಅದೇ ತಾನೆ?’ ಎಂದರು. ಅಷ್ಟಕ್ಕೆ ಸುಮ್ಮನಾಗದೇ, ‘ಯೋಗಿಜೀ, ನಾನು ನಿಮಗೆ ಹೂಗುಚ್ಛ ಕಳಿಸಲಾರೆ. ಅದು […]

 • ಸ್ಪೂರ್ತಿಸೆಲೆ – 11 ಫೆಬ್ರವರಿ 2014

  ಪ್ರತಿದಿನವೂ ನಿಮಗೆ ಮಹತ್ವದ್ದೇ. ಏಕೆಂದರೆ ಅದು ಮತ್ತೊಮ್ಮೆ ಬರುವುದಿಲ್ಲ. ಹೀಗಾಗಿ ಈ ದಿನವನ್ನು ಉತ್ತಮವಾಗಿ ಕಳೆಯಿರಿ. ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಿ, ಬೇರೆಯವರ ಆರೋಗ್ಯದ ಬಗ್ಗೆ ಚಿಂತೆ ಮಾಡಿ. ಮೃದುವಾಗಿ ಮಾತನಾಡಿ, ಆದರೆ ಮಾತಿನ ಗಾಯ ಮಾಡಬೇಡಿ.

 • ವಕ್ರತುಂಡೋಕ್ತಿ – 11 ಫೆಬ್ರವರಿ 2014

  ಧೂಮಪಾನ ಶ್ವಾಸಕೋಶದ ಮೇಲೆ, ಮದ್ಯಪಾನ ಲಿವರ್ ಮೇಲೆ ಒತ್ತಡ ತರುತ್ತದೆ. ಆದರೆ ಅಧ್ಯಯನವು ನೇರ ಮೆದುಳಿನ ಮೇಲೆಯೇ ಒತ್ತಡ ತರುತ್ತದೆ.

 • ವಿಶ್ವದ ಕೊನೆ ಹಾಗೂ ವಿಶ್ವ ನಾಯಕರ ನಾನಾ ನಮೂನೆ

  ನಂಗೆ ಇಷ್ಟಾನೋ ವಿಶ್ವೇಶ್ವರ ಭಟ್ ಹಿರಿಯ ಪತ್ರಕರ್ತ ಮಿತ್ರರಾದ ಎಚ್.ಎನ್. ಆನಂದ ಅವರು ಹೇಳಿದ ಈ ಕಾಲ್ಪನಿಕ ಹಾಸ್ಯ ಪ್ರಸಂಗವನ್ನು ನಿಮಗೆ ಹೇಳದಿರುವುದಾದರೂ ಹೇಗೆ? ಮೋದಿ ಪ್ರಿಯರು ಇದನ್ನು ಹೇಳಿ ಹೇಳಿ ಸವೆಸುವ ‘ಅಪಾಯ’ವಿದೆ. ಹಾಸ್ಯೋತ್ಸವಗಳಲ್ಲಿ ಗಂಗಾವತಿ ಝ್ಛ್ಝೀ ಖ್ಯಾತಿಯ ಪ್ರಾಣೇಶ್‌ಗೆ ಸಿಕ್ಕರೆ ಚಪ್ಪರ ಹಾರುವ ಚಪ್ಪಾಳೆ ಗ್ಯಾರಂಟಿ. ಇರಲಿ. ಒಂದು ದಿನ ದೇವರಿಗೆ ಏನನಿಸಿತೋ ಏನೋ, ಈ ಜಗತ್ತಿಗೆ ಮಂಗಳ ಹಾಡಲು ನಿರ್ಧರಿಸಿದ. ಈ ವಿಶ್ವದಲ್ಲಿರುವ ಮೂವರು ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಕರೆಯಲು ನಿರ್ಧರಿಸಿದ. ಆತ […]

 • ಹುಡುಗಿಯರದ್ದು ಓದಿನಲ್ಲಿ ಏಕಾಗ್ರತೆಯಾದರೆ, ಹುಡುಗರದ್ದು?

  ಕೇಳ್ರಪ್ಪೋ ಕೇಳಿ * ತಲವಾಟ ಮಂಜುನಾಥ್, ಸಾಗರ, 9480931611 ಇಲ್ಲೊಬ್ಬ ಮದುವೆಯಾದ ನಂತರ ಹಗಲಲ್ಲಿ ನೋಡಿದ ಬಾವಿಯಲ್ಲಿ ರಾತ್ರಿಬಿದ್ದೆ ಅಂತಿದಾನಲ್ಲ? ಎಲ್ಲರ ಸ್ಥಿತಿಯೂ ಅದೇ! * ಜಯಶ್ರೀ ಅಬ್ಬಿಗೇರಿ, ರಾಮದುರ್ಗ, ಬೆಳಗಾವಿ ಶೀಲಾ ದಿಕ್ಷೀತ್‌ಗೆ ಕನಸಿನಲ್ಲಿ ಪೊರಕೆ ಬಂದು ಕಾಡುತ್ತಿದೆಯಂತಲ್ಲಾ ನಿಜವೇ? ಪೊರಕೆ ಹಾಕಿ ಹೊರಕ್ಕೆ ಎಂದು ಆಂದೋಲನ ನಡೆಸುವ ಚಿಂತನೆಯಲ್ಲಿದ್ದಾರಂತೆ. * ಕಾಲ್‌ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ ಹುಡುಗಿಯರದ್ದು ಓದಿನಲ್ಲಿ ಏಕಾಗ್ರತೆಯಾದರೆ, ಹುಡುಗರದ್ದು? ಹುಡುಗಿಯರ ಬಗ್ಗೆ ಸದಾ ಜಾಗೃತಿ! * ನೇರಲಗುಡ್ಡ ಶಿವಕುಮಾರ, ಶಿರಾ, 9480343742 […]

 • ಸ್ಪೂರ್ತಿಸೆಲೆ – 08 ಫೆಬ್ರವರಿ 2014

  ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ಕ್ಷಣ ಹೊಸ ಹೊಸ ಸಂಗತಿಗಳನ್ನು ಕಲಿಸುತ್ತದೆ. ಆದರೆ ಮನಸ್ಸನ್ನು ಮಾತ್ರ ಸದಾ ತೆರೆದಿಡಬೇಕು.