ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for December, 2012

 • ಮುಗಿಯದ ಬೆರಗು ಈ ಬ್ರಾನ್್ಸನ್!

  ಮತ್ತೆ ರಿಚರ್ಡ್ ಬ್ರಾನ್್ಸನ್! ನಾನು ಮರೆತರೂ ನೀವು ಬಿಡಬೇಕಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಅವನನ್ನು ಆಗಾಗ ನೆನೆಯುವುದು, ಅವನ ಬಗ್ಗೆ ಪದೇ ಪದೆ ಬರೆಯುವುದು ನಡೆದೇ ಇದೆ. ನಾನು ಬಿಟ್ಟರೆ ನೀವು ಬಿಡೊಲ್ಲ. ನೀವು ಬಿಡುವ ಸುಳಿವು ಕಾಣುತ್ತಿಲ್ಲ. ಬ್ರಾನ್್ಸನ್ ಮೋಡಿ ಅಂಥದು. ಪ್ರಾಯಶಃ ಒಬ್ಬ ವ್ಯಕ್ತಿಯ ಬಗ್ಗೆ ನಾನು ಈ ಪ್ರಮಾಣದಲ್ಲಿ ಮೇಲಿಂದ ಮೇಲೆ ಬರೆದಿಲ್ಲ. ಬ್ರಾನ್್ಸನ್ ಅನೇಕರಲ್ಲಿ ಹೊಸಹುಮ್ಮಸ್ಸು, ಲವಲವಿಕೆ, ಚೈತನ್ಯ ಮೂಡಿಸಿದ್ದಂತೂ ನಿಜ. ಯುವಕರಿಗಂತೂ ಪ್ರೇರಣೆಯಾಗಿದ್ದಾನೆ. ಆಲಕ್ಷ್ಯದಿಂದ ತೆಮೆಯುತ್ತಿರುವವರು ಸಹ […]

 • ಹೊಸ ವರ್ಷದ ಹೊಸ್ತಿಲಲ್ಲಿ ಹೆಂಡತಿಯ ಅಂತರಂಗಕ್ಕೊಂದು ಇಣುಕು

  ವರ್ಷದ ಕೊನೆಗೆ ಬಂದು ನಿಂತಿದ್ದೇವೆ. ಇನ್ನು ನಾಲ್ಕು ಹೆಜ್ಜೆ ನಡೆದರೆ ಹೊಸ ವರ್ಷ. ವರ್ಷದ ಕೊನೆಗೆ ಬಂದು ನಿಂತಾಗ ವರ್ಷವಿಡೀ ನಡೆದ ಸುಸ್ತಿಗಿಂತ ಗುರಿ ತಲುಪಿದಾಗ ಸಿಗುವ ಸಮಾಧಾನ, ಸಂತಸ, ನೆಮ್ಮದಿಯಿದೆಯಲ್ಲ ಅದು ಎಲ್ಲಕ್ಕಿಂತ ಮಿಗಿಲು. ಹೊಸ ವರ್ಷಕ್ಕೆ ಪುನಃ ಹೆಜ್ಜೆ ಹಾಕುವ ಹುರುಪು ಅನನ್ಯ. ಹೊಸ ಪ್ರಯಾಣ ಆರಂಭಿಸುವ ಮುನ್ನ, ಹಳೆ ದಣಿವನ್ನು ತಣಿಸುವ ಮುನ್ನ ಸಿಗುವ ಒಂದಿಷ್ಟು ಸಮಯ ಅದು ಅತ್ಯಂತ ಖುಷಿ ಕೊಡುವಂಥದ್ದು. ಅಂಥ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ವರ್ಷವಿಡೀ ಸವೆಸಿದ ದಾರಿಯ […]

 • ‘ನಾನು ಯಾವ ಪುಸ್ತಕ ಓದಬೇಕು ಹೇಳ್ತೀರಾ?’

