ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for November, 2013

 • ಪಿಕ್ ಪಾಕೆಟ್ – 29 ನವೆಂಬರ್ 2013

 • jaaheeraaytu – 29 ನವೆಂಬರ್ 2013

 • ಕಾವಿ ತೊಟ್ಟವರೂ ಕ್ಯಾಬರೆ ಹಾಡಿಗೆ ಡ್ಯಾನ್ಸ್ ಮಾಡಿದರೆ?

  ಕೇಳ್ರಪ್ಪೋ ಕೇಳಿ * ಓಂ ಚೆನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ 9900739725 ಕಾವಿ ತೊಟ್ಟವರೂ ಕ್ಯಾಬರೆ ಹಾಡಿಗೆ ಡ್ಯಾನ್ಸ್ ಮಾಡಿದರೆ? ತಮ್ಮ ನಿಜ ಪರಿಚಯ ಹೇಳಿಕೊಂಡಂತಾಗುತ್ತೆ. * ಆರ್. ಮಧುಸೂಧನ್, 9945737427 ಹೃದಯದ ಬಾಗಿಲನ್ನು ತಟ್ಟಿದ ಚೆಲುವೆ, ಬಾಗಿಲು ತೆರೆದಾಗ ಒಳಬರಲೇ ಇಲ್ಲವಲ್ಲ? ಬಾಗಿಲು ತಟ್ಟಿದವರೆಲ್ಲಾ ಒಳಬರುವ ಇರಾದೆ ಹೊಂದಿರುವುದಿಲ್ಲ. * ಚಿರಪ್ರಭೆ ನಂಜನಗೂಡು, 8553793107 ಖ್ಯಾತ ಅರ್ಥಶಾಸ್ತ್ರಜ್ಞರೇ ಪ್ರಧಾನಿಯಾಗಿದ್ದರೂ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಿದೆಯಲ್ಲಾ? ಅವರು ಅರ್ಥದ ಬಗ್ಗೆ ಯೋಚಿಸುವ ಹಂತ ದಾಟಿ ಮೋಕ್ಷದಲ್ಲಿ ಆಸಕ್ತಿ ಹೊಂದಿರಬಹುದು. […]

 • ಸ್ಪೂರ್ತಿಸೆಲೆ – 29 ನವೆಂಬರ್ 2013

  ಜೀವನದಲ್ಲಿ ಕಷ್ಟಗಳು ಎದುರಾಗದೆ ಬರೀ ಸುಖವೇ ಇರಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಸ್ವಲ್ಪವಾದರೂ ಮಳೆ ಬಂದ ಮೇಲಷ್ಟೇ ಕಾಮನಬಿಲ್ಲು ಕಾಣಲು ಸಾಧ್ಯ. ಹೀಗಾಗಿ ಎದುರಾಗುವ ಕಷ್ಟಕ್ಕೆ ಎದೆಗುಂದದೇ ಧೈರ್ಯದಿಂದ ಮುಂದೆ ಸಾಗಿದಲ್ಲಿ ನಲಿವು ಜೊತೆಯಲ್ಲೇ ಇರುತ್ತದೆ.

 • ವಕ್ರತುಂಡೋಕ್ತಿ – 29 ನವೆಂಬರ್ 2013

  ಅತ್ಯಾಕರ್ಷಕ ಡಿಸೈನ್‌ನ ಬಟ್ಟೆ ಹಾಕಿಕೊಂಡಿರುವ ಸುಂದರ ಯುವತಿಯನ್ನು ನೋಡಿದ ಹೆಚ್ಚಿನವರೆಲ್ಲ ಆ ಬಟ್ಟೆಯ ಹೊರತಾಗಿಯೇ ಕಲ್ಪಿಸಿಕೊಳ್ಳುತ್ತಾರೆ.

 • ಸ್ಪೂರ್ತಿಸೆಲೆ – 29 ನವೆಂಬರ್ 2013

  ಕೆಲವರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಶಕ್ತಿ, ಸಾಮರ್ಥ್ಯ ಇರುವುದಿಲ್ಲ. ಇಂಥವರು ಇನ್ನೊಬ್ಬರ ಕನಸುಗಳನ್ನು ನುಚ್ಚುನೂರು ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಇಂಥವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೇ ಹುಷಾರಾಗಿ ಇರುವುದು ಒಳಿತು.

 • ವಕ್ರತುಂಡೋಕ್ತಿ – 29 ನವೆಂಬರ್ 2013

  ಗಂಡ ಹೆಂಡತಿ ಒಟ್ಟಾಗಿ ಬೆಳಗ್ಗೆ ವಾಕಿಂಗ್ ಹೋಗುವ ಒಂದು ಅಪಾಯವೆಂದರೆ ಮನೆ ಜಗಳ ಬೀದಿಗೆ ಬರುವುದು.

 • ‘ಭಾರತ ರತ್ನ’ ಪಡೆಯುವ ಅರ್ಹತೆ ಅಟಲ್‌ಗಿಲ್ಲವೇ?

  ನೂರೆಂಟು ನೋಟ- ವಿಶ್ವೇಶ್ವರ ಭಟ್ ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ಅಟಲ್ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ‘ಅಟಲ್ ಗ್ರಾಮ್ ಸಡಕ್ ಯೋಜನಾ’ ಎಂದು ಹೆಸರಿಸಿ ಯೋಜನೆಯ ಕರಡನ್ನು ಮುಂದಿಟ್ಟಾಗ, ತಮ್ಮ ಹೆಸರನ್ನು ಕಾಟು ಹೊಡೆದು ‘ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನಾ’ ಎಂದು ತಿದ್ದಿದರು ಅಟಲ್! ಇಂಥ ವ್ಯಕ್ತಿಯ ವಿಷಯದಲ್ಲೂ ಚೌಕಾಶಿ ಮಾಡಬೇಕೆ? ಒಂದು ಸಣ್ಣ ವಿವಾದವಿಲ್ಲದೇ ‘ಭಾರತ ರತ್ನ’ದಂಥ ಅತ್ಯುನ್ನತ ಗೌರವ, ಪ್ರಶಸ್ತಿಯನ್ನು ಕೊಡಲು ನಮಗೆ ಆಗುವುದಿಲ್ಲವಲ್ಲ. […]

 • ಸ್ಪೂರ್ತಿಸೆಲೆ – 27 ನವೆಂಬರ್ 2013

  ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ. ಹೀಗಾಗಿ ನೀವು ಒಳ್ಳೆ ರೀತಿಯಲ್ಲಿ ಯೋಚಿಸಿದರೆ ಜಗತ್ತು ಒಳ್ಳೆಯದಾಗಿರುತ್ತದೆ. ಕೆಟ್ಟ ರೀತಿಯಲ್ಲಿ ಯೋಚಿಸಿದರೆ ಅದೂ ಕೆಟ್ಟದಾಗಿರುತ್ತದೆ.

 • ವಕ್ರತುಂಡೋಕ್ತಿ – 27 ನವೆಂಬರ್ 2013

  ಹೊಗಳಿದರೆ ಹೆಣ್ಣು ಖುಷಿಗೊಳ್ಳುತ್ತಾಳೆ. ಹಾಗಂತ, ನಿನ್ನ ಮೀಸೆ ಚೆನ್ನಾಗಿದೆ ಎಂದು ಹೊಗಳಬಾರದು, ಅದು ಎಷ್ಟೇ ದೊಡ್ಡದಿದ್ದರೂ.