ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for October, 2012

 • ಹೆಡ್್ಲೈನ್ ಕೊಟ್ಟು ತಲೆ ತಗ್ಗಿಸಿದವರು!

  ಹೆಡ್್ಲೈನ್ ಗಳಲ್ಲಿ ಪನ್ ಮಾಡುವುದು ತಪ್ಪಲ್ಲ; ಓದಲು ಮುದ ಕೊಡುತ್ತದೆ. ಆದರೆ ಅದಕ್ಕೆ ಸಮಯ, ಸಂದರ್ಭವಿರುತ್ತದೆ. ನಿಧನ ಸುದ್ದಿಯಂಥ ಗಂಭೀರ ಸುದ್ದಿಗೆ ಎಂದೂ ದ್ವಂದ್ವಾರ್ಥ ಕೊಡುವ ಹೆಡ್್ಲೈನ್ ನೀಡಲೇಬಾರದು. ಜಗತ್ತಿನಲ್ಲಿ ಪ್ರತಿದಿನ ಅವೆಷ್ಟೋ ಜನ ಸಾಯುತ್ತಾರೆ. ಅವರಲ್ಲಿ ಕೆಲವರು ಪತ್ರಕರ್ತರೂ ಇರಬಹುದು. ಖ್ಯಾತನಾಮ ಪತ್ರಕರ್ತರು, ಸಂಪಾದಕರು ನಿಧನರಾದರೆ ಸುದ್ದಿಯಾಗುತ್ತಾರೆ. ಉಳಿದವರು ಒಂದು ಚಿಕ್ಕ ಫಿಲ್ಲರ್ ಸುದ್ದಿಯೂ ಆಗುವುದಿಲ್ಲ. ಮೊನ್ನೆ ಟೋನಿ ಪರ್ಸಿಚಿಲ್ಲಿ ಎಂಬ ಉಪಸಂಪಾದಕ ನಿಧನನಾದ. ಪ್ರಾಯಶಃ ಆತನ ಹೆಸರನ್ನು ಅವನ ಆಫೀಸಿನ ಸಹೋದ್ಯೋಗಿಗಳ ಹೊರತಾಗಿ ಮತ್ಯಾರೂ […]

 • ಫೋಟೊ ಕಟ್ಟಿಕೊಡುವ ಕಲ್ಪನೆಗಳಿಗೆಲ್ಲಿಯ ಫ್ರೇಮು?

  ‘ಇಂದಿರಾ ಪಕ್ಷದ ವೇದಿಕೆಯಲ್ಲಿ ನಡೆದು ಹೋಗುತ್ತಿದ್ದರೆ, ಅಲ್ಲಿದ್ದವರೆಲ್ಲ ಮುಗ್ಗರಿಸಿ ಬೀಳುವವರಂತೆ ನಮಿಸುತ್ತಿದ್ದರು’ ಎಂದು ರಘು ರೇ ಹೇಳುತ್ತಾರೆ. ಪಕ್ಷ ಹಾಗೂ ನಾಯಕರ ಮೇಲೆ ಇಂದಿರಾ ಅಂಥ ನಿಯಂತ್ರಣ ಹೊಂದಿದ್ದರು. ಕಳೆದ ವಾರದ ಅಂಕಣದಲ್ಲಿ ಖ್ಯಾತ ಛಾಯಾಗ್ರಾಹಕ ರಘು ರೇ ತೆಗೆದ ಇಂದಿರಾ ಗಾಂಧಿಯವರ ಎರಡು ಫೋಟೊ ಕುರಿತು ಹಲವರು ಓದುಗರು ಅಚ್ಚರಿ, ಮೆಚ್ಚುಗೆ ತೋರಿ ಪ್ರತಿಕ್ರಿಯಿಸಿದ್ದಾರೆ. ಇಂಥ ಬೇರೆ ಫೋಟೊಗಳಿದ್ದರೆ ಪ್ರಕಟಿಸಿ ಎಂದು ಇನ್ನು ಕೆಲವರು ಕೇಳಿದ್ದಾರೆ. ರಘು ರೇ ಅವರ Indira Gandhi: A Living […]

 • ಗಾಂಧೀಜಿ ಇಂಟರನೆಟ್ ಯುಗದ ಪ್ರವರ್ತಕರಾ?

