ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for April, 2013

 • ಒಂದೊಂದೇ ತುಣುಕು, ಭಾವಕೋಶಕ್ಕೆ ಗುಟುಕು

  ನಿಮ್ಮ ಜತೆ ಸದಾ ಒಂದು ಪುಟ್ಟ ನೋಟ್‌ಬುಕ್ ಇಟ್ಟುಕೊಳ್ಳಿ. ದಿನಾಲೂ ನಿಮಗೆ ಏನೇನೋ ಯೋಚನೆ, ಕಲ್ಪನೆ ಸರಿದು ಹೋಗುತ್ತಿರುತ್ತದೆ. ಅವುಗಳಲ್ಲಿ ನಿಮಗೆ ಇಷ್ಟವಾದುದನ್ನು ನೋಟ್ ಮಾಡಿಕೊಳ್ಳಿ. ಪುಸ್ತಕ ಓದುವಾಗ, ಸಿನಿಮಾ ನೋಡುವಾಗ, ಗೆಳೆಯರೊಂದಿಗೆ ಹರಟೆ ಮುಗಿಸಿದಾಗ, ಗಣ್ಯರನ್ನು ಭೇಟಿ ಮಾಡಿ ಬಂದ ನಂತರ, ಸೆಮಿನಾರ್ ಅಥವಾ ಕಾರ್ಯಕ್ರಮದಲ್ಲಿ ಭಾಷಣ ಕೇಳುವಾಗ ನಿಮಗೆ ಇಷ್ಟವಾದ ಸಂಗತಿ, ಸಾಲು, ಜೋಕು, ಕತೆ…ಹೀಗೆ ಎಲ್ಲವನ್ನೂ ನೋಟ್ಸ್ ಮಾಡಿಕೊಳ್ಳುತ್ತಾ ಹೋಗಬೇಕು. ಒಂದೆರಡು ವರ್ಷಗಳ ಬಳಿಕ ಸುಮ್ಮನೆ ತೆರೆದು ನೋಡಬೇಕು. ಎಂಥ ಮಜಾ ಆಗಿರುತ್ತದೆ […]

 • ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವವರಿಗೆ ನಿಮ್ಮ ಕಿವಿಮಾತು?

  ಕೇಳ್ರಪ್ಪೋ ಕೇಳಿ * ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಕೇಳುವಂಥವು ‘ಬದುಕು ಬದಲಿಸೋ ಪ್ರಶ್ನೆಗಳು’. ಕೇಳ್ರಪ್ಪೋ ಕೇಳಿಯಲ್ಲಿ..? – ಮಾಮೂಲಿ ಬದುಕಿಗೆ ಕೊಂಚ ಕಚಗುಳಿ ಇಡುವ ಪ್ರಶ್ನೆಗಳು. * ವಿಷ್ಣುಶಂಕರ್, ಶಿವಮೊಗ್ಗ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವವರಿಗೆ ನಿಮ್ಮ ಕಿವಿಮಾತು? – ಮಣ್ಣಾಗಿದ್ದರೂ ಪರವಾಗಿಲ್ಲ, ಡೆಟಾಲ್ ಸೋಪನ್ನೇ ಬಳಸಿ. ಇದು ಕೀಟಾಣುಗಳಿಂದ ಕೊಡುತ್ತೆ ಹಂಡ್ರೆಡ್ ಪರ್ಸೆಂಟ್ ಸುರಕ್ಷೆ! * ರಮೇಶ್ ಭಟ್ ಆವರ್ಸೆ, ಕುಂದಾಪುರ 9164276058 ಕಾಫಿ ಜತೆ ಹೆಂಡ್ತಿ ಸರೀನಾ ಅಥವಾ ಗರ್ಲ್‌ಫ್ರೆಂಡ್ ಸರೀನಾ? […]

 • ವಕ್ರತುಂಡೋಕ್ತಿ – 09 ಏಪ್ರಿಲ್ 2013

  ಪ್ರೀತಿಯನ್ನು ಹಣದಿಂದ ಕೊಳ್ಳಲಾಗುವುದಿಲ್ಲ ನಿಜ. ಆದರೆ ಅದಕ್ಕೆ ಬೆಲೆಯನ್ನಂತೂ ತೆರಬೇಕಾಗುತ್ತದೆ.

 • ಹೆಂಡತಿ ಕಳುಹಿಸಿದ ಎಸ್‌ಎಂಎಸ್‌ನ ಅರ್ಥವೇನು?

  ಒಂದು ಸೆಮಿನಾರ್‌ನಲ್ಲಿ ಹದಿನೈದಿಪ್ಪತ್ತು ಮಹಿಳೆಯರು ಸೇರಿ ಹರಟೆ ಹೊಡೆಯುತ್ತಿದ್ದರು. ಮಾತಿಗೆ ಮಾತು ಬೆಳೆದು ಅವರೆಲ್ಲ ಒಂದು ವಿಷಯದ ಬಗ್ಗೆ ಚರ್ಚಿಸಲಾರಂಭಿಸಿದರು. ಅದೇನೆಂದರೆ ತಮ್ಮ ತಮ್ಮ ಗಂಡಂದಿರ ಜತೆ ಪ್ರೀತಿಯಿಂದ ಸಂಸಾರ ಮಾಡೋದು ಹೇಗೆ? ಆ ಪೈಕಿ ಒಬ್ಬ ಮಹಿಳೆ ಜೋರು ದನಿಯಲ್ಲಿ, ‘ನಿಮ್ಮ ಪೈಕಿ ಎಷ್ಟು ಜನ ನಿಮ್ಮ ಗಂಡಂದಿರನ್ನು ಪ್ರೀತಿಸುತ್ತೀರಿ?’ ಎಂದು ಕೇಳಿದಳು. ಎಲ್ಲ ಮಹಿಳೆಯರೂ ಕೈ ಎತ್ತಿ ‘ನಾನು ನನ್ನ ಗಂಡನನ್ನು ಪ್ರೀತಿಸುತ್ತೇನೆ’ ಎಂದು ಗಟ್ಟಿದನಿಯಲ್ಲಿ ಹೇಳಿದರು. ಅದೇ ಮಹಿಳೆ ಕೇಳಿದಳು- ‘ಐ ಲವ್ […]