ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for May, 2013

 • ಪಿಕ್ ಪಾಕೆಟ್ – 05 ಏಪ್ರಿಲ್ 2013

 • ಜಾಹೀರಾಯ್ತು – ಏಪ್ರಿಲ್

 • ವಕ್ರತುಂಡೋಕ್ತಿ

  ಹುಡುಗರೇ ಡ್ರೆಸ್ ವಿಷಯದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ಸಂದರ್ಶನಕ್ಕೆ ಹೋದಾಗ ಶರ್ಟಿನ ಗುಂಡಿಗಳು ತೆಗೆದುಕೊಂಡಿದ್ದರೆ ಅಶಿಸ್ತು ಎಂದು ಪರಿಗಣಿಸಲಾಗುತ್ತದೆ. ಹುಡುಗಿಗಾದರೆ ಅದೇ ಕಾರಣಕ್ಕೆ ಕೆಲಸ ಸಿಕ್ಕೀತು.

 • ಸ್ಪೂರ್ತಿಸೆಲೆ

  ಸಂಬಂಧಗಳೆಂದರೆ ಗಾಜಿನ ಹಾಗೆ. ಜೀವನದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಅದನ್ನು ಮುರಿಯಲೇಬೇಕಾದ ಪರಿಸ್ಥಿತಿ ಉಂಟಾದರೆ ಅಂಥ ನಿರ್ಣಯ ಕೈಗೊಳ್ಳುವುದೇ ಉತ್ತಮ. ಏಕೆಂದರೆ ಒಡೆದ ಮನಸ್ಸುಗಳಿಂದ ನೋವು ಅನುಭವಿಸುವುದಕ್ಕಿಂತ ಅದು ಉತ್ತಮ ನಿರ್ಧಾರವಾಗುತ್ತದೆ.

 • ಚುಕ್ಕಿಗಳಂಥ ಮಿನುಗು ಕತೆಗಳಲ್ಲಿ ಆಗಸದಗಲ ನೀತಿ!

  ಜೀವನವೆಂಬುದು ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಬಿಸಿಲಿನ ಝಳದೊಂದಿಗೆ ಚುನಾವಣೆಯ ಕಾವೂ ಸೇರಿಕೊಂಡಿದೆ. ರಾಜಕಾರಣಿಗಳೆಲ್ಲ ನಿಮ್ಮ ಮನೆ ಬಾಗಿಲಲ್ಲಿ ಜಮಾಯಿಸಿ ತಮ್ಮ ತಮ್ಮ ಕತೆ ಹೇಳುವ, ಕನಸು ತೋರಿಸುವ ಸಮಯ. ಇವರದ್ದೆಲ್ಲಾ ಕತೆ ಯಾರಿಗೆ ಬೇಕಿದೆ ಎಂಬ ಪ್ರಶ್ನೆ ಥಟ್ಟನೆ ನಿಮ್ಮ ಮನದಲ್ಲಿ ಎದ್ದರೆ ಅದಕ್ಕೆ ನನ್ನ ಅನುಮೋದನೆಯೂ ಇದೆ. ಹಾಗೆಂದೇ ಇಲ್ಲಿ ಬೇರೆಯದೇ ಹರವಿನ ಮೂರು […]

 • ಹೇಳಿ, ಮತದಾರನೆದುರು ಅದ್ಯಾವ ಆಯ್ಕೆ ಇದೆ?

  ಈ ಸಲದ ಚುನಾವಣೆಯಲ್ಲಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲೆಂದು ನನ್ನ ಸಹೋದ್ಯೋಗಿ ಮಿತ್ರರು ಸೇರಿ ಒಂದು ನಿಮಿಷದ ಚಿತ್ರ ಮಾಡಿ ನನಗೆ ತೋರಿಸಿದರು. ತಳ್ಳುಗಾಡಿಯಲ್ಲಿ ತರಕಾರಿ ಮಾರುವವನ ಮುಂದೆ ಗೃಹಿಣಿಯೊಬ್ಬಳು ಚೌಕಾಶಿ ಮಾಡಿ ತರಕಾರಿ ಖರೀದಿಸುವ ದೃಶ್ಯ. ಆಕೆಗೆ ಯಾವ ತರಕಾರಿಯೂ ಇಷ್ಟವಾಗುವುದಿಲ್ಲ. ಇದು ಬಲಿತಿದೆ, ಇದು ಕೊಳೆತಿದೆ, ಇದಕ್ಕೆ ಇಷ್ಟೊಂದು ಬೆಲೆಯಾ, ಕಮ್ಮಿ ಕೊಡೊಲ್ವಾ, ಇಷ್ಟು ರೇಟಿಗೆ ಕೊಟ್ಟರೆ ಕೊಳ್ಳುತ್ತೇನೆ…ಎಂದೆಲ್ಲ ಆಕೆ ಚೌಕಾಶಿ ಮಾಡುತ್ತಿರುತ್ತಾಳೆ. ತರಕಾರಿಯವನ ಹಾಗೂ ಆ ಗೃಹಿಣಿಯ ಮಾತುಕತೆಯನ್ನು ಪಕ್ಕದಲ್ಲಿ ನಿಂತ […]