ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for January, 2014

 • ಹಳ್ಳಿಯಲ್ಲಿ ಆಚೀಚೆ ಬೀದಿಗಳೂ ಪರಿಚಿತ. ಸಿಟಿಯಲ್ಲಿ ಹಕ್ಕದ ಮನೆಯವನ ಹೆಸರು ಕೇಳಿದರೂ ಆಕಾಶ ನೋಡ್ತಾರಲ್ಲ?

  ಕೇಳ್ರಪ್ಪೋ ಕೇಳಿ * ಕಾಲ್‌ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಂಜಿತಾ ಅ ಮಾ ಆನಂದಮಯಿ ಚಿತ್ರಪ್ರದರ್ಶನವಾಗುವ ಸಂಭವ ಇದ್ಯಾ? ಸಿಡಿ ಇದ್ರೆ ಕಳುಹಿಸಿಕೊಡಿ ಅಂದ್ರಂತೆ ಪಾಲೆಮಾರಿನ ಕೃಷ್ಣ! * ಕೊ. ಸು. ನರಸಿಂಹಮೂರ್ತಿ ರಾಜಕಾರಣಿಗಳು ‘ಸೇವ್ ದಿ ನೇಷನ್‌’ ಎಂಬುದನ್ನು ‘ಶೇವ್ ದಿ ನೇಷನ್‌’ ಅಂದುಕೊಂಡರಾ? ಬಹುಸಂಖ್ಯೆಯ ರಾಜಕಾರಣಿಗಳಿಗೆ ಅಷ್ಟೆಲ್ಲ ಇಂಗ್ಲಿಷು ಬರೋದಿಲ್ಲ, ಹೆದರಬೇಡಿ! * ಸಂತೇಬೆನ್ನೂರು ಫೈಜ್ನಟ್ರಾಜ್ ಕಣ್ಣಲ್ಲಿ ಕಣ್ಣಿಟ್ಟು ನೋಡೋಕಾಗುತ್ತಾ? ನೋಡಿದ ನಂತರದ ಪರಿಣಾಮಗಳ ಬಗ್ಗೆ ಯೋಚಿಸುವುದೊಳಿತು. * ಸಿ. ನಾಗರಾಜ […]

 • ವಕ್ರತುಂಡೋಕ್ತಿ – 30 ಜನೆವರಿ 2014

  ಕೆಲ ವಿದ್ಯಾರ್ಥಿಗಳು ಎಷ್ಟೊಂದು ಆಲಸಿಯಾಗಿರುತ್ತಾರೆಂದರೆ ಬುದ್ಧಿವಂತ ಹುಡುಗರ ಪಕ್ಕ ಕುಳಿತಾಗ ಅವರ ಉತ್ತರವನ್ನು ಕಾಪಿ ಮಾಡುವುದಕ್ಕೂ ಉದಾಸೀನ ತೋರುತ್ತಾರೆ.

 • ಸ್ಪೂರ್ತಿಸೆಲೆ – 30 ಜನೆವರಿ 2014

  ನೀವು ಎಲ್ಲ ಟೀಕೆಗಳಿಗೆ ಉತ್ತರ ನೀಡಬೇಕಿಲ್ಲ. ಸುಮ್ಮನಿದ್ದರೆ ಟೀಕಾಕಾರರಿಗೇ ತಮ್ಮ ತಪ್ಪಿನ ಅರಿವಾಗಬಹುದು. ನೀವು ಪ್ರತಿ ಟೀಕೆ ಮಾಡಿದಾಗ ಅದು ಜಗಳಕ್ಕೆ ಕಾರಣವಾಗಬಹುದು. ಕೆಲವು ಟೀಕೆಗಳನ್ನು ಉದಾಸೀನ ಮಾಡುವುದೇ ಲೇಸು.

 • ರಾಹುಲ್ ಗಾಂಧಿ ಅವರೇ, ಸತ್ಯದ ನೆತ್ತಿ ಮೇಲೆ ಹೊಡೆದಂತೆ ಹಸಿಹಸಿ ಸುಳ್ಳು ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬಂತು?