  ‘ಮದುವೆ ಆಗಬೇಕೆಂದಿರುವೆ. ಯಾವ ಹುಡುಗಿಯಾದರೂ ಆದೀತು’ ಅಂತ ಹೇಳುತ್ತೀರಾ? ಅದು ಸಾಧ್ಯವಾ? ಹೆಣ್ಣು ಸಿಗದ ಯಾವ ಹತಾಶ ಗಂಡಸು ಸಹ ಹಾಗೆ ಹೇಳಲಾರ ತಾನೆ? ಓದುಗರ ಬೇಡಿಕೆಗಳು ನಿಜಕ್ಕೂ ಸ್ವಾರಸ್ಯಕರವಾಗಿರುತ್ತವೆ. ಕೆಲವರು ಫೋನ್ ಮಾಡಿ, ‘ಸಾರ್, ನಾನು ಬುಕ್್ಸ್ಟಾಲ್್ನಲ್ಲಿದೀನಿ. ನಾನು ಯಾವ ಪುಸ್ತಕ ಓದಬೇಕು ಎಂದು ನೀವು ತಿಳಿಸಿದರೆ ನನಗೆ ಇಲ್ಲಿ ಅವನ್ನು ಖರೀದಿಸಲು ಸಹಾಯಕವಾಗುತ್ತದೆ. ದಯವಿಟ್ಟು ತಿಳಿಸಿ’ ಅಂತಾರೆ. ‘ನಾನು ಯಾವ ಪುಸ್ತಕ ಓದಬೇಕು ತಿಳಿಸಿ’ ಅಂದ್ರೆ ಏನಂತ ಹೇಳೋದು? ಮೊನ್ನೆ ಇಂಥದೇ ಫೋನ್ ಬಂತು. […]

 • ಜೀವನದ ಅಚ್ಚರಿ ಬಿಚ್ಚಿಡುತ್ತ ಭಾವದ ಜಗುಲಿ ಬೆಚ್ಚಗಾಗಿಸುವ ಝೆನ್

  ಝೆನ್ ಕತೆಗಳ ಬಗ್ಗೆ ನೀವು ಕೇಳಿರಬಹುದು. ಬೌದ್ಧ ಗುರುಗಳು ತಮ್ಮ ಶಿಷ್ಯವರ್ಗಕ್ಕೆ ಬೋಧಿಸಿದ ನೀತಿ ಪಾಠಗಳ ಸಾರ ಸಂಗ್ರಹದಲ್ಲಿ ಝೆನ್ ಕತೆಗಳ ಪಾಲು ದೊಡ್ಡದು. ಒಂದೊಂದು ಕತೆಯಲ್ಲಿಯೂ ಒಂದೊಂದು ನೀತಿಯಿರುತ್ತದೆ. ಬುದ್ಧನ ಶಾಂತಿ, ಸಹಬಾಳ್ವೆ, ಅಹಿಂಸೆಯ ಮಹತ್ವವನ್ನು ಒಳಗೊಂಡೇ ಎಲ್ಲ ಕತೆಗಳೂ ಮುಂದುವರಿಯುತ್ತವೆ. ಝೆನ್ ಕತೆಗಳಿಗೆ ಮುಖಾಮುಖಿಯಾದರೆ ಹೊಸದೊಂದು ಲೋಕದ ದರ್ಶನವಾಗುತ್ತದೆ. ಸತ್ಯವೆಂಬುದು ಬೇರೊಂದು ರೂಪದಲ್ಲಿ ಕಣ್ಮುಂದೆ ಬಂದು ನಿಲ್ಲುತ್ತದೆ. ಅಂಥ ಕೆಲವು ಝೆನ್ ಕತೆಗಳ ಗುಚ್ಛವೊಂದು ಇಲ್ಲಿದೆ… ಅದೊಂದು ಆಶ್ರಮ. ಅಲ್ಲಿ ಇಬ್ಬರು ಬೌದ್ಧ ಭಿಕ್ಕುಗಳು […]

 • ಭಾಷಣ ಕೇಳುವಾಗ ಜನ ನಡು ನಡುವೆ ಚಪ್ಪಾಳೆ ಹೊಡೀತಾರಲ್ಲಾ ಏಕೆ?

  ಕೇಳ್ರಪ್ಪೋ ಕೇಳಿ ವಿ. ಹೇಮಂತಕುಮಾರ್, ಬೆಂಗಳೂರು 9035998900 ಪ್ರೇಮಿಗಳನ್ನು ಪ್ರಣಯ ಪಕ್ಷಿಗಳು ಅಂತಾರೆ ಯಾಕೆ ಸಾರ್? ಪ್ರೇಮಿಗಳಿಂದ ಪ್ರೇಮಿಗಳಿಗೆ ಆಗಾಗ ಹಾರುತ್ತಿರುತ್ತಾರಲ್ಲಾ ಅದಕ್ಕೆ! ಜೆ.ಪಿ. ನಾಗರಾಜ ದಾವಣಗೆರೆ 99011 93811 ಭಾಷಣ ಕೇಳುವಾಗ ಜನ ನಡು ನಡುವೆ ಚಪ್ಪಾಳೆ ಹೊಡೀತಾರಲ್ಲಾ ಏಕೆ? ಕರತಾಡನ ಬದಲು ‘ಕೆರ’ತಾಡನ ಮಾಡಬೇಕಾಗುತ್ತದೆಂಬ ಎಚ್ಚರಿಕೆ! ರವಿಕುಮಾರ್ ಜಿ.ಬಿ. ಬೆಂಗಳೂರು, 9449669897 ಲಂಚ ಕೊಡದೆ ಸಿಗುವ ಸರ್ಕಾರಿ ಕೆಲಸ ಯಾವುದು ಭಟ್ರೇ? ಕಸ ಎತ್ತುವ ಕೆಲಸಕ್ಕೂ ಕಾಸು ಕೊಡಬೇಕು ಗೊತ್ತಾ! ರಾಜಕಾರಣಿಗಳಿಗೂ ಗೋಸುಂಬೆಗೂ ಇರುವ […]

 • ಹೆಂಡತಿಗೆ ಕೋಪ ಬಂದರೆ ತವರಿಗೆ ಹೋಗಿ ಆಟ ಆಡಿಸುತ್ತಾಳೆ, ಪ್ರಿಯತಮೆಗೆ ಕೋಪ ಬಂದರೆ?

  ಕೇಳ್ರಪ್ಪೋ ಕೇಳಿ ಲಕ್ಕೂರು ಎಂ. ನಾಗರಾಜ, ಮಾಲೂರು, 9900538954 ನನ್ನ ಹುಡುಗಿ ಹೆಸರು ಮೀನಾಕ್ಷಿ. ನನ್ನ ಮನ ಸೋಲಲು ಕಾರಣ ಅವಳ ಅಕ್ಷಿ. ಇದರ ಗಮ್ಮತ್ತೇನು ಸಾರ್? ಮನ ಸೋಲಲು ಕಾರಣ ಅವಳ ಅಕ್ಷಿ ಎಂಬುದಕ್ಕೆ ಏನಿದೆ ಸಾಕ್ಷಿ ಎಂದು ಕೇಳಬಹುದು ಅವಳಮ್ಮ ವಿಶಾಲಾಕ್ಷಿ! ಒಮ್ಮೆ ಕಾಲು ಜಾರಿದರೆ ಕೈಲಾಸ! ಮತ್ತೆ ಮತ್ತೆ ಕೈ, ಕಾಲು ಜಾರುತ್ತಿದ್ದರೆ ಯಾವ ವಾಸ? ಆಸ್ಪತ್ರೆ ವಾಸ. ಬಸವನಗೊಡ ಹೆಬ್ಬಳಗೆರೆ, ಚನ್ನಗಿರಿ ಬಹುತೇಕ ಧಾರಾವಾಹಿಗಳಲ್ಲಿ ಸ್ತ್ರೀಯರೇ ‘ಕಥಾನಾಯಕಿ’ಯಾಗಿರುತ್ತಾರಲ್ಲಾ ಯಾಕೆ? ಕಥೆ ಬರೆಯುವವರು […]

 • ಮನೋಬಲವೊಂದಿದ್ದರೆ ಕ್ಯಾನ್ಸರ್ ಏನು ಮಹಾ?!

  ರಾತ್ರಿ ಎರಡೂವರೆ ಗಂಟೆ. ಮೊಬೈಲ್ ಒಂದೇ ಸಮನೆ ಕಿರುಚಿಕೊಳ್ಳುತ್ತಿತ್ತು. ಕಣ್ಣುಗಳು ನಿದ್ದೆಯೊಳಗೆ ಹೂತು ಹೋಗಿದ್ದವು. ಸ್ನೇಹಿತ ವಿಕಾಸ್ ಚಿಕಾಗೋ ಏರ್್ಪೋರ್ಟಿನಿಂದ ಮಾತಾಡುತ್ತಿದ್ದ.”ನಂಗೆ ಗೊತ್ತು. ನೀನು ನಿದ್ದೆ ಮಾಡ್ತಿದೀಯ ಅಂತ. ಡಿಸ್ಟರ್ಬ್ ಆದ್ರೆ ಸಹಿಸಿಕೋ. ನನ್ನ ಮುಂದೆ ಅಮೆರಿಕದ ಖ್ಯಾತ ವ್ಯಕ್ತಿತ್ವ ವಿಕಸನ ಗುರು, ಲೇಖಕ ಹಾಗೂ ಜೀವನಕಲೆ ಬಗ್ಗೆ ಮಾತಾಡುವ ವಾಯ್ನ್್ಡೈರ್ ಇದ್ದಾರೆ. ನಿನಗಾಗಿ ಖರೀದಿಸಿದ ಎರಡು ಪುಸ್ತಕಗಳ ಮೇಲೆ ಅವರ ಆಟೋಗ್ರಾಫ್ ಹಾಕಿಸಿಕೊಂಡಿದ್ದೇನೆ. ಆ ಎರಡು ಪುಸ್ತಕಗಳು ಚೆನ್ನಾಗಿವೆಯೆಂದು ಡೈರ್ ಕೂಡ ಹೇಳಿದರು. ನನ್ನ ತಂಗಿ […]

 • ಎಲೆ ಅಡಿಕೆ ಹಾಕುವುದು ಅಪರಾಧವಾ ಬಾಣಭಟ್ರೇ?

  ಕೇಳ್ರಪ್ಪೋ ಕೇಳಿ * ಶ್ರೀನಾಥ ಜೋಯಿಸ, ಸಿದ್ಧಾಪುರ ಎಲೆ ಅಡಿಕೆ ಹಾಕುವುದು ಅಪರಾಧವಾ ಬಾಣಭಟ್ರೇ? ಮಾತಾಡುವಾಗ ಶಶಿಧರ ಭಟ್ಟನ ಹಾಗೆ ಎದುರಿನವರ ಮೇಲೆ ಸಿಂಪಡಿಸುವುದು ಅಪರಾಧ! * ಫ್ಯಾಷನ್ ಡಿಸೈನರ್ ಮಧು 99457-37427 ಫ್ಯಾಷನ್ ಶೋಗಳಲ್ಲಿ ಭಾಗವಹಿಸುವ ಚೆಲುವೆಯರು ದೇಹದ ಚೆಂದ ತೋರಿಸಲು ‘ಕ್ಯಾಟ್್ವಾಕ್್’ನಲ್ಲೇ ಏಕೆ ಓಡಾಡಬೇಕು? -ಅಲ್ಲಿ ಕಾಟ್ ಇಟ್ಟಿರದೇ ಇರುವುದರಿಂದ! * ಓಂ ಚೆನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ 9901257131 “ಮಿಡಿ’ ಹಾಕಿರೋ ಹುಡ್ಗಿ ತನ್ನ ಕುಡಿನೋಟ ಬೀರಿ ‘ತುಟಿ’ ಕಚ್ಚಿ ನಗ್ತಾಳಲ್ಲ ಏನ್ಮಾಡ್ಲಿ ಭಟ್ರೇ? […]

 • ಸ್ಪೂರ್ತಿಸೆಲೆ – 10 ಡಿಸೆಂಬರ್ 2012

  ಇತರರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಂಡು ಬದುಕು ಮತ್ತು ಸಮಯ ವ್ಯರ್ಥ ಮಾಡಬೇಡಿ. ಹೋಲಿಕೆ ಮಾಡುವುದೇ ಆದರೆ ನಿನ್ನೆ ನೀವು ಹೇಗಿದ್ದಿರಿ, ಇಂದು ಹೇಗಿದ್ದೀರಿ ಎಂಬುದನ್ನು ಹೋಲಿಕೆ ಮಾಡಿಕೊಳ್ಳಿ. ಈ ಹೋಲಿಕೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ.

 • ವಕ್ರತುಂಡೋಕ್ತಿ – 10 ಡಿಸೆಂಬರ್ 2012

  ಬುದ್ಧಿಜೀವಿಗಳು ಬಹಳ ಯೋಚಿಸಬಾರದು. ಅದು ಅವರ ಕೃತಿಚೌರ್ಯ ಕ್ರಿಯೆಗೆ ಧಕ್ಕೆಯುಂಟು ಮಾಡುವ ಅಪಾಯವಿರುತ್ತದೆ.