ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for February, 2013

 • ಮಗನ ಸಾವಿನ ಪ್ರಶ್ನೆಗೆ, ದೇವರು ಕೊಟ್ಟ ಉತ್ತರ!

  ಮಗನನ್ನು ಆಸ್ಪತ್ರೆಗೆ ಸೇರಿಸಿ ಆಗಲೇ ತಿಂಗಳಾಗುತ್ತಾ ಬಂತು. ಡಾಕ್ಟರು ಖಡಕ್ಕಾಗಿ ಏನೂ ಹೇಳುತ್ತಿಲ್ಲ. ‘ಬಂದಿರುವ ಕಾಯಿಲೆ ಜ್ವರವೋ, ತಲೆನೋವೋ, ಕೀಲುನೋವೋ ಆಗಿದ್ದರೆ, ಇಂತಿಷ್ಟೇ ದಿನದಲ್ಲಿ ವಾಸಿಯಾಗುತ್ತದೆ ಎಂದು ಹೇಳಬಹುದಿತ್ತು. ಆದರೆ, ನಿಮ್ಮ ಮಗುವಿಗೆ ಬಂದಿರುವ ಕಾಯಿಲೆ ಅಂತಿಂಥದ್ದಲ್ಲ; ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ಕಷ್ಟ. ಆದರೂ ನಮ್ಮ ಪ್ರಯತ್ನ ನಾವು ಮಾಡ್ತೇವೆ. ಈ ದಿನಗಳಲ್ಲಿ ತುಂಬಾ ಜನ ಕ್ಯಾನ್ಸರ್ ಗೆದ್ದಿದ್ದಾರೆ. ಈ ಸಂಬಂಧವಾಗಿ ಪ್ರತಿ ತಿಂಗಳೂ ಪೇಪರಿನಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ನಿಮ್ಮ ಮಗನ ಕಾಯಿಲೆಯೂ ಗುಣವಾಗಲಿ ಎಂದೇ ಪ್ರಾರ್ಥಿಸೋಣ. […]

 • ಮಿಡತೆಯ ಕೂಗಿಗೆ ಓಗೊಡುತ್ತಾ!

  ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಓದಿದ ಹಳೇ ಕತೆಯ ಹೊಸ ಅವತರಣಿಕೆ ವಿಚಿತ್ರ ಕಚಗುಳಿ ನೀಡಿತು. ಆ ಖುಷಿ ನಿಮಗೂ ಇರಲಿ ಎಂದು… ಹೀಗೊಂದು ಹಳೆ ಕತೆ: ಚಳಿಗಾಲ ಹತ್ತಿರವಾಗುತ್ತಿತ್ತು. ಹಾಗಾಗೇ ಇರುವೆಯೊಂದು ಬೇಸಿಗೆಯ ಬಿಸಿಲನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ಮನೆಯೊಂದನ್ನು ಕಟ್ಟಿ, ಚಳಿಗಾಲಕ್ಕಾಗಿ ಆಹಾರ ಸಾಮಗ್ರಿಗಳನ್ನು ಕಲೆಹಾಕತೊಡಗಿತು. ಇದನ್ನೆಲ್ಲ ನೋಡಿದ ಮೈಗಳ್ಳ ಮಿಡತೆಗೆ ನಗು ತಡೆಯಲಾಗಲಿಲ್ಲ. ‘ಇರುವೆಗೆ ತಲೆ ಸರಿಯಿಲ್ಲ’ ಎಂದುಕೊಂಡು ಕುಣಿಯುತ್ತಾ, ಹಾಡುತ್ತಾ ಬೇಸಿಗೆಯನ್ನು ಕಳಿದುಬಿಟ್ಟಿತು. ಚಳಿಗಾಲ ಬಂತು. ಇರುವೆ ತನ್ನ ಬೆಚ್ಚನೆ ಮನೆಯಲ್ಲಿ, ಯಥೇಚ್ಛವಾಗಿ ಊಟ […]

 • ಫ್ರಂಟ್ ಪೇಜ್ ಎಂಬ ಪ್ರತಿದಿನದ ಮಧುರ ಯಾತನೆ

  ಅಮೆರಿಕದ ಖ್ಯಾತ ಪತ್ರಕರ್ತ ಬೆಂಜಮಿನ್ ಬ್ರಾಡ್ಲಿಯನ್ನು ಸಹೋದ್ಯೋಗಿಯೊಬ್ಬ ಒಮ್ಮೆ ಕೇಳಿದನಂತೆ-‘ಸಂಪಾದಕನಾದವನಿಗೆ ಯಾವುದು ಇಷ್ಟ?’ ಅದಕ್ಕೆ ಬ್ರಾಡ್ಲಿ ಹೇಳಿದ್ದು- ‘ಫ್ರಂಟ್ ಪೇಜ್‌’. ‘ಅದ್ಸರಿ, ಸಂಪಾದಕನಾದವನು ಯಾವುದಕ್ಕೆ ದಿನಾಲೂ ತಲೆಕೆಡಿಸಿಕೊಳ್ಳುತ್ತಾನೆ?’ ಎಂಬ ಮತ್ತೊಂದು ಪ್ರಶ್ನೆಗೂ ಬ್ರಾಡ್ಲಿ ಹೇಳಿದ್ದು-‘ಫ್ರಂಟ್ ಪೇಜ್‌’. ‘ಅದೂ ಸರಿ. ಸಂಪಾದಕನಾದವನು ಪ್ರತಿದಿನ ಒಂದೇ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳುವುದು ಎಷ್ಟು ಸರಿ?’ ಎಂದು ಆತ ಪುನಃ ಕೇಳಿದಾಗ, ಬ್ರಾಡ್ಲಿ ಹೇಳಿದ್ದು- ‘ಪತ್ರಿಕೆಯಲ್ಲಿ ದಿನಾಲೂ ಫ್ರಂಟ್‌ಪೇಜ್ ಇರುತ್ತಲ್ಲಾ! ಎಲ್ಲಿಯತನಕ ಫ್ರಂಟ್‌ಪೇಜ್ ಇರುತ್ತೋ ಅಲ್ಲಿ ತನಕ ಈ ತಲೆಕೆಡಿಸಿಕೊಳ್ಳುವುದು ತಪ್ಪೊಲ್ಲ.’ ‘ದಿ […]

 • ಜೀವನದಲ್ಲಿ ಏನಾದರೂ ಸಾಧಿಸಬೇಕಾದ್ದು ಅನಿವಾರ್ಯವೇ ಭಟ್ರೇ?

  ಕೇಳ್ರಪ್ಪೋ ಕೇಳಿ * ಸಂತೇಬೆನ್ನೂರು ಫೈಜ್ನಟ್ರಾಜ್ ಜೀವನದಲ್ಲಿ ಏನಾದರೂ ಸಾಧಿಸಬೇಕಾದ್ದು ಅನಿವಾರ್ಯವೇ ಭಟ್ರೇ? ಹಾಗೇನಿಲ್ಲ ಸುಮ್ಮನೇ ಕೂತಿದ್ದು ಕೂದಲು ಉಗುರು ಬೆಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿ ಸಾಧನೆ ಮಾಡಬಹುದು. * ವಿ. ಹೇಮಂತಕುಮಾರ, ಬೆಂಗಳೂರು, 9035992900 ನಿನ್ನ ತುಟಿ ಹಪ್ಪಳ. ಕಚ್ಚಿ ತಿನ್ನಲಾ ಅಂತ ಕೇಳ್ತಿದಾಳಲ್ಲ? ಪರೋಕ್ಷವಾಗಿ ತುಟಿಗೆ ವ್ಯಾಸಲೀನ್ ಹಚ್ಕೊ ಅಂತ ಹೇಳ್ತಿದಾಳೆ! * ರವಿಕುಮಾರ ಜಿ.ಬಿ. 9449669897 ಕೃಷಿ ಬಜೆಟ್ ಮಾಡಿದ ಹಾಗೆ ಮಠ-ಮಂದಿರಗಳಿಗೂ ಪ್ರತ್ಯೇಕ ಬಜೆಟ್ ಮಂಡಿಸಿದರೆ ಹೇಗಿರುತ್ತೆ? ಅದಕ್ಕೆ ಋಷಿ ಬಜೆಟ್ […]

 • ಪ್ರೇಮಿಗಳ ದಿನಕ್ಕೆ ಜೀವನ ಪ್ರೀತಿಯ ಕತೆಗಳ ಗುಚ್ಛ

  ನಾನು ಹಲವು ಬಾರಿ ಯೋಗಿ ದುರ್ಲಭಜೀ ಕುರಿತು ಪ್ರಸ್ತಾಪಿಸಿದ್ದೇನೆ. ಅವರ ವ್ಯಕ್ತಿತ್ವ, ವಿಚಾರ ಅನೇಕರಿಗೆ ಇಷ್ಟವಾಗಿದೆ. ಇನ್ನು ಕೆಲವರಿಗೆ ಅವರ ವ್ಯಕ್ತಿತ್ವ ನಿಗೂಢವೂ ಹೌದು. ಮೂಲತಃ ವಜ್ರದ ವ್ಯಾಪಾರಿಯಾಗಿರುವ ಅವರು ಸಾವಿರಾರು ಕೋಟಿ ರೂಪಾಯಿ ಗಳಿಸಿ, ಗಳಿಸಿದ್ದೆಲ್ಲವನ್ನೂ ದಾನ ಮಾಡಿ, ಪುನಃ ಆರಂಭದಿಂದ ಶುರು ಮಾಡಿ, ಮತ್ತೆ ಹಣ ಗಳಿಸಿ ಅದನ್ನೆಲ್ಲ ಸಮಾಜಕ್ಕೆ ಅರ್ಪಿಸುವ ಅವರ ಮನೋಭಾವ ಹಲವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ದುರ್ಲಭಜೀ ಅವರಿಗೆ ಗಳಿಸುವುದೂ ಗೊತ್ತು. ಗಳಿಸಿದ್ದೆಲ್ಲ ತನ್ನದಲ್ಲ, ಅದು ಸಮಾಜದ್ದು ಎಂದು ಬರಿದಾಗುವ […]

 • ಹೇಳಲಾಗದ ಭಾವ ಸೃಷ್ಟಿಸುವ ಹಿತಾನುಭವದ ಪ್ರಸಂಗಗಳು!

  ನನ್ನ ಸ್ನೇಹಿತ ಶ್ರೀಕಾಂತ ಮೆಂಚೆಸ್ಟರ್‌ನಿಂದ ಪ್ರತಿದಿನ ಒಂದು ಪುಟ್ಟ ಪ್ರಸಂಗವನ್ನು ಕಳಿಸುತ್ತಾರೆ. ಅವು ಏಳೆಂಟು ಸಾಲುಗಳಿಗಿಂತ ಹೆಚ್ಚಿರುವುದಿಲ್ಲ. ಓದಿ ಮುಗಿಸಿದಾಗ ಹೇಳಲಾಗದ ಒಂದು ಭಾವ ಕೆಲಕಾಲ ನಮ್ಮನ್ನು ಆವರಿಸಿರುತ್ತದೆ. ಒಂದು ವಾರದ ನಂತರ ಅವು ನೆನಪಿನಲ್ಲಿ ಉಳಿದೇ ಬಿಡುತ್ತವೆಂದು ಹೇಳಲಾಗುವುದಿಲ್ಲ. ಓದಿದಾಗ ದಕ್ಕುವ ಹಿತಾನುಭಾವದ ಖುಷಿಯೇ ಬೇರೆ. ಅಂಥ ಕೆಲವು ಪ್ರಸಂಗಗಳನ್ನು ನಿಮಗೆ ಹೇಳಬಹುದು. – ನಿರಾಶ್ರಿತರ ಶಿಬಿರದಲ್ಲಿದ್ದವರಿಗೆ ಮನೆಯಲ್ಲಿದ್ದ ಮೂರು ಬ್ಯಾಗ್ ಹಳೆ ವಸ್ತ್ರಗಳನ್ನೆಲ್ಲ ತೆಗೆದುಕೊಂಡು ಹೋಗಿ ಕೊಟ್ಟು ಬಂದೆ. ಎಲ್ಲರೂ ಸಂತಸದಿಂದ ಅವುಗಳನ್ನು ಧರಿಸಿದರೆಂದು […]

 • ಪಿಕ್ ಪಾಕೆಟ್ – 10 ಫೆಬ್ರವರಿ 2013

 • ಪಿಕ್ ಪಾಕೆಟ್ – 09 ಫೆಬ್ರವರಿ 2013

 • ಜಾಹೀರಾಯ್ತು – 09 ಫೆಬ್ರವರಿ 2013

 • ಮುಳ್ಳಿನ ಹಾದಿಗೆ ಹೂ ಹಾಸಿದವರ ಹೃದಯಂಗಮ ಕತೆ

  ‘ಸಾರ್, ಮಹೇಶ್ ಎಂಬುವವರು ಸುಮಾರು ಎರಡು ತಾಸಿನಿಂದ ನಿಮಗಾಗಿ ಕಾಯುತ್ತಿದ್ದಾರೆ. ಕರೆಯಲಾ?’ ಎಂದು ನನ್ನ ಸೆಕ್ರೆಟರಿ ರವಿಚಂದ್ರ ಹೇಳಿದರು. ನಾನು ಈಗಲೋ ಆಗಲೋ ಬಡಿಯುವ ಜ್ವಾಲಾಮುಖಿ ಪರ್ವತದ ಮೇಲೆ ಕುಳಿತವರ ಸ್ಥಿತಿಯಲ್ಲಿದ್ದೆ. ಭಗವಂತ ಬಂದು ‘ವರ ಕೇಳು’ ಅಂತ ಹೇಳಿದರೂ ‘ವರವೂ ಬೇಡ, ವಧುವೂ ಬೇಡ. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು’ ಎಂದು ಹೇಳುತ್ತಿದ್ದೆನೇನೋ? ಟಿವಿ ಚಾನೆಲ್ ಹುಟ್ಟಿಸುವ ಮನಸ್ಥಿತಿ ಅಂಥದು. ನನ್ನ ಭಾವನೆ ಅರ್ಥಮಾಡಿಕೊಂಡ ರವಿಚಂದ್ರ, ಹೊರಗೆ ನನಗಾಗಿ ಕಾಯುತ್ತಿದ್ದ ಮಹೇಶನಿಗೆ, ‘ಇಂದು ಭೇಟಿ […]