  ನೂರೆಂಟು ನೋಟ- ವಿಶ್ವೇಶ್ವರ ಭಟ್ ಈ ವಿಷಯ ಮರೆತು ಹೋಗಿರಲಿಲ್ಲ. ಅದು ಮೂವತ್ತು ವರ್ಷಗಳ ಹಿಂದಿನ ಘಟನೆಯಾಗಿದ್ದಿರಬಹುದು. ಆದರೆ ಮೊನ್ನೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು’ಟೈಮ್ಸ್‌ನೌ’ ಟಿವಿ ಚಾನೆಲ್ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ನೀಡಿದ ತಮ್ಮ ಜೀವನದ ಪ್ರಪ್ರಥಮ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಇದನ್ನು ಇಲ್ಲಿ ಚರ್ಚಿಸಬೇಕಿದೆ. ಅಷ್ಟಕ್ಕೂ ಈ ವಿಷಯವೇನೆಂದರೆ, 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಯಿತಲ್ಲ, ಆನಂತರ ಸಂಭವಿಸಿದ ಸಿಖ್ ನರಮೇಧ. ಈ ವಿಷಯವನ್ನು […]

 • ಬೆಕ್ಕು ಅಡ್ಡಬಂದರೆ ಅಪಶಕುನ ಎನ್ನುವ ಜನರೇ ಮನೆಯಲ್ಲಿ ಬೆಕ್ಕು ಸಾಕುವುದೇಕೆ?

  ಕೇಳ್ರಪ್ಪೋ ಕೇಳಿ * ವಿ. ಹೇಮಂತಕುಮಾರ, ಬೆಂಗಳೂರು, 9035992900 ಬೆಕ್ಕು ಅಡ್ಡಬಂದರೆ ಅಪಶಕುನ ಎನ್ನುವ ಜನರೇ ಮನೆಯಲ್ಲಿ ಬೆಕ್ಕು ಸಾಕುವುದೇಕೆ? ತಮಗಾಗದವರಿಗೆ ಅಡ್ಡ ಬರಲಿ ಅಂತ! * ಫ್ಯಾಷನ್ ಡಿಸೈನರ್ ಮಧು, 9945737427 ಹೆಣ್ಣಿಗೆ ಹೋಲಿಸಿದರೆ ಪ್ರೀತಿಯ ವಿಷಯದಲ್ಲಿ ಗಂಡು ಮೊದಲು ಸೋತು ಶರಣಾಗಿಬಿಡುತ್ತಾನಂತೆ? ಅದು ಬಿಟ್ಟು ಬೇರೆ ಆಯ್ಕೆಯೇ ಇಲ್ಲವಲ್ಲ! * ಕಾಳಿದಾಸ, ರಾಮಕೃಷ್ಣನಗರ, 9141852066 ಬಿಸಿಲಿಗೆ ಛತ್ರಿ ಹಿಡಿಯುವ ಹುಡುಗಿಯರು ಮಳೆಯಲ್ಲಿ ನೆನೆಯುತ್ತಾರಲ್ಲಾ? ಬಿಸಿಲಿಗೆ ಸೌಂದರ್ಯ ಕುಂದುತ್ತೆ. ಮಳೆಯಲ್ಲಿ ನೆನೆದರೆ ಸೌಂದರ್ಯ ಹೆಚ್ಚಾಗಿ ಕಾಣುತ್ತೆ. […]

 • ಸ್ಪೂರ್ತಿಸೆಲೆ – 29 ಜನೆವರಿ 2014

  ಸೌಂದರ್ಯದ ನಿಜವಾದ ಅರ್ಥ ಚೆನ್ನಾಗಿ ಕಾಣುವುದರಲ್ಲಿ ಇಲ್ಲ. ಇದು ನಿಮ್ಮ ಚಟುವಟಿಕೆ, ವರ್ತನೆ ಮತ್ತು ನೀವು ಮಾಡುವ ಕೆಲಸಗಳಿಂದ ನಿರ್ಧಾರವಾಗುತ್ತದೆ. ಹೀಗಾಗಿ ಬಾಹ್ಯ ಸೌಂದರ್ಯಕ್ಕಿಂತ ಹೆಚ್ಚಾಗಿ ಆಂತರಿಕ ಸೌಂದರ್ಯಕ್ಕೆ ಒತ್ತು ನೀಡಿ.

 • ವಕ್ರತುಂಡೋಕ್ತಿ – 29 ಜನೆವರಿ 2014

  ಎರಡು ಗ್ಲಾಸ್ ಬಿಯರ್ ಹೆಚ್ಚಾಗುತ್ತದೆ ಅನ್ನಿಸಿದರೆ ಅದಷ್ಟನ್ನು ಒಂದೇ ಗ್ಲಾಸಿಗೆ ಸುರುವಿಕೊಂಡು ಕುಡಿಯಬಹುದು.

 • ಭೈರಪ್ಪನವರ ಜನಪ್ರಿಯತೆ ನೋಡಿ ನಾಡಿಯವರಿಗೇಕೆ ಒಡಲುರಿ?

  ಕೇಳ್ರಪ್ಪೋ ಕೇಳಿ * ಕೆ.ಎಂ. ಲಿಂಗರಾಜು, ನಂಜನಗೂಡು, 9916021365 ಭೈರಪ್ಪನವರ ಜನಪ್ರಿಯತೆ ನೋಡಿ ನಾಡಿಯವರಿಗೇಕೆ ಒಡಲುರಿ? ಓದುಗರ ನಾಡಿಮಿಡಿತ ಅರಿಯದ್ದರ ಪರಿಣಾವಿದು! * ತಲವಾಟ ಮಂಜುನಾಥ, ಸಾಗರ, 9480931611 ನೀರಲ್ಲಿ ಮುಳುಗಿದರೆ ಉಸಿರು ಕಟ್ಟುತ್ತೆ. ಅದೇ ರಾಜಕೀಯದಲ್ಲಿ ಮುಳುಗಿದರೆ? ಅಲ್ಲೂ ಪಕ್ಷಾಂತರ ಮಾಡುವ ಮೊದಲು ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ಹೇಳುವುದನ್ನು ಕೇಳಬಹುದು. * ರವಿಕುಮಾರ ಜಿ.ಬಿ., 9449669897 ಗಂಡು ತಾಳಿಕಟ್ಟುವಾಗ ಹೆಣ್ಣು ತಲೆತಗ್ಗಿಸುವುದೇಕೆ? ತಾಳಿ ಹೇಗಿದೆ ಎಂದು ನೋಡಲು! * ಆಶಾ ಎಸ್. ಹುಣಸಘಟ್ಟ, […]

 • ಸ್ಪೂರ್ತಿಸೆಲೆ – 28 ಜನೆವರಿ 2014

  ಪ್ರತಿದಿನ ಏಳುವಾಗ ನಾನು ಅಂದುಕೊಂಡಿದ್ದನ್ನು ಈಡೇರಿಸಲು, ಸಾಧಿಸಲು ಇಪ್ಪತ್ನಾಲ್ಕು ಗಂಟೆಗಳಿವೆ ಎಂದು ಭಾವಿಸಿ ಕೆಲಸ ಆರಂಭಿಸಿ. ಸಮಯದ ಸದುಪಯೋಗವೂ ಆದೀತು. ಅಂದುಕೊಂಡಿದ್ದನ್ನು ಈಡೇರಿಸಲೂಬಹುದು. ಪ್ರಯತ್ನಿಸಿ.

 • ಅಪಸ್ವರ ಎತ್ತುವವರಲ್ಲಿ ನೀವೇ ಕೊನೆಯವರಾಗಿ

  ನನ್ನ ಐವತ್ಮೂರನೆ ಪುಸ್ತಕ – ನಿಮ್ಮಷ್ಟು ಸುಖಿ ಯಾರಿಲ್ಲ, ಅದೇಕೆ ನಿಮಗೆ ಗೊತ್ತಿಲ್ಲ ? – ಈಗ ಮಾರುಕಟ್ಟೆಯಲ್ಲಿ ಲಭ್ಯ. ಆ ಕೃತಿಯ ಒಂದು ಅಧ್ಯಾಯವನ್ನು ನಿಮಗಾಗಿ ಇಲ್ಲಿ ಕೊಡುತ್ತಿದ್ದೇನೆ. ಮಾತೆತ್ತಿದರೆ ನಕಾರಾತ್ಮಕವಾಗಿ ಮಾತಾಡುವುದು ಒಂದು ಕಾಯಿಲೆ. ಕೆಲವರಿಗೆ ಇದೊಂದು ವಾಸಿಪಡಿಸಲಾಗದ ಕಾಯಿಲೆ. ಅವರು ಪ್ರತಿಯೊಂದರಲ್ಲೂ ಹುಳುಕು ಹುಡುಕುತ್ತಾರೆ. ನೀವು ಚಂದ್ರನನ್ನು ತೋರಿಸಿ, ಅವರು ಚಂದ್ರನೊಳಗಿರುವ ಕಪ್ಪು ಕಲೆಯನ್ನು ಎತ್ತಿ ತೋರಿಸುತ್ತಾರೆ. ಗುಲಾಬಿ ಹೂವನ್ನು ತೋರಿಸಿ, ಅದರ ಮುಳ್ಳು ಚುಚ್ಚುತ್ತದೆ ಎಂದು ಹೇಳುತ್ತಾರೆ. ಜಿಲೇಬಿ ಬಹಳ ಚೆನ್ನಾಗಿದೆ […]