ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for September, 2012

 • ಜಾಹೀರಾಯ್ತು – 30 ಸೆಪ್ಟೆಂಬರ್ 2012

 • ಬಾಣಭಟ್ರೆ, ಕೇಳಬಾರದ ಪ್ರಶ್ನೆ ಯಾವುದು? ಕೇಳಲೇಬೇಕಾದ ಪ್ರಶ್ನೆ ಯಾವುದು?

  ಕೇಳ್ರಪ್ಪೋ ಕೇಳಿ ರಮೇಶ್ ಬ್ಯಾಗಡೇಹಳ್ಳಿ, ತರೀಕೆರೆ, 8904267904 – ಬೈಟೂ ಕಾಫಿ ಜೊತೆ ಸ್ನ್ಯಾಕ್ಸ್ ಇಲ್ವಾ ಭಟ್ರೇ? ಹಾಗೇ ಊಟಾನೂ ಮಾಡ್ಕೊಂಡು ಹೋಗು! ಕೊಕ್ಕಡ ವೆಂಕಟ್ರಮಣ ಭಟ್ – ಬಾಣಭಟ್ರೆ, ಕೇಳಬಾರದ ಪ್ರಶ್ನೆ ಯಾವುದು? ಕೇಳಲೇಬೇಕಾದ ಪ್ರಶ್ನೆ ಯಾವುದು? ನೀವೀಗ ಕೇಳಿದ್ದೀರಲ್ಲ ಅದೇ! ನೇರಲಗುಡ್ಡ ಶಿವಕುಮಾರ್, 9480343742 – ಗಣೇಶ ಉತ್ಸವದ ದಿನ ಕೆಲವರು ಕುಡಿತ, ಕುಣಿತಗಳಲ್ಲೇ ಮೈಮರೆತಿರುತ್ತಾರಲ್ಲ? ಗಣೇಶನ ಬದಲು ಇವರನ್ನು ವಿಸರ್ಜಿಸಿದರೆ ನಶೆ ಇಳಿದೀತು! ಹೇಮಂತ ಕುಮಾರ, ಬೆಂಗಳೂರು, 9035992900 – ವಸಂತ ಋತುವಿಗೂ […]

 • ಕನ್ನಡಪ್ರಭಕ್ಕೆ ಹೊಸ ಲಾಂಛನಃನಿಮಗೇನನಿಸುತ್ತದೆ?

  ನಿಮ್ಮ ನೆಚ್ಚಿನ ‘ಕನ್ನಡಪ್ರಭ’ ಮೊದಲಿಂದಲೂ ಹೊಸ ಮನ್ವಂತರಗಳ ಹರಿಕಾರ. ಪ್ರಯೋಗಶೀಲತೆಯ ಗುರಿಕಾರ. ಓದುಗರ ಜಗತ್ತನ್ನು ತನ್ನೊಡಲಲ್ಲಿ ಆಡಗಿಸಿಕೊಂಡು, ಕಾಲಕಾಲಕ್ಕೆ ಅವರ ಬೇಕು-ಬೇಡಗಳಿಗೆ ತಕ್ಕಂತೆ ತೆರೆದುಕೊಳ್ಳುವ ಗೆಣೆಕಾರ. ಅಂತಹ ಕನ್ನಡಪ್ರಭ ಈಗ ಹೊಸ ಸ್ವರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಅದಕ್ಕೆ ಮುನ್ನುಡಿಯಾಗಿ ಹೊಸ ಲಾಂಛನ (ಲೋಗೊ) ಇಂದಿನಿಂದ ಅನಾವರಣಗೊಳ್ಳುತ್ತಿದೆ. ನಿಮ್ಮ ಒಪ್ಪಿಗೆಯಲ್ಲಿ ನಮ್ಮ ಧನ್ಯತೆ ಆಡಗಿದೆ. ಈ ಲಾಂಛನದ ಮೇರು ಅಕ್ಷರ ‘ಕ’ ಎಂಬುದು ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ‘ಕನ್ನಡಪ್ರಭ’ ಪ್ರಾತಿನಿಧ್ಯದ ಸಂಕೇತ. ಇದರಲ್ಲಿ ಸಹೃದಯಿ ಓದುಗರಿದ್ದಾರೆ, […]

 • ಮಹಾಭಾರತದ ಕೌರವರ ಹೆಸರುಗಳನ್ನು ಯಾಕೆ ಯಾರಿಗೂ ಇಡೋದಿಲ್ಲ ಭಟ್ರೇ?

  ಕೇಳ್ರಪ್ಪೋ ಕೇಳಿ ………. ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ – ಮಹಾಭಾರತದ ಕೌರವರ ಹೆಸರುಗಳನ್ನು ಯಾಕೆ ಯಾರಿಗೂ ಇಡೋದಿಲ್ಲ ಭಟ್ರೇ? ಶಾಸಕ ಬಿ.ಸಿ. ಪಾಟೀಲರನ್ನು ಕೆಲವರು ಕೌರವ ಎಂದೇ ಕರೆಯುತ್ತಾರೆ! ಓಂ ಚನ್ನೇಶ್, ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131 – ಸಿನಿಮಾದವರಿಗೂ, ರಾಜಕೀಯದವರಿಗೂ ಏನು ವ್ಯತ್ಯಾಸ ಭಟ್ರೇ? ಒಂದು ರೀಲು, ಇನ್ನೊಂದು ರಿಯಲ್ಲು! ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ, 9902797767 – ‘ಇರಲಾರದವ ಇರುವೆ ಬಿಟ್ಟುಕೊಂಡ’- ಈ ಗಾದೆಗೆ ಇತ್ತೀಚಿನ ಒಂದು ಉದಾಹರಣೆ ಕೊಡಬಲ್ಲಿರಾ ಭಟ್ರೇ? ಯಶ್! ವಿ. […]

 • ಕೇಳ್ರಪ್ಪೋ ಕೇಳಿ, ಕೇಳ್ರಪ್ಪೋ ಕೇಳಿ

  ಕೇಳ್ರಪ್ಪೋ ಕೇಳಿ – ಬಾಣಭಟ್ಟ ಫ್ಯಾಷನ್ ಡಿಸೈನರ್ ಮಧು, 99457-37427 ಟ ಈಗಿನ ಯಾವ ಹೆಣ್ಣು ಮಕ್ಕಳೂ ಗಂಡನನ್ನು ಪ್ರೀತಿಯಿಂದ ‘ಪ್ರಾಣೇಶ್ವರಾ’ ಅಂತ ಕರೆಯೋದೇ ಇಲ್ವಲ್ಲಾ? ಹಾಗೇ ಹೇಳದೇ ಪ್ರಾಣ ತೆಗೆಯೋದೇ ಲೇಸು ಅಂತೀಯಾ ಮಧು?! ಕಡೂರು ದೇವೇಂದ್ರ, ಕಡೂರು ಟ ಭಟ್ರೆ ನಿಮ್ಮ ಪತ್ರಿಕೆಯ ಪುರವಣಿಗೆ ಬೈಟು ಕಾಫಿ ಅಂತಾನೇ ಯಾಕೆ ನಾಮಕರಣ ಮಾಡಿದ್ರಿ? ಬೈಟು ಟೀ ಅಂತ ಇಡಬಹುದಿತ್ತಲ್ಲ? ಬೈಟು ಶರಬತ್ತು ಅಂತ ಇಡಬೇಕಾಗಿತ್ತು ಅಂತ ದ.ಕ. ಮಂದಿ ಕೇಳಿದರೆ?! ಕಲಾವಿದ ಸೀನು, ಚಿತ್ರದುರ್ಗ, […]

 • ಸ್ಪೂರ್ತಿಸೆಲೆ – 27 ಸೆಪ್ಟೆಂಬರ್ 2012

  ಎಂಥ ಕೋಪವಾದರೂ ಅರ್ಧಗಂಟೆ ನಂತರ ಇರುವುದಿಲ್ಲ. ಆದರೆ ಕೋಪದಲ್ಲಿ ತೆಗೆದುಕೊಂಡ ಜಿಗುಟು ನಿರ್ಧಾರಕ್ಕೆ ಅನೇಕರು ಸದಾ ಅಂಟಿಕೊಂಡಿರುತ್ತಾರೆ. ಕೋಪಕ್ಕಿಂತ ಇಂಥ ನಿರ್ಧಾರಗಳೇ ನಿಮಗೆ ಮಾರಕವಾಗಬಹುದು.

 • ಗುರುವಾಕ್ಯ ಪರಿಪಾಲನೆಗೆ ಗದ್ದುಗೆಯನ್ನೇ ತೊರೆದರು!

  ಸಿರಿಗೆರೆ ಶ್ರೀಗಳು ರಾಜೀನಾಮೆ ಕೊಟ್ಟರಂತೆ! ಹಾಗಂತ ನಮ್ಮ ವರದಿಗಾರ ಮಿತ್ರ ಹೇಳಿದಾಗ, ‘ರಾಜೀನಾಮೆ ಕೊಡಲು ಅವರೇನು ಮುಖ್ಯಮಂತ್ರಿಯಾ? ಮಂತ್ರಿಯಾ?’ ಎಂದು ಪ್ರಶ್ನಿಸಿದೆ. ಸುದ್ದಿ ಚಾನೆಲ್್ನಲ್ಲಿ ಕೆಲಸ ಮಾಡುವ ಪತ್ರಕರ್ತರು ಯಾವ ಪರಿ ರಾಜಕೀಯ ಸುದ್ದಿಯಲ್ಲಿ, ಅದರ ಗುಂಗಿನಲ್ಲಿ ಮುಳುಗಿರುತ್ತಾರೆ ನೋಡಿ. ‘ಸಾರ್, ಅವರು ಪೀಠ ತೊರೆಯಲು ನಿರ್ಧರಿಸಿದ್ದಾರಂತೆ. ನಿವೃತ್ತಿ ಘೋಷಿಸಿದ್ದಾರಂತೆ. ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದಾರೆ, ಭಕ್ತರು ಕಂಗಾಲಾಗಿದ್ದಾರೆ’ ಎಂದು ವರದಿ ಒಪ್ಪಿಸುತ್ತಿದ್ದ. ಅಷ್ಟರಲ್ಲಿ ಎಲ್ಲ ಚಾನೆಲ್್ಗಳಲ್ಲೂ ಇದೇ ಸುದ್ದಿ ಬ್ರೇಕಿಂಗ್್ನ್ಯೂಸ್ ಆಗಿ ಬಿತ್ತರವಾಗುತ್ತಿತ್ತು. ಈ ಪರಿಸ್ಥಿತಿಯಲ್ಲಿ ಸ್ವಾಮೀಜಿಯವರ […]

 • ಪ್ರೀತಿ, ಮದುವೆ ಅಂದ್ರೆ ಏನು? (ನಂಗೆ ಇಷ್ಟಾನೋ)

  ಪ್ರೀತಿ ಅಂದ್ರೆ ಏನು? ಮದುವೆ ಅಂದ್ರೆ ಏನು? ಹತ್ತರಲ್ಲಿ ಒಂಭತ್ತು ಮಂದಿಗೆ ಇದನ್ನು ವಿವರಿಸಲು ಬರುವುದಿಲ್ಲವಂತೆ. ಹತ್ತನೆಯವನಿಗೆ ಹಾಗಂದ್ರೆ ಏನೆಂಬುದು ಗೊತ್ತಿರುವುದಿಲ್ಲವಂತೆ. ಇದು ವಕ್ರತುಂಡೋಕ್ತಿ ಅಲ್ಲ, ವಾಸ್ತವ. ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಪ್ರೀತಿ ಮತ್ತು ಮದುವೆ ಅಂದ್ರೆ ವಿವರಿಸುವುದು ಕಷ್ಟವೇ. ಸ್ನೇಹಿತರಾದ ಬಿ.ಆರ್. ಶಿವಶಂಕರ ಅವರು ಇತ್ತೀಚೆಗೆ ಇದನ್ನು ಸ್ವಾರಸ್ಯವಾಗಿ ಹೇಳಿದರು. ಒಮ್ಮೆ ವಿದ್ಯಾರ್ಥಿ ಮೇಷ್ಟ್ರನ್ನು ಕೇಳಿದನಂತೆ- ‘ಪ್ರೀತಿ ಅಂದ್ರೆ ಏನು?’ ಮೇಷ್ಟ್ರಿಗೆ ತಟ್ಟನೆ ಹೇಗೆ ಉತ್ತರಿಸಬೇಕೆಂಬುದು ತಿಳಿಯಲಿಲ್ಲ. ವಿದ್ಯಾರ್ಥಿಯನ್ನು ಕರೆದು ಗೋಧಿ ಬೆಳೆದ ಹೊಲಕ್ಕೆ ಹೋಗಿ […]

 • ‘ಇಕಿಯಾ’ದಲ್ಲಿ ವಿಜಯದ ಪಾಠ ಕಂಡೆಯಾ?

  ಇಂಥವರನ್ನು ನೀವು ನೋಡಿರುತ್ತೀರಿ. ಏನಂದ್ರೆ ಅವರು ಯಾವುದರಲ್ಲೂ ಕಮ್ಮಿಯಿರುವುದಿಲ್ಲ. ಅವರಿಗೆ ಯಾವ ಕೊರತೆಯೂ ಇರುವುದಿಲ್ಲ. ಬುದ್ಧಿವಂತರಾ, ಹೌದು ಭಲೇ ಬುದ್ಧಿವಂತರು. ಒಳ್ಳೆಯ ಕೆಲಸವೂ ಇರುತ್ತದೆ. ಕೈ ತುಂಬಾ ಸಂಬಳವೂ. ಮನೆ, ಮಡದಿ ಎಲ್ಲವೂ ಒಪ್ಪವೇ. ಆದರೂ ಪಡಬಾರದ ಪಡಿಪಾಟಲುಗಳನ್ನು ಪಡುತ್ತಿರುತ್ತಾರೆ. ಕೈ ತುಂಬಾ ಸಂಬಳವನ್ನು ದರಕರಿಸದೇ ಮೈತುಂಬಾ ಸಾಲ ಮಾಡಿಕೊಂಡಿರುತ್ತಾರೆ. ಚಟಗಳ ದಾಸರಾಗಿರುತ್ತಾರೆ. ಒಟ್ಟಾರೆಯಾಗಿ ಅವನ ಜೀವನದಲ್ಲಿ ಸೋಲುಗಳು ವಿಜೃಂಭಿಸುತ್ತಿರುತ್ತವೆ. ಅವರಿಗೆ ಅವರ ಯಶಸ್ಸನ್ನೇ ನಿಭಾಯಿಸಲು ಆಗಲಿಲ್ಲವಾ? ವೈಯಕ್ತಿಕ ಜೀವನವನ್ನು ಮುನ್ನಡೆಸಲು ಸೋತರಾ? ಯಾಕೆ ಹೀಗಾಯ್ತು? ಎಲ್ಲಾ […]

 • ಸ್ಪೂರ್ತಿಸೆಲೆ – 06 ಸೆಪ್ಟೆಂಬರ್ 2012

  ನೀವು ಕೋಪಿಷ್ಠರಾದರೆ ನಿಮಗೆ ಬೇರೆ ಯಾವ ವೈರಿಗಳೂ ಬೇಕಾಗಿಲ್ಲ. ನೀವು ಬುದ್ಧಿವಂತರಾಗಿದ್ದರೆ ನಿಮಗೆ ಸಿರಿವಂತರ ಅಗತ್ಯವಿಲ್ಲ. ನಾವು ಹೇಗಿರಬೇಕೆಂಬುದು ನಮಗೆ ಗೊತ್ತಾಗುವಂಥ ವಿವೇಕವನ್ನು ಗಳಿಸಿಕೊಳ್ಳಬೇಕು.