ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for March, 2013

 • ಸ್ಪೂರ್ತಿಸೆಲೆ – 16 ಮಾರ್ಚ್ 2013

  ಯಾವುದನ್ನೂ ಚಿಂತಿಸದೆ, ಹೆಚ್ಚು ಕೆಲಸ, ಕಡಿಮೆ ಬಯಕೆ, ಮೊಗದಲ್ಲಿ ಮುಗುಳ್ನಗು, ದೊಡ್ಡ ಕನಸುಗಳ ಮೂಲಕ ಉತ್ತಮ ಬದುಕು ಹೊಂದಿ. ಆಗ ನೀವೆಷ್ಟು ಅದೃಷ್ಟವಂತರೆಂದು ತಿಳಿಯುತ್ತದೆ.

 • ಸ್ಪೂರ್ತಿಸೆಲೆ – 17 ಮಾರ್ಚ್ 2013

  ಯಾವುದನ್ನೂ ಚಿಂತಿಸದೆ, ಹೆಚ್ಚು ಕೆಲಸ, ಕಡಿಮೆ ಬಯಕೆ, ಮೊಗದಲ್ಲಿ ಮುಗುಳ್ನಗು, ದೊಡ್ಡ ಕನಸುಗಳ ಮೂಲಕ ಉತ್ತಮ ಬದುಕು ಹೊಂದಿ. ಆಗ ನೀವೆಷ್ಟು ಅದೃಷ್ಟವಂತರೆಂದು ತಿಳಿಯುತ್ತದೆ.

 • ಜಾಹೀರಾಯ್ತು – 16 ಮಾರ್ಚ್ 2013

 • ಪಿಕ್ ಪಾಕೆಟ್ – 13 ಮಾರ್ಚ್ 2013

 • ವಕ್ರತುಂಡೋಕ್ತಿ – 16 ಮಾರ್ಚ್ 2013

  ಬಿಜಿನೆಸ್ ಮೀಟಿಂಗ್‌ಗಳ ಒಂದು ಲಾಭವೇನೆಂದರೆ, ಆ ಮೀಟಿಂಗ್‌ನಲ್ಲಿ ಭಾಗವಹಿಸಿದವರು ಇಲ್ಲದಿದ್ದರೂ ಕಂಪನಿ ಚೆನ್ನಾಗಿ ನಡೆಯುತ್ತದೆಂಬುದು ಗೊತ್ತಾಗುತ್ತದೆ.

 • ಎಲ್ಲ ಸಮಸ್ಯೆಗಳಿಗೂ ಪರಿಹಾರದ ಪಾಠ ಹೇಳುತ್ತದೆ ಪ್ರಕೃತಿ!

  Go back to nature! ಹಾಗಂತ ಹೇಳಿದವನು ಆಪಲ್ ಕಂಪ್ಯೂಟರ್ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ಸ್. ಸ್ಟೀವ್ ಜಾಬ್ಸ್‌ಗೆ ಬ್ಲಾಗರ್‌ನೊಬ್ಬ ‘ಜಗತ್ತಿನೆಲ್ಲೆಡೆ ನಿಮ್ಮ ಕಂಪನಿಯ ಕಂಪ್ಯೂಟರ್, ಐಫೋನ್, ಐಪಾಡ್, ಐಪಾಡ್ ಟಚ್ ಮುಂತಾದ ಉಪಕರಣಗಳೆಲ್ಲ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ. ಇವೆಲ್ಲವುಗಳನ್ನು ತಯಾರಿಸುವುದರಿಂದ ಪ್ರಕೃತಿ ಮೇಲೆ ಎಂಥ ಪರಿಣಾಮವಾಗಬಹುದು? ಈ ಉಪಕರಣಗಳನ್ನು ರೀಚಾರ್ಜ್ ಮಾಡಲು ಪ್ರತಿದಿನ ಎಷ್ಟು ಕರೆಂಟು ಬೇಕು? ಪರಿಸರದ ಮೇಲೆ ನೀವು ಎಂಥ ಆಕ್ರಮಣ ಮಾಡುತ್ತಿದ್ದೀರಿ ಎಂಬುದರ ಕಲ್ಪನೆ ನಿಮಗಿದೆಯಾ?’ ಎಂದು ಕೇಳಿದ್ದಕ್ಕೆ […]

 • ಬಿರುಗಾಳಿಯ ಆರ್ಭಟಕ್ಕೆ ಅವನೇಕೆ ಬೆದರಲಿಲ್ಲ?

  ಅವನಿಗೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಬೆಳಗಿನಿಂದ ದುಡಿಮೆಯಲ್ಲಿ ಮೈಮೆರೆತಿದ್ದ ಆತ, ಸಂಜೆಯಾಗುತ್ತಿದ್ದಂತೆಯೇ ಮನೆಗೆ ಹೊರಟ. ಜೊತೆಯಲ್ಲಿ ಹೆಂಡತಿಯೂ ಇದ್ದಳು. ಮನೆಗೆ ಮರಳುವ ದಾರಿಯಲ್ಲಿ, ಅವರು ನದಿಯೊಂದನ್ನು ದಾಟಬೇಕಿತ್ತು. ಇವರ ದುರದೃಷ್ಟಕ್ಕೆ ಅವತ್ತು ದೋಣಿ ನಡೆಸಲು ಅಂಬಿಗನೂ ಇರಲಿಲ್ಲ. ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸೇನೆಯಲ್ಲಿದ್ದು ಬಂದವನು. ಅವನಿಗೆ ಸೇನೆಯಲ್ಲಿದ್ದಾಗಲೇ ದೋಣಿ ಚಾಲನೆಯ ತರಬೇತಿ ಸಿಕ್ಕಿತ್ತು. ಅದೇನನ್ನೂ ಹೆಂಡತಿಗೆ ತಿಳಿಸದೆ, ‘ದೋಣಿ ಹತ್ಕೋ, ನಾನು ಕರ್ಕೊಂಡು ಹೋಗ್ತೇನೆ’ ಎಂದ. ಅರ್ಧ ನದಿಯನ್ನು ದಾಟುವ ಮೊದಲೇ ಭಾರೀ ಬಿರುಗಾಳಿ ಎದ್ದಿತು. […]

 • ಬೆಳಕು, ಬೆರಗಿನ ಸೂಕ್ತಿಗಳು…

  ಖಾಲಿ ಜೇಬಿನೊಂದಿಗೆ ನಡೆಯುತ್ತಾ ಹೋದರೆ, ಎದುರಾಗುವ ಒಂದೊಂದು ತಿರುವೂ ಒಂದೊಂದು ಪಾಠ ಹೇಳಿಕೊಡುತ್ತದೆ. ಜೇಬು ತುಂಬಿಸಿಕೊಂಡು ಹೊರಟವರಿಗೆ ಎದುರಾಗುವ ಪ್ರತಿ ತಿರುವೂ ದಾರಿ ತಪ್ಪಿಸುತ್ತದೆ. ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಮುಗಿದು ಹೋಗುವ ಸೂಕ್ತಿಗಳಿವು. ಒಂದರ್ಥದಲ್ಲಿ ಇವುಗಳನ್ನು ಮಾಡರ್ನ್ ಸುಭಾಷಿತಗಳು ಎನ್ನಬಹುದೇನೋ. ಇವೆಲ್ಲಾ ಫಾರ್ವರ್ಡ್ ಮೇಲ್‌ನ ರೂಪದಲ್ಲಿ ಬಂದಿರುವುದರಿಂದ ಇವುಗಳ ಮೂಲ ಲೇಖಕರು ಯಾರೆಂದು ಗೊತ್ತಿಲ್ಲ. ಸ್ವಾರಸ್ಯವೇನೆಂದರೆ, ಈ ಸೂಕ್ತಿಗಳಲ್ಲಿ ಬೆರಗಿದೆ, ಬೆಳಕಿದೆ. ಬುದ್ಧಿವಾದವಿದೆ. ಜೀವನ ದರ್ಶನವಿದೆ. ಮನುಷ್ಯ ಹೇಗೆ ಬದುಕಬೇಕು? ಯಾವ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ […]

 • ನೀರು ಉಳಿಸಲು ಇವರು ಮನೆ ಮನೆ ನಲ್ಲಿ ರಿಪೇರಿ ಮಾಡ್ತಾರೆ!

  ಅಬಿದ್ ಸುರತಿ ಎಂಬ ಹೆಸರನ್ನು ನೀವೆಲ್ಲ ಕೇಳಿರಬಹುದು. ಭಾರತ ಕಂಡ ಹೆಸರಾಂತ ಲೇಖಕರಲ್ಲಿ ಅಬಿದ್ ಸುರತಿ ಕೂಡ ಒಬ್ಬರು. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಸಣ್ಣ ಕಥೆಗಳು, ಕಾದಂಬರಿಗಳು, ನಾಟಕಗಳು, ಏಕಾಂಕಗಳನ್ನು ಬರೆದಿರುವುದು ಅಬಿದ್ ಸುರತಿಯವರ ಹೆಚ್ಚುಗಾರಿಕೆ. ಅವರ ಕೃತಿಗಳು, ಹತ್ತಕ್ಕೂ ಹೆಚ್ಚು ಭಾಷೆಗೆ ಅನುವಾದವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ, ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಜೊತೆಗೆ, ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ, ಗುಜರಾತ್ ಸರ್ಕಾರ ನೀಡುವ ಗುಜರಾತ್ ಗೌರವ್ ಪ್ರಶಸ್ತಿ ಕೂಡ ಅಬಿದ್ […]

 • ಸ್ಪೂರ್ತಿಸೆಲೆ – 04 ಮಾರ್ಚ್ 2013

  ಜೀವನದಲ್ಲಿ ಕಷ್ಟಗಳಿಗಿಂತ ಸುಖವೇ ಹೆಚ್ಚಿರುತ್ತದೆ. ನೋವಿಗಿಂತ ನಲಿವೇ ಜಾಸ್ತಿಯಿರುತ್ತದೆ. ಆದರೆ ಸಣ್ಣಪುಟ್ಟ ನೋವುಗಳು ಬಂದಾಗ ಬರಿದಾಯಿತೆಂಬಂತೆ ವರ್ತಿಸುತ್ತೇವೆ. ನಮ್ಮ ಆನಂದದ ಮೇಲೆ ನೋವುಗಳಿಗೆ ಸವಾರಿ ಮಾಡಲು ಬಿಡಬೇಡಿ.