ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for August, 2012

 • ಪರನಿಂದೆಯಲಿ ಪರಮಸುಖ ಅರಸುವ ಪಡಪೋಶಿಗಳು!

  ಆರೇಳು ತಿಂಗಳುಗಳ ಹಿಂದೆ ಇದೇ ಅಂಕಣದಲ್ಲಿ”ಮಾತು ಮನೆ ಕೆಡಿಸಿತು, ಲೂಸ್್ಟಾಕ್ ಪಟ್ಟಣ ಕೆಡಿಸಿತು’ ಎಂಬ ಶೀರ್ಷಿಕೆಯಡಿಯಲ್ಲಿ ಲೂಸ್್ಟಾಕ್ ಮಾಡುವವರ ಬಗ್ಗೆ ಬರೆದಿದ್ದೆ. ಮೇಲಿಂದ ಅತಿ ನಯವಾಗಿ, ಭೇಟಿಯಾದಾಗ ಖಾಸಾಖಾಸ ಸ್ನೇಹಿತರಂತೆ, ತೀರಾ ಆತ್ಮೀಯರಂತೆ ನಗೆಬೀರುವ, ಪ್ರೀತಿ ತೋರುವ, ಕೊರಳಗೆಳೆಯನಂತೆ ಪೋಸು ಕೊಡುವ, ಆದರೆ ಹಿಂದುಗಡೆಯಿಂದ ಕತ್ತು ಕುಯ್ಯುವಂತೆ ಉಡಾಫೆ ಮಾತಾಡುವ ಧಾರವಾಡದ ಸಾಹಿತಿ, ಹಿಂದಿ ಮೇಸ್ಟ್ರು ಡಾ. ಸಿದ್ದಲಿಂಗ ಪಟ್ಟಣಶೆಟ್ಟಿಯವರ ಕುರಿತಾದ ಬರಹ ಅದಾಗಿತ್ತು. ನನಗೆ ಪಾಠ ಮಾಡದಿದ್ದರೂ ಸಾಕ್ಷಾತ್ ಗುರುಗಳೆಂದು ಭಾವಿಸಿದ್ದ ಪಟ್ಟಣಶೆಟ್ಟಿಯವರ ಕುರಿತಾಗಿ ಬರೆಯಬೇಕಾಗಿ […]

 • ಈ ಅನುಮಾನಕ್ಕೆ ಕಾರಣ ನಿಮ್ಮ ಪತ್ರಿಕೆ

  ಬೆಂಗಳೂರು ಬನಶಂಕರಿಯಿಂದ ಸತೀಶ್ ನಾಯಕ್ ಅವರು ಮಿಂಚಂಚೆ ಕಳುಹಿಸಿದ್ದಾರೆ. ಎಷ್ಟು ಫಾಸ್ಟ್ ಅಂದರೆ ಬೆಳಗ್ಗೆ 7:00 ಗಂಟೆಗೆಲ್ಲ ಸತೀಶ್ ಅವರ ಮಿಂಚಂಚೆ ನನ್ನ ಇನ್್ಬಾಕ್ಸ್್ಗೆ ಬಂದು ಬಿದ್ದಿತ್ತು. ಆ.2ರ ಪತ್ರಿಕೆಯಲ್ಲಿ (ಪುಟ 5) ಪ್ರಕಟವಾದ ಗಂಭೀರ ತಪ್ಪಿನ ಕುರಿತು ಅವರು ಗಮನ ಸೆಳೆದಿದ್ದಾರೆ. ಅವರು ಬರೆಯುತ್ತಾರೆ- ‘ಸಂಪಾದಕರೇ, ರಾಜ್ಯದ ಆರೋಗ್ಯ ಸಚಿವರು ಯಾರು? ಎಸ್.ಎ. ರಾಮದಾಸ್ ಅವರಾ? ಅಥವಾ ಅರವಿಂದ ಲಿಂಬಾವಳಿಯವರಾ? ಅಥವಾ ಇಬ್ಬರಿಗೂ ಇಲಾಖೆಯನ್ನು ಹಂಚಲಾಗಿದೆಯಾ?’ ‘ಈ ಅನುಮಾನಕ್ಕೆ ಕಾರಣ ನಿಮ್ಮ ಪತ್ರಿಕೆ. ಪುಟ 5ರಲ್ಲಿ […]

 • ವಕ್ರತುಂಡೋಕ್ತಿ – 03 ಆಗಸ್ಟ್ 2012

  ಮದುವೆ ಆಗೋದು ಅಂದ್ರೆ 64 ಜಿಬಿ ಐಪೋಡ್್ನಲ್ಲಿ ಬರೀ ಒಂದೇ ಒಂದು ಹಾಡನ್ನು ಸ್ಟೋರ್ ಮಾಡಿಟ್ಟುಕೊಂಡ ಹಾಗೆ.

 • ಸ್ಪೂರ್ತಿಸೆಲೆ – 03 ಆಗಸ್ಟ್ 2012

  ದೇವರು ಪ್ರತಿ ಪಕ್ಷಿಗೂ ಆಹಾರವನ್ನು ಕೊಡಬೇಕೆಂದು ನಿರ್ಧರಿಸಿದ್ದಾನೆ ಹಾಗೆಂದು ಅದರ ಗೂಡಿಗೇ ಆಹಾರ ಪೂರೈಸುವುದಿಲ್ಲ. ಪ್ರತಿಯೊಂದು ಜೀವಿಯೂ ತನ್ನ ತುತ್ತಿಗಾಗಿ ಹೋರಾಡಲೇಬೇಕು. ಅದರಲ್ಲಿಯೇ ಸಾರ್ಥಕ್ಯ ಸಿಗುತ್ತದೆ.

 • ಸ್ಪೂರ್ತಿಸೆಲೆ – 01 ಆಗಸ್ಟ್ 2012

  ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಒಂದು ಲಾಭವೆಂದರೆ ಅದನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅಷ್ಟೇ ಅಲ್ಲ ತಾವೂ ಅನುಸರಿಸಲು ಇಷ್ಟಪಡುತ್ತಾರೆ. ಹೀಗಾಗಿ ನಮ್ಮ ಒಳ್ಳೆಯ ಹವ್ಯಾಸಗಳಿಂದ ಎಲ್ಲರನ್ನೂ ಸಂತೋಷಪಡಿಸುವ ಅವಕಾಶವನ್ನು ಕಳೆದುಕೊಳ್ಳಬಾರದು.

 • ವಕ್ರತುಂಡೋಕ್ತಿ – 01 ಆಗಸ್ಟ್ 2012

  ಎಲ್ಲರಿಗೂ ಕೆಟ್ಟ ಮೇಲೆ ಬುದ್ಧಿ ಬರುತ್ತದೆ. ಅದಕ್ಕಿಂತ ಮೊದಲು ಬುದ್ಧಿ ಬರಬೇಕು ಅಂತಾದರೆ ಮೊದಲು ಕೆಡಬೇಕು.

 • ಬಂಗಾರ ಗೆದ್ದವನೂ ಬಹಳ ದಿನ ನೆನಪಲ್ಲಿ ಉಳಿಯಲಾರ, ಹೀಗಾಗಿ…

  ಕೆಲ ವರ್ಷಗಳ ಹಿಂದೆ ರಾಬಿನ್ ಎಸ್. ಶರ್ಮ ಎಂಬ ಆಧುನಿಕ ವ್ಯಕ್ತಿತ್ವ ವಿಕಸನ (Personality Developmentಿ) ಗುರುವನ್ನು ಭೇಟಿ ಮಾಡಿದ್ದೆ. ಭಲೇ ಲವಲವಿಕೆಯ ಮನುಷ್ಯ. ಆಪ್ತವಾಗಿ ಮಾತನಾಡುತ್ತಾನೆ. ಪುಟ್ಟ ಪುಟ್ಟ ಪ್ರಸಂಗಗಳನ್ನು ಹೇಳಿ ಗಮನ ಸೆಳೆಯುತ್ತಾನೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಚರ್ವಿತಚರ್ವಣಗಳನ್ನು ಬಡಬಡಿಸುವುದಿಲ್ಲ. ಹಳೇ ಜೋಕುಗಳನ್ನು ಹೇಳಿ ಹಿಂಸಿಸುವುದಿಲ್ಲ. ವ್ಯಕ್ತಿತ್ವ ವಿಕಸನ ಪಾಠ, ಕಾರ್ಯಾಗಾರಗಳನ್ನೇ ಕಸುಬಾಗಿ ