ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for December, 2013

 • ಈ ಕೃತಿ ನಮ್ಮ ಬದುಕಿನ ಪ್ರತಿಬಿಂಬವೂ ಹೌದು !

  ಈ ಪುಸ್ತಕದ ಕುರಿತು ವ್ಯಕ್ತಿಯೊಬ್ಬ ವೃತ್ತಿಯಿಂದ ಲೇಖಕನಾಗಿದ್ದರೆ ಆತ ಪುಸ್ತಕ ಬರೆಯುತ್ತಾನೆ ಎಂದು ನಿರೀಕ್ಷಿಸಬಹುದು. ಆದರೆ ನನಗೆ ಯಾವತ್ತೂ ಕಥಾವಸ್ತುವೆಂಬುದು ಇರಲಿಲ್ಲ. ನಾನು ರಚಿಸಬಹುದಾದ ಯಾವುದೇ ಕಾಲ್ಪನಿಕ ಕಥಾನಕವೂ ಇರಲಿಲ್ಲ. ಹಾಗೆಂದು ನನ್ನ ಜೀವನದಲ್ಲಿ ಯಾವುದೇ ಅತ್ಯಾಸಕ್ತಿ ಕೆರಳಿಸುವ ಕತೆಯೂ ಇರಲಿಲ್ಲ. ಹೀಗಾಗಿ ನಾನು ಪುಸ್ತಕ ಬರೆಯುವ ಗೋಜಿಗೆ ಹೋಗಲಿಲ್ಲ. ನಾನು ಅನುಭವಿಸಿರುವುದು ಮಾತ್ರ ನನಗೆ ಗೊತ್ತ್ತಿದೆ ಅಷ್ಟೇ. ನೀವು ಓದಿರುವುದೆಲ್ಲವನ್ನೂ ನಾನು ಅನುಭವಿಸಿದ್ದೇನೆ. ಈ ಪುಸ್ತಕದ ಬಗ್ಗೆ ನನಗೆ ಹೇಳಲಿಕ್ಕಿರುವುದು ಕೇವಲ ಇಷ್ಟೇನೆ. ************ ಮೂಲ […]

 • ಹೊಸ ವರ್ಷಕ್ಕೆ ಮುನ್ನ ಮತ್ತೊಂದು ಹೊಸ ಕೃತಿ !

  ಪುನಃ ಮತ್ತೊಂದು ಮರಿ ಹಾಕಿದ್ದೇನೆ ! ಹೊಸ ವರ್ಷಕ್ಕೆ ಇನ್ನು ನಾಲ್ಕು ದಿನಗಳಿವೆ. ನನ್ನ ಮತ್ತೊಂದು ಪುಸ್ತಕ ಪ್ರಿಂಟಿಂಗ್ ಪ್ರೆಸ್ ನಿಂದ ಈಗ ತಾನೆ ಘಮಘಮ ವಾಸನೆಯೊಂದಿಗೆ ಹೊರ ಬಂದಿದೆ. ಪ್ರಾಯಶಃ ಶುಕ್ರವಾರದ ಸಾಯಂಕಲದ ಹೊತ್ತಿಗೆ ಈ ಪುಸ್ತಕ ಅಂಗಡಿಗಳಲ್ಲಿ ನಿಮಗೆ ಸಿಗಬಹುದು. ಅಂದ ಹಾಗೆ ಈ ಕೃತಿಯ ಹೆಸರು – ಪ್ರದಕ್ಷಿಣ ಆಫ್ರಿಕಾ. ನನ್ನ ದಕ್ಷಿಣ ಆಫ್ರಿಕಾ ಪ್ರವಾಸದ ಅನುಭವ ಕಥನ. ಇಪ್ಪತ್ತೈದು ದಿನಗಳ ಕಾಲ ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಪ್ರಕಟವಾಗಿತ್ತು. ಅದನ್ನೇ […]

 • ಸ್ಪೂರ್ತಿಸೆಲೆ – 26 ಡಿಸೆಂಬರ್ 2013

  ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ. ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದು ಹೋದ ಬಳಿಕ. ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸಬೇಕು.

 • ವಕ್ರತುಂಡೋಕ್ತಿ – 26 ಡಿಸೆಂಬರ್ 2013

  ಕಾಲೇಜಿನ ಮುಂದೆ ಹುಡುಗಿಗೆ ಪ್ರಪೋಸ್ ಮಾಡುವುದು ಸಭ್ಯತೆ. ದೇವಸ್ಥಾನದ ಮುಂದೆ ಹಾಗೆ ಮಾಡುವುದು ಸಂಸ್ಕೃತಿ. ಹುಡುಗಿಯ ಮನೆಯ ಮುಂದೆ ಹಾಗೆ ಮಾಡುವುದು ಧಿಮಾಕು. ಗಂಡನ ಮುಂದೆ ಮಾಡಿದರೆ ಎದೆಗಾರಿಕೆ.

