ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for July, 2013

 • ಸ್ಪೂರ್ತಿಸೆಲೆ -31 ಜುಲೈ 2013

  ನಲವತ್ತು ದಿನ ಆಹಾರವಿಲ್ಲದೇ, ಮೂರು ದಿನ ನೀರಿಲ್ಲದೇ, ಎಂಟು ನಿಮಿಷ ಗಾಳಿಯಿಲ್ಲದೇ ಬದುಕಬಹುದು. ಆದರೆ ಆಸೆ, ಭರವಸೆ, ನಂಬಿಕೆಯಿಲ್ಲದೇ ಒಂದು ಕ್ಷಣ ಸಹ ಬದುಕಿರಲು ಸಾಧ್ಯವಿಲ್ಲ. ಹೀಗಾಗಿ ಜೀವನದಲ್ಲಿ ಎಂದೆಂದೂ ಆಸೆ, ಭರವಸೆಯನ್ನು ಕಳೆದುಕೊಳ್ಳಬೇಡಿ.

 • ವಕ್ರತುಂಡೋಕ್ತಿ – 31 ಜುಲೈ 2013

  ನಿಮ್ಮ ಕೈಬರಹ ಚೆನ್ನಾಗಿಲ್ಲದಿದ್ದರೆ ಹಾಗೂ ಈ ಜೀವನದಲ್ಲಿ ಸುಧಾರಿಸುವುದಿಲ್ಲ ಎಂದು ಮನವರಿಕೆಯಾದರೆ ನೀವು ಡಾಕ್ಟರ್ ಆಗಲು ನಿರ್ಧರಿಸಬಹುದು.

 • ಹೆಂಡತಿ ತನ್ನ ಬೇಡಿಕೆಗಳನ್ನು ಗಂಡನ ಬಳಿ ಊಟದ ಸಂದರ್ಭದಲ್ಲೇ ಹೇಳುವುದೇಕೆ?

  ಕೇಳ್ರಪ್ಪೋ ಕೇಳಿ * ವೇದಿಕೆಯಲ್ಲಿ ದೇವೇಗೌಡರು ಮಾಡುವ ನಿದ್ರೆಗೂ ಸಿದ್ದರಾಮಯ್ಯನವರು ಮಾಡುವ ನಿದ್ರೆಗೂ ವ್ಯತ್ಯಾಸವೇನು? ಒಬ್ಬರದ್ದು ರಾಷ್ಟ್ರಮಟ್ಟದ್ದು. ಇನ್ನೊಬ್ಬರದ್ದು ರಾಜ್ಯಮಟ್ಟದ್ದು. ವಿ. ಹೇಮಂತಕುಮಾರ, ಬೆಂಗಳೂರು, 9035992900 * ಫ್ಯಾಷನ್ ಡಿಸೈನರ್ ಮಧು, 9945737427 ಕೆಮಿಸ್ಟ್ರಿ- ಬಯಾಲಜಿ ಕಷ್ಟ ಎನ್ನುವ ವಿದ್ಯಾರ್ಥಿಗಳು ‘ಪ್ರೇಮಾಲಜಿ’ಯನ್ನು ಸುಲಭವಾಗಿ ಕಲಿಯುತ್ತಾರಲ್ಲ? ಅದು ಬಯಾಲಜಿಯ ಪ್ರಾಕ್ಟಿಕಲ್! * ಖುಷಿ ಕೆ. ಗೌಡ, ಕಲ್ಲಹಳ್ಳಿ, ಹಾಸನ, 8277551189 ಪ್ರೀತಿಸೋ ಹುಡುಗ ಹುಡುಗಿಯರು ಯಾವಾಗಲೂ ಮುತ್ತಿನ ಮತ್ತಿನಲ್ಲೇ ಇರುತ್ತಾರೆ. ಆದರೆ ಪ್ರೀತಿಸದೇ ಇರೋರ ಗತಿ ಏನು? ನೋಡಿ […]

 • ಇಂತಹ ತಪ್ಪುಗಳು ಕಂಡಾಗ ನಕ್ಕು ಸುಮ್ಮನಾಗಬಹುದಾದದ್ದಷ್ಟೇ ನಾವು ಮಾಡಬಹುದಾದ ಕೆಲಸ

  ತಪ್ಪಾಯ್ತು ತಿದ್ಕೋತೀವಿ ಬೆಂಗಳೂರಿನ ರಾಜಾಜಿನಗರದಿಂದ ನಾಗೇಶ್ ಎಂಬುವರು ಬರೆಯುತ್ತಾರೆ- ‘ಜು.24ರಂದು ‘ಬೈಟು ಕಾಫಿ’ಯ ಕೊನೆಯ ಪುಟದ ‘ಟಾಪ್ಗೇರ್’ ವಿಭಾಗದಲ್ಲಿ ಒಂದು ಸುದ್ದಿ ಓದಿ ಅಚ್ಚರಿಯಾಯಿತು. ‘ವೆಸ್ಪಾ ವಿಕ್ಸ್’ ಎಂಬ ಶೀರ್ಷಿಕೆಯಲ್ಲಿ ವೆಸ್ಪಾ ಕಂಪನಿಯ ಹೊಸ ಸ್ಕೂಟರ್ ಕುರಿತು ಸುದ್ದಿ ಪ್ರಕಟಿಸಿದ್ದೀರಿ. ಹೆಸರು ಓದಿ ಅಚ್ಚರಿಯಾಯಿತು.’ ‘ವೆಸ್ಪಾ ಸಂಸ್ಥೆಯವರು ಕೇವಲ ತಲೆನೋವು ಇರುವವರಿಗಾಗಿ ಮಾತ್ರ ವಿಶೇಷವಾಗಿ ‘ವೆಸ್ಪಾ ವಿಕ್ಸ್’ ಮಾದರಿಯ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೇನೋ ಅಂದುಕೊಂಡೆ. ಆಸಕ್ತಿಯಿಂದ ಸುದ್ದಿ ಓದಿದರೆ, ಸುದ್ದಿಯಲ್ಲಿ ಎಲ್ಲೂ ಇದರ ಪ್ರಸ್ತಾಪವೇ ಇಲ್ಲ. […]

 • ವಕ್ರತುಂಡೋಕ್ತಿ – 30 ಜುಲೈ 2013

  ಕೆಲವರ ಮನೆ ನಾಯಿ ಎಷ್ಟು ಚೆನ್ನಾಗಿ ಮನೆ ಕಾಯುತ್ತದೆ ಅಂದ್ರೆ ಕಳ್ಳರು ಬಂದಾಗ ಅದನ್ನು ಎಬ್ಬಿಸಿದರೆ ಸಾಕು. ಗಟ್ಟಿಯಾಗಿ ಬೊಗಳುತ್ತದೆ.

 • ಸ್ಪೂರ್ತಿಸೆಲೆ – 30 ಜುಲೈ 2013

  ನೀವು ಯಾರನ್ನಾದರೂ ದ್ವೇಷಿಸಿದರೆ, ಅದರಿಂದ ಅವರಿಗೆ ನೋವಾಗುವುದಿಲ್ಲ. ನೋವಾಗುವುದಿದ್ದರೆ ನಿಮಗೆ. ದ್ವೇಷವೆಂಬ ಭಾರವನ್ನು ಸದಾ ಹೊತ್ತುಕೊಂಡಿರುತ್ತೀರಿ. ಅದರಿಂದ ನಿಮಗೇ ಹಾನಿ. ಆ ಭಾರದಿಂದ ಯಾವತ್ತೂ ಮುಕ್ತರಾಗಿರಿ.

 • ಪ್ರೀತಿ ಮಾಡಲು ಲೈಸೆನ್ಸ್ ಮಾಡುವಂತಿದ್ದರೆ?

  ಕೇಳ್ರಪ್ಪೋ ಕೇಳಿ * ತುಟಿಯಂಚಿನಲ್ಲಿ ನಕ್ಕು ಕಣ್‌ನೋಟದಲ್ಲೇ ಕೊಲ್ಲುತ್ತಿದ್ದಾಳೆ ಏನು ಮಾಡಲಿ? ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸು. * ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9008741348 ಹೆಂಡತಿ ಕೊಡೋ ಮಿಸ್ ಕಾಲ್‌ಗೂ ಪ್ರೇಯಸಿ ಕೊಡೋ ಮಿಸ್‌ಕಾಲ್‌ಗೂ ಏನು ವ್ಯತ್ಯಾಸ? ಎದೆ ಜುಂ ಎನ್ನುವುದಕ್ಕೂ ಝಲ್ ಎನ್ನುವುದಕ್ಕೂ ಇರುವಷ್ಟೇ! * ಪ್ರಮೋದ್‌ಕುಮಾರ್ ನೋಬೋನಗರ್, ಬೆಂಗಳೂರು ಪ್ರತ್ಯಕ್ಷಗೊಂಡ ದೇವರೆಲ್ಲ ಯಾವ ‘ವರ’ ಬೇಕು ಅಂತ ಕೇಳ್ತಾರೆ ಹೊರತು, ಯಾವ ‘ವಧು’ ಬೇಕು ಅಂತ ಕೇಳುವುದಿಲ್ಲ ಏಕೆ? ಸದ್ಯ ‘ವಧು’ಗಳ […]

 • ಸ್ಪೂರ್ತಿಸೆಲೆ – 27 ಜುಲೈ 2013

  ಒಂದು ಘಟನೆ ಹೇಗೆ ನಡೆಯಿತು ಎಂಬುದು ಮುಖ್ಯ ಅಲ್ಲ. ಆ ಘಟನೆಗೆ ನಾವು ಹೇಗೆ ಪ್ರತಿಕ್ರಿಯಿಸಿದ್ದೇವೆ ಎಂಬುದು ಬಹಳ ಮುಖ್ಯ. ಹಲವು ಸಲ ಕ್ರಿಯೆಗಿಂತ ಪ್ರತಿಕ್ರಿಯೆಯೇ ಜೋರಾಗಿರುತ್ತದೆ. ನಮ್ಮ ಪ್ರತಿಕ್ರಿಯೆ ಸದಾ ಕ್ರಿಯೆಗಿಂತಲೂ ಭಯಂಕರವಾಗಿರಬಾರದು.

 • ವಕ್ರತುಂಡೋಕ್ತಿ – 27 ಜುಲೈ 2013

  ಲಾಯರ್‌ಗಳ ಮಾತು ಡಾಕ್ಟರ್‌ಗಳ ಬರವಣಿಗೆ ರೀತಿಯೇ ಇರುತ್ತದೆ.

 • ವಕ್ರತುಂಡೋಕ್ತಿ ತಂದ ಸಂಕಟ, ಪೀಕಲಾಟ

  ರಜಾ ದಿನಗಳನ್ನು ಹೊರತುಪಡಿಸಿ, ಒಂದು ದಿನವೂ ಬಿಡದೇ, ಕಳೆದ ಹದಿಮೂರು ವರ್ಷಗಳಿಂದ, ನಿತ್ಯವೂ ನಾನು ವಕ್ರತುಂಡೋಕ್ತಿ ಬರೆಯುತ್ತಿದ್ದೇನೆ. ಒಂದು ಅಥವಾ ಎರಡು ಸಾಲಿನ ಈ ಪುಟ್ಟ ವಾಕ್ಯವನ್ನು ಬರೆಯಲು ಒಮ್ಮೊಮ್ಮೆ ಅರ್ಧಗಂಟೆಗೂ ಹೆಚ್ಚು ಕಾಲ ಯೋಚಿಸಿದ್ದುಂಟು. ಒಮ್ಮೊಮ್ಮೆ, ಅಂಕಣ ಬರೆಯುವುದು ಸುಲಭ, ಆದರೆ ಒಂದು ಹಾಗೂ ಮತ್ತೊಂದರ ಸಾಲಿನ ವಕ್ರತುಂಡೋಕ್ತಿ ಬರೆಯುವುದು ಕಠಿಣ ಎಂದು ಅನಿಸಿದ್ದುಂಟು. ಯಾಕೆಂದರೆ ಒಂದು ಅಥವಾ ಎರಡು ಸಾಲುಗಳಲ್ಲಿ ಒಂದು ಮಿಂಚು, ಕಿರುನಗೆ, ತಿಳಿಹಾಸ್ಯ, ಸಣ್ಣನಗೆ, ದೊಡ್ಡ ಬೋರ್ಗರೆತದ ನಗುವನ್ನು ಕಟ್ಟಿಕೊಡುವುದು ಸಣ್ಣ […]