ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for August, 2013

 • ರುಪಾಯಿ ಹಣೆಬರಹಕ್ಕೆ ಏನು ತಲೆಬರಹ?

  ನಲವತ್ತು ವರ್ಷ ನಿಂತು ಪಾಠ ಮಾಡಿದ ಶಿಕ್ಷಕ, ಸೇವೆಯುದ್ದಕ್ಕೂ ಸಾವಿರಾರು ಗಿಡಗಳನ್ನು ನೆಟ್ಟು ಸಂರಕ್ಷಿಸಿದ ಫಾರೆಸ್ಟ್ ಗಾರ್ಡ್, ನಾಲ್ಕು ದಶಕಗಳ ಕಾಲ ಕೆಲಸ ಮಾಡಿದ ರೈಲ್ವೆ ಸಿಗ್ನಲ್‌ಮನ್, ಮೂವತ್ತೈದು ವರ್ಷ ಬೆಂಗಳೂರಿನ ರಸ್ತೆ ಗುಡಿಸಿದ ಪೌರಕಾರ್ಮಿಕ ಮುಂತಾದವರು ನಿಧನರಾದಾಗ ಸುದ್ದಿಯೂ ಆಗುವುದಿಲ್ಲ. ಬಡಪಾಯಿ ರುಪಾಯಿ ಪ್ರತಿದಿನ ಬೀಳುತ್ತಲೇ ಇದೆ. ರುಪಾಯಿ ಡಾಲರ್, ಪೌಂಡ್, ಯುರೋ ಮುಂದೆ ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳಲಾಗದ ದೈನೇಸಿ ಸ್ಥಿತಿಯನ್ನು ತಲುಪಿದೆ. ಕೆಲದಿನಗಳ ಹಿಂದೆ ‘ವಕ್ರತುಂಡೋಕ್ತಿ’ಯಲ್ಲಿ ರುಪಾಯಿ ಪಾಡನ್ನು ನೆನೆದು ಹೀಗೆ ಬರೆದಿದ್ದೆ- ‘ಜೀವನದಲ್ಲಿ ತೀರಾ […]

 • ಬರೆಯುವ ಬದುಕಿನ ಬದುವು ಭಿನ್ನ, ಭಿನ್ನ!

  ಮೊನ್ನೆ ಭಾನುವಾರ ‘ದಿ ಹಿಂದು’ ಪತ್ರಿಕೆಯ ಮ್ಯಾಗಜಿನ್ ಪುರವಣಿಯಲ್ಲಿ ಖ್ಯಾತ ಕಾದಂಬರಿಕಾರ ಫ್ರೆಡೆರಿಕ್ ಫಾರ್ಸಿಥ್ ಅವರ ಸಂದರ್ಶನ ಓದುತ್ತಿದ್ದೆ. ಇಂಗ್ಲಿಷ್ ಕಾದಂಬರಿಗಳನ್ನು ಓದುವವರಿಗೆ ಫಾರ್ಸಿಥ್ ಚಿರಪರಿಚಿತ. ಸುಮಾರು ನಲವತ್ತೆರಡು ವರ್ಷಗಳ ಹಿಂದೆ, ಫಾರ್ಸಿಥ್ ಬರೆದ ‘ದಿ ಡೇ ಆಫ್ ದಿ ಜಾಕಲ್‌’ ಥ್ರಿಲ್ಲರ್ ಕಾದಂಬರಿ ಈಗಲೂ ಬೆಸ್ಟ್ ಸೆಲ್ಲರ್. ಫ್ರಾನ್ಸ್ ಅಧ್ಯಕ್ಷರಾಗಿದ್ದ ಚಾರ್ಲ್ಸ್ ಡಿಗಾಲ್ ಅವರ ಹತ್ಯೆಯನ್ನು ಬಣ್ಣಿಸುವ ಈ ಕಾಲ್ಪನಿಕ ಕಾದಂಬರಿ, ನಮ್ಮ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳಂತೆ, ಬಹಳ ಪ್ರಸಿದ್ಧವಾಗಿತ್ತು. ಈಗಲೂ ಈ ಪುಸ್ತಕ ವಿಶ್ವದಾದ್ಯಂತ […]

 • ನಮಗೂ ಲೀ ಅವರಂಥ ಪ್ರಧಾನಿ ಬರಲಿ!

  ಮೊನ್ನೆ ‘ನೂರೆಂಟು ನೋಟ’ ಅಂಕಣದಲ್ಲಿ ಸಿಂಗಾಪುರ ಪ್ರಧಾನಿ ಲೀ ಅವರು ತಮ್ಮ ದೇಶದ ಸ್ವಾತಂತ್ರ್ಯ ದಿನೋತ್ಸವದಂದು ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ್ದೆನಷ್ಟೆ. ಆ ಭಾಷಣವನ್ನು ಮೆಚ್ಚಿ ಹಲವು ಓದುಗರು ಪ್ರತಿಕ್ರಿಯಿಸಿದ್ದಾರೆ. ಗಮನಾರ್ಹ ಸಂಗತಿಯೇನೆಂದರೆ ಅದೇ ದಿನ ಅಂದರೆ ಅಂಕಣ ಪ್ರಕಟವಾದದ್ದು ಆಗಸ್ಟ್ 15ರಂದು ನಮ್ಮ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರ ಭಾಷಣ ಕೇಳಿ ಅವರೆಲ್ಲ ಪ್ರತಿಕ್ರಿಯಿಸಿದ್ದರು. ನಮ್ಮ ಪ್ರಧಾನಿ ಗ್ರೇಟ್ ಬೋರ್. ಅವರು ಮಾತುಗಾರರಲ್ಲ, ಅವರ ಮಾತಿನಲ್ಲಿ ಸತ್ವವೇ ಇರುವುದಿಲ್ಲ. ಪ್ರಧಾನಿಯೊಬ್ಬ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲಿಂದ […]

 • ಜಾಹೀರಾಯ್ತು – 23 ಆಗಸ್ಟ್ 2013

 • ಪಿಕ್ ಪಾಕೆಟ್ – 23 ಆಗಸ್ಟ್ 2013

 • ಸ್ಪೂರ್ತಿಸೆಲೆ – 23 ಆಗಸ್ಟ್ 2013

  ಒಬ್ಬರು ನಮ್ಮನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಅರಿತುಕೊಳ್ಳುವುದಕ್ಕೆ ವ್ಯತ್ಯಾಸ ಇದೆ. ಜೀವನದಲ್ಲಿ ನಮ್ಮ ಬಗ್ಗೆ ಅರ್ಥಮಾಡಿಕೊಂಡವರು ಬಹಳ ಜನ ಇರುತ್ತಾರೆ. ಆದರೆ ಅರಿತುಕೊಂಡವರ ಸಂಖ್ಯೆ ಬಹಳ ವಿರಳ.

 • ವಕ್ರತುಂಡೋಕ್ತಿ – 23 ಆಗಸ್ಟ್ 2013

  ನೀವು ಈಗಲೂ ಈರುಳ್ಳಿಯನ್ನು ಖರೀದಿಸಲು ಶಕ್ತರಾಗಿದ್ದರೆ, ಅದನ್ನು ಹೆಚ್ಚುವಾಗ ಬರುವ ಕಣ್ಣೀರನ್ನು ‘ಆನಂದಬಾಷ್ಪ’ ಎನ್ನಬಹುದು

 • ಯಶಸ್ಸು ಕಾಣೋಕೆ ಬೇಕಿರುವುದು ಒಳಗಣ್ಣು!

  ನಾಯಕತ್ವವೆನ್ನುವುದು ಅಂಟುರೋಗದಂತಿರಬೇಕು. ಅದನ್ನು ದೇಹದಿಂದ ದೇಹಕ್ಕೆ, ಜೀವದಿಂದ ಜೀವಕ್ಕೆ ತಗುಲಿಸಬೇಕು. ಎಲ್ಲರಲ್ಲೂ ಅದರ ಪೂರ್ಣ ಲಕ್ಷಣಗಳು ಕಾಣಿಸಿಕೊಳ್ಳಬೇಕು. ಆಗ ಮಾತ್ರ ಎಲ್ಲರೂ ಮಹಾನ್ ಕೆಲಸಗಳಿಗೆ ಮನಸ್ಸು ಮಾಡುತ್ತಾರೆ. ಕೆಲ ವಾರಗಳ ಹಿಂದೆ ಎರಿಕ್ ಎಂಬಾತನ ಬಗ್ಗೆ ಬರೆದಿದ್ದೆ. ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ವ್ಯಕ್ತಿ ಆತ. 2001ರ ಮೇನಲ್ಲಿ ಇಂಥದೊಂದು ವಿಕ್ರಮವನ್ನು ಸಾಧಿಸಿದ ಎರಿಕ್‌ನನ್ನು ಜಗತ್ತು ಬೆರಗು ಕಂಗಳಿಂದ ನೋಡಿತು. ಈ ಪ್ರಸಿದ್ಧಿಯ ನೆರಳಲ್ಲೇ ತನ್ನ ವ್ಯಕ್ತಿತ್ವ ಕಟ್ಟಿಕೊಂಡ ಎರಿಕ್. ಸ್ಕೈ ಡೈವರ್ ಆಗಿ, ಮ್ಯಾರಥಾನ್ […]

 • ಇಂಥ ಭಾಷಣವನ್ನು ಇಂದು ನಮ್ಮ ಪ್ರಧಾನಿಯೂ ಮಾಡಬಾರದಾ?

  ಹಿಂದಿನ ವಾರ ನಾನು ಸಿಂಗಾಪುರದಲ್ಲಿದ್ದೆ. ಅಲ್ಲಿಗೆ ಹೋಗದೆ ಎರಡು ವರ್ಷಗಳಾದವು. ನಾನು ಆ ಪುಟ್ಟ ದೇಶಕ್ಕೆ ಏನಿಲ್ಲವೆಂದರೂ ಹತ್ತಾರು ಸಲ ಹೋಗಿ ಬಂದಿರಬಹುದು. ಬೆಂಗಳೂರಿನಿಂದ ಕಾರಿನಲ್ಲಿ ಚಿತ್ರದುರ್ಗಕ್ಕೆ ಹೋಗುವಷ್ಟರಲ್ಲಿ, ವಿಮಾನದಲ್ಲಿ ಸಿಂಗಾಪುರಕ್ಕೆ ಹೋಗಬಹುದು. ಅಷ್ಟು ಹತ್ತಿರದಲ್ಲಿದೆ. ಮೊದಲ ಸಲ ಭೇಟಿ ನೀಡುವ ಪ್ರವಾಸಿಗರಿಗೆ ಸಿಂಗಾಪುರ ಒಂದಷ್ಟು ಬೆರಗು, ವಿಸ್ಮಯ, ಕುತೂಹಲವನ್ನು ಮೂಡಿಸುತ್ತದೆ. ಈ ಅನುಭವ ಎಲ್ಲ ಊರು, ದೇಶಗಳಿಗೆ ಹೋದಾಗಲೂ ಸಹಜವಾದರೂ, ಸಿಂಗಾಪುರ ಮತ್ತಷ್ಟು ಅಚ್ಚರಿ ಮೂಡಿಸಲು ಕಾರಣ ಅದರ ಕಿರಿದಾದ ಗಾತ್ರ. ಆ ಪುಟ್ಟ ದೇಶ […]

 • ಆ ಅಮರ ಪ್ರೇಮದೆದುರು ಸಾವು ನಿಂತಲ್ಲೇ ಸುಮ್ಮನಾಯಿತು!

  ಓದುಗರ ಬೇಡಿಕೆಗಳು ವಿಚಿತ್ರವಾಗಿರುತ್ತವೆ. ಕೆಲವನ್ನು ಈಡೇರಿಸಬಹುದು. ಇನ್ನು ಕೆಲವನ್ನು ಈಡೇರಿಸುವುದು ಕಷ್ಟ. ಇತ್ತೀಚೆಗೆ ಗಾಯತ್ರಿನಗರದ ಪ್ರಶಾಂತಕುಮಾರ ಮದುವೆಗೆ ಕರೆದಿದ್ದ. ಆತ ಮದುವೆಯಾಗಲಿರುವ ಹುಡುಗಿ ಪದ್ಮಾ ಪರಿಚಿತಳೇ. ಹಾಗಂತ ಅವಳನ್ನು ನಾನು ಭೇಟಿಯಾಗಿಲ್ಲ. ಬರೀ ಎಸ್ಸೆಮ್ಮೆಸ್‌ನಲ್ಲಿಯೇ ‘ಮುಖಾಮುಖಿ’ಯಾದವರು. ಪ್ರತಿದಿನ ಪತ್ರಿಕೆಯನ್ನು ಓದಿ ಪ್ರತಿಕ್ರಿಯಿಸುವ ಜಾಗೃತ ಓದುಗಳು. ಪ್ರಶಾಂತನೂ ಹಾಗೇ. ಇಬ್ಬರೂ ಬಂದು ಮದುವೆಗೆ ಕರೆದು ಹೋದರು. ಆದರೆ ಆ ದಿನ ನನಗೆ ಅವರ ಮದುವೆಯೆಂಬುದು ಮರೆತು ಹೋಗಿತ್ತು. ಪ್ರಶಾಂತ ಫೋನ್ ಮಾಡಿ, ‘ಸಾರ್, ನಮ್ಮ ಮದುವೆಗೆ ಬೇರೆ ಯಾರನ್ನೂ […]