 • ಕಾಮನ್ಸೆನ್ಸ್ ಪಕ್ಕಕ್ಕಿಟ್ಟು ನಿಯಮ ಪಾಲಿಸಿದಾಗ…

  ನಂಗೆ ಇಷ್ಟಾನೋ!- ವಿಶ್ವೇಶ್ವರ ಭಟ್ ಸಾಮಾನ್ಯವಾಗಿ ನಾವು ಒಂದು ಜೋಕಿಗೆ ಒಂದು ಸಲ ನಗುತ್ತೇವೆ. ಆದರೆ ಕೆಲವರು ಎರಡು ಸಲ ನಗುತ್ತಾರೆ. ಜೋಕನ್ನು ಹೇಳಿದಾಗ (ಅರ್ಥವಾಗಲಿ, ಅರ್ಥವಾಗದಿರಲಿ) ಮೊದಲ ಸಲ ನಗುತ್ತಾರೆ ಹಾಗೂ ಜೋಕು ಅರ್ಥವಾದಾಗ ಎರಡನೆ ಸಲ ನಗುತ್ತಾರೆ-ಇನ್ನು ಕೆಲವರು ನೆನಪಿಸಿಕೊಂಡಾಗಲೆಲ್ಲ ಮೂರನೆ, ನಾಲ್ಕನೆ ಸಲ ನಗುವುದೂ ಉಂಟು. ಇದು ತಮಾಷೆಯಲ್ಲ. ಕೆಲವರು ಅದೆಷ್ಟು ಕಟ್ಟುನಿಟ್ಟಿನ ವ್ಯಕ್ತಿಗಳೆಂದರೆ ಅವರು ನಿಯಮವನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲ. ನೂರಕ್ಕೆ ನೂರು ನಿಯಮ ಪಾಲಿಸುತ್ತಾರೆ. ತಮ್ಮ ಕಾಮನ್‌ಸೆನ್ಸ್‌ನ್ನು ಪಕ್ಕಕ್ಕೆ ಇಟ್ಟು ನಿಯಮಗಳನ್ನು […]

 • ಆಸ್ಕರ್, ಮೊಯ್ಲಿ ಶಿರಾಡಿಘಾಟ್ನಲ್ಲಿ ಪ್ರಯಾಣಿಸಿದರೆ ಬೆಟ್ಸ್!

  ನೂರೆಂಟು ನೋಟ- ವಿಶ್ವೇಶ್ವರ ಭಟ್ ನಾನು ಕುಣಿಗಲ್ಲನ್ನು ದಾಟಿದ್ದೆ. ಸ್ನೇಹಿತರಾದ ಟಿ.ಎನ್. ಸೀತಾರಾಮ್ಗೆ ಫೋನ್ ಮಾಡಿದೆ. ತಾವು ಮೂಡಿಗೆರೆ ಸಮೀಪ ಇರುವುದಾಗಿ ತಿಳಿಸಿದರು. ‘ಮಂಗಳೂರಿಗೆ ಹೋಗಬೇಕಾದ ನೀವು, ಅಲ್ಲಿ ಯಾಕೆ ಇದ್ದೀರಿ?’ ಎಂದು ಕೇಳಿದೆ. ‘ಅಯ್ಯೋ, ಸಕಲೇಶಪುರದ ಮಾರ್ಗ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ನೀವು ಆ ಮಾರ್ಗದಲ್ಲಿ ಬರಲೇಬೇಡಿ. ಸ್ವಲ್ಪ ಸುತ್ತಾದರೂ ಪರವಾಗಿಲ್ಲವೆಂದು ಈ ಮಾರ್ಗದಲ್ಲಿ ಹೋಗುತ್ತಿದ್ದೇನೆ’ ಎಂದರು. ನಾವಿಬ್ಬರೂ ಮಂಗಳೂರಿಗೆ ಹೋಗಿ, ಮರುದಿನ ಮೂಡಬಿದ್ರಿಯಲ್ಲಿ ನಡೆಯುತ್ತಿದ್ದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ‘ಮಾಧ್ಯಮ’ ಗೋಷ್ಠಿಯಲ್ಲಿ ಪಾಲ್ಗೊಳ್ಳುವವರಿದ್ದೆವು. ಆಗಲೇ […]

 • ಪ್ರಖ್ಯಾತ ನಟಿಯೊಬ್ಬಳು ಎಲ್ಲಾ ಹೆಂಗಸರಂತೆ ಬಸಿರಾದರೆ ಯಾಕೆ ದೊಡ್ಡ ಸುದ್ದಿಯಾಗುತ್ತೆ?

  ಕೇಳ್ರಪ್ಪೋ ಕೇಳಿ * ಸಿ.ನಾಗರಾಜ, ಅರದೋಟ್ಲು, ಭದ್ರಾವತಿ ಪ್ರಖ್ಯಾತ ನಟಿಯೊಬ್ಬಳು ಎಲ್ಲಾ ಹೆಂಗಸರಂತೆ ಬಸಿರಾದರೆ ಯಾಕೆ ದೊಡ್ಡ ಸುದ್ದಿಯಾಗುತ್ತೆ? ಒಮ್ಮೆ ಖ್ಯಾತಿ ಗಳಿಸಿದ ಮೇಲೆ ಯಾವತ್ತೂ ಎಲ್ಲಾ ಹೆಂಗಸರಂತೆ ಆಗುವುದು ಸಾಧ್ಯವಿಲ್ಲ. * ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 990739725 ಪ್ರೇಯಸಿಗಾಗಿ ಕಾಯೋದ್ರಲ್ಲಿ ಸಿಗುವ ಸುಖ, ತಾಳ್ಮೆ, ಮಜ ಬಸ್ಸಿಗಾಗಿ ಕಾಯೋದ್ರಲ್ಲಿ ಸಿಗೋದಿಲ್ವಲ್ಲ? ಬಸ್ಸಿಗೆ ಕಾದರೆ ಹೆಚ್ಚೆಂದರೆ ಸಿಗೋದು ಬರೀ ಸೀಟು. ಪ್ರೇಯಸಿಗಾಗಿ ಕಾದರೆ ಸಿಗೋದು ತುಟಿಯ ಸ್ವೀಟು! * ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ ಐಟಂ ಸಾಂಗ್‌ಗೂ ಆಟಂಬಾಂಬಿಗೂ […]

 • ಸ್ಪೂರ್ತಿಸೆಲೆ – 20 ಡಿಸೆಂಬರ್ 2013

  ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು, ಮುಂದಿನ ಜೀವನದ ಬಗ್ಗೆ ಗಮನಹರಿಸಿ.

 • ವಕ್ರತುಂಡೋಕ್ತಿ – 20 ಡಿಸೆಂಬರ್ 2013

  ದಾಂಪತ್ಯ ಅನ್ನುವುದು ಗಾಯವಿದ್ದಂತೆ, ಅದಕ್ಕೇ ಮದುವೆ ಮಾಡುವಾಗ ಅರಿಶಿಣ ಹಚ್ಚುವುದು!

 • ನನ್ನ ನೂತನ ಕೃತಿ ‘ಅಷ್ಟಕ್ಕೂ ನಾ ಹೇಳೋದು ಇಷ್ಟು!’ ಬಿಡುಗಡೆ

  ಮತ್ತೊಂದು ಮರಿ ಹಾಕಿದ್ದೇನೆ. ಮೊನ್ನೆಯಷ್ಟೇ ‘ನೂರೆಂಟು ಮಾತು ಭಾಗ – ಏಳು ಬುಡುಗಡೆಯಾಗಿತ್ತು. ಎರಡು ದಿನಗಳ ಅವಧಿಯಲ್ಲಿ ಇನ್ನೊಂದು ಪುಸ್ತಕ ಮಾರುಕಟ್ಟೆಯಲ್ಲಿದೆ. ಮೂರು ವರ್ಷಗಳಿಂದ ನನ್ನ ಯಾವ ಪುಸ್ತಕಗಳೂ ಬಂದಿರಲಿಲ್ಲ. ಹಾಗಂತ ನನ್ನ ಬರಹಗಳ್ಯಾವವೂ ನಿಂತಿರಲಿಲ್ಲ. ಆದರೆ ಅವುಗಳನ್ನೆಲ್ಲ ಪುಸ್ತಕ ರೂಪದಲ್ಲಿ ತಂದಿರಲಿಲ್ಲ.ಕೆಲವರಂತೂ ಈ ಬಗ್ಗೆ ನನಗೆ ಹೇಳಿ ಹೇಳಿ ನನ್ನೊಂದಿಗೆ ಈ ವಿಚಾರ ಮಾತಾಡುವುದನ್ನೇ ನಿಲ್ಲಿಸಿದರು. ಈಗ ಮುಯ್ಯಿ ತೀರಿಸಿಕೊಳ್ಳುವವನಂತೆ ದಂಡಿಯಾಗಿ ಪುಸ್ತಕಗಳನ್ನು ಹೊರತರುತ್ತಿದ್ದೇನೆ. ಅಂದ ಹಾಗೆ ಇದು ನಾನು ಬರೆದ ಐವತ್ತೊಂದನೆ ಪುಸ್ತಕ ! […]