  ಸುಮಾರು ಆರು ತಿಂಗಳ ಹಿಂದೆ, ಹಿರಿಯ ಆಪ್ತ ಸ್ನೇಹಿತರಾದ ಸುಧೀಂದ್ರ ಕುಲಕರ್ಣಿಯವರು ತಾವು ಬರೆದ ಪುಸ್ತಕದ ಹಸ್ತಪ್ರತಿಯನ್ನು ಓದಲು ಕೊಟ್ಟಿದ್ದರು. ಬೇರೆ ಓದಿನ ತೆಕ್ಕೆಯಲ್ಲಿದ್ದುದರಿಂದ ಅದನ್ನು ಓದಲು ಆಗಿರಲಿಲ್ಲ. ಅದಾಗಿ ಎರಡು ತಿಂಗಳ ನಂತರ ಅವರು ಬೆಂಗಳೂರಿಗೆ ಬಂದಾಗ ತಮ್ಮ ಪುಸ್ತಕದ ಸಾರ, ಸರಕಿನ ಸಾರಾಂಶವನ್ನು ಹೇಳಿದಾಗ ಅದನ್ನು ಓದಬೇಕೆಂಬ ತವಕ ಜಾಸ್ತಿಯಾಯಿತು. ಸುಮಾರು 725 ಪುಟಗಳ ಈ ಕೃತಿಯನ್ನು ಓದಿಮುಗಿಸುವುದಕ್ಕೆ ನನಗೆ ಎರಡು ತಿಂಗಳುಗಳೇ ಹಿಡಿದವು. ಅಂದಹಾಗೆ ಈ ಕೃತಿಯ ಹೆಸರು Music of the […]

 • ಮಕ್ಕಳ ಮೋಹದ ಮುಂದೆ ಯಾವ ಆಸ್ತಿಯೂ ದೊಡ್ಡದಲ್ಲ…!

  ಮಕ್ಕಳ ಮೇಲೆ ತಾಯ್ತಂದೆಯರು ಹೊಂದಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಜ ಹೇಳಬೇಕೆಂದರೆ, ಮಕ್ಕಳ ಹೊರತಾಗಿ ಪೋಷಕರಿಗೆ ಬೇರೊಂದು ಜಗತ್ತೇ ಇರುವುದಿಲ್ಲ. ಒಬ್ಬ ವ್ಯಕ್ತಿ ದಿನಕ್ಕೆ ಕೋಟಿ ಕೋಟಿ ದುಡಿಯುವವನಾಗಿರಬಹುದು. ಅಥವಾ ಭಿಕ್ಷೆ ಯಾಚಿಸುತ್ತಾ ಹೊಟ್ಟೆ ಹೊರೆಯುವವನೇ ಆಗಿರಬಹುದು. ಈ ಎರಡೂ ವರ್ಗಕ್ಕೆ ಸೇರಿದ ಜನರಿಗೆ ಅಷ್ಟೈಶ್ವರ್ಯ ಕಂಡಾಗ ಆಗುತ್ತದಲ್ಲ, ಅದಕ್ಕಿಂತ ಹೆಚ್ಚಿನ ಖುಷಿ ಮಕ್ಕಳನ್ನು ಕಂಡಾಗ ಆಗುತ್ತದೆ. ಪ್ರತಿಯೊಬ್ಬ ಪೋಷಕರ ಕನಸು ಹಾಗೂ ಭವಿಷ್ಯದ ಲೆಕ್ಕಾಚಾರದಲ್ಲಿ ಮಕ್ಕಳೇ ಇರುತ್ತಾರೆ. ಮಕ್ಕಳು ತಮ್ಮ ಕೊನೆಗಾಲದಲ್ಲಿ ಹೇಗೆಲ್ಲಾ […]

 • ಜೀವನ ಪೂರ್ತಿ ದ್ವೇಷ ಸಾಧಿಸೋವ್ರಿಗೆ ಏನಂತೀರಿ ಭಟ್ರೇ?

  ಕೇಳ್ರಪ್ಪೋ ಕೇಳಿ ರಾಜು ಬಣಕಾರ, ಹಾವೇರಿ ನಿಮಗೆ ನನ್ನ ಜತೆ ಮಾತಾಡಲು ಟೈಮಿದೆಯಾ? ಮಾತೇನು,”ಬೈಟು ಕಾಫಿ’ಗೂ ಟೈಮಿದೆ! ಸಂತೆಬೆನ್ನೂರು ಫೈಜ್ನಟ್ರಾಜ್ ಜೀವನ ಪೂರ್ತಿ ದ್ವೇಷ ಸಾಧಿಸೋವ್ರಿಗೆ ಏನಂತೀರಿ ಭಟ್ರೇ? ದ್ವೇಷದ್ರೋಹಿ! ಮುಗ್ಗಳ್ಳಿ ಗುರು, ಬನವಾಸಿ, 9480931442 ನೇರವಾಗಿ ನನ್ನ ಮುಖ ನೋಡದಿರುವ ಹುಡುಗಿಗೆ ನನ್ನನ್ನು ಕದ್ದು ನೋಡುವ ಅವಶ್ಯಕತೆ ಏನು? ಕೆಲವನ್ನು ಕದ್ದು ಮಾಡಿದರೇ ಹೆಚ್ಚು ಮಜಾ. ಜ್ಞಾನಿಗಳು ಮೌನಿಗಳಾಗಿರುತ್ತಾರಲ್ಲ ಕಾರಣವೇನು? ಆದರೆ ಮೌನಿಗಳೆಲ್ಲ ಜ್ಞಾನಿಗಳಲ್ಲ! – ಬಾಣಭಟ್ಟ

 • ಇಂದಿರಾ ಗಾಂಧಿಯನ್ನು ಅರಿಯಲು ಈ ಫೋಟೋಗಳು ಸಾಕು!

  ಇಂದಿರಾಗಾಂಧಿ ಅವರ ಬಗ್ಗೆ ತಿಳಿದು ಕೊಳ್ಳಬಯಸುವವರು ಅವೆಷ್ಟೇ ಪುಸ್ತಕಗಳನ್ನು ಓದಿರಲಿ, ಈ ಕೃತಿಯನ್ನು ಓದಲಿಲ್ಲ ಅಂತಿಟ್ಟುಕೊಳ್ಳಿ, ಅವರಿಗೆ ಇಂದಿರಾ ವ್ಯಕ್ತಿತ್ವದ ಮಹತ್ವದ ಅಂಶ ದಕ್ಕದೇ ಹೋಗಬಹುದು. ನಮ್ಮ ದೇಶದ ಪ್ರಮುಖ ಫೋಟೋಗ್ರಾಫರ್್ಗಳಲ್ಲಿ ಮುಂಚೂಣಿಯಲ್ಲಿರುವ ರಘು ರೇ ಅವರ Indira Gandhi ಆ Living Legacy ಎಂಬ ಪುಸ್ತಕವನ್ನು ನೋಡುತ್ತಿದ್ದೆ. ಈ ಕೃತಿಯಲ್ಲಿ ನೂರಾರು ಅಪರೂಪದ ಚಿತ್ರಗಳಿರುವುದರಿಂದ ಇದನ್ನು ನೋಡಬೇಕು. ಪತ್ರಕರ್ತ ಇಂದ್ರಜಿತ್ ಭದ್ವಾರ್ ಅವರು ಈ ಪುಸ್ತಕದಲ್ಲಿ ಇಂದಿರಾಗಾಂಧಿಯವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಲೇಖನ ಬರೆದಿದ್ದಾರೆ. ಇದೇನು […]

 • ಕೊಳಗೆರೆಯನ್ನು ತಟ್ಟಾಡಿಸುವಷ್ಟು ತಾಕತ್ತು ನಿಮ್ಮ ವರದಿಗಾರ ರಾಘವೇಂದ್ರ ಭಟ್ಟನಿಗಿದೆಯಾ?

  ಕೇಳ್ರಪ್ಪೋ ಕೇಳಿ ರಮೇಶ್ ಬ್ಯಾಗಡೆಹಳ್ಳಿ, ತರೀಕೆರೆ, 89042 67904 ರಾಜಕೀಯ ಸೇರಬೇಕು ಅಂದ್ಕೊಂಡಿದೀನಿ, ಯಾವ ಪಕ್ಷಕ್ಕೆ ಸೇರಲಿ ಭಟ್ರೇ? ಕಾಲಜ್ಞಾನಿ ಹರಿಶ್ಚಂದ್ರ ಗೌಡರನ್ನು ಕೇಳಿ ಹೇಳಲಾಗುವುದು! ಲಕ್ಷ್ಮೀ ಬರ್ಕಲಿರಾಮ್, ಮಂಡ್ಯ, 970452188 ನಮ್ಮವರು ‘ನಮ್ಮ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ, ಗಾಡೀಲಿ ಪೆಟ್ರೋಲ್, ಮೊಬೈಲ್್ನಲ್ಲಿ ಕರೆನ್ಸಿ ಇರ್ಬೇಕಂತ ಹೇಳ್ತಾರೆ, ನಿಜಾನಾ ಭಟ್ರೆ? ನಮ್ಮ ಕಡೆ ‘ನಮ್ಮ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ ಜತೆಯಲ್ಲಿರುವವನ ಕಿಸೆಯಲ್ಲಿ ದುಡ್ಡಿರಬೇಕು’ ಅಂತಾರಪ್ಪ! ಕೆ.ಎನ್. ನಾರಾಯಣ್ ರೆಡ್ಡಿ, ಕೆ.ಜಿ.ಎಫ್. ಆತ್ಮಕತೆಗೂ, ಆತ್ಮಚರಿತ್ರೆಗೂ ಇರುವ ವ್ಯತ್ಯಾಸವೇನು? ನಮ್ಮ ಕತೆ ಬರೆದ್ರೆ […]

 • ವಕ್ರತುಂಡೋಕ್ತಿ – 11 ಅಕ್ಟೋಬರ್ 2012

  ಉದ್ಯಾನದಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವ ಹುಡುಗನ ಹುದ್ದೆಯನ್ನು ಆಕರ್ಷಕಗೊಳಿಸಬೇಕೆಂದರೆ ಆತನನ್ನು ‘ಲ್ಯಾಂಡ್್ಸ್ಕೇಪ್ ಎಕ್ಸಿಕ್ಯುಟಿವ್ ಆಫೀಸರ್್’ ಎಂದು ಕರೆಯಬಹುದು.

 • ಸ್ಪೂರ್ತಿಸೆಲೆ – 11 ಅಕ್ಟೋಬರ್ 2012

  ನಾವು ಎಷ್ಟೋ ಸಲ ಸಣ್ಣ ಸಣ್ಣ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಸದಾ ಅದರ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಇದರಿಂದ ನಮಗೆ ಅದಕ್ಕಿಂತ ದೊಡ್ಡದಾದ ವಿಷಯಗಳ ಬಗ್ಗೆ ಚಿಂತಿಸಲು ವ್ಯವಧಾನವೇ ಇರುವುದಿಲ್ಲ. ಸಣ್ಣ ಸಂಗತಿಯಿಂದ ನಾವು ಸಣ್ಣವರಾಗುವುದು ಬೇಡ.

 • ನಿಮ್ಮ ಸಲಹೆ ಗೆಲುವಿನ ಸೂತ್ರವಾಗಲು ಏನು ಮಾಡಬೇಕು?

  ಅವನು ರಿಚರ್ಡ್ ಬ್ರಾನ್್ಸನ್. ಜನ ಅವನನ್ನು ಬಿಜಿನೆಸ್ ಮ್ಯಾಗ್ನೆಟ್ ಅನ್ನುವುದುಂಟು. ಉದ್ಯಮಿ ಎಂದು ಹೊಗಳುವುದುಂಟು. ಅಧಿಪತಿ ಎಂದು ಮೆಚ್ಚುವವರುಂಟು. ದಿ ಕಿಂಗ್ ಎಂದು ಭೋಪರಾಕ್ ಕೂಗುವವರೂ ಉಂಟು. ಈ ಎಲ್ಲ ಮಾತುಗಳಿಗೂ ಥೇಟ್ ಆಂಗ್ಲರ ಶೈಲಿಯ ಹಹ್ಹಹ್ಹಾ…. ಥ್ಯಾಂಕ್್ಯೂ ಎಂಬುದಷ್ಟೇ ಅವನ ಉತ್ತರ. 60 ದಾಟಿದ ನಂತರ ಮನುಷ್ಯನಿಗೆ ಅರಳುಮರಳು ಆರಂಭವಾಗುತ್ತದೆ ಎಂಬ ಮಾತುಂಟು. ತಲೆತಲಾಂತರದಿಂದಲೂ ಸತ್ಯವಾಗಿಯೇ ಉಳಿದಿದ್ದ ಈ ಮಾತು ರಿಚರ್ಡ್ ಬ್ರಾನ್್ಸನ್್ನ ವಿಷಯದಲ್ಲಿ ಸುಳ್ಳಾಗಿದೆ. ಈಗಾಗಲೇ 62 ವಸಂತಗಳನ್ನು ದಾಟಿರುವ ಈತ ಈಗಲೂ ಹದಿನಾರು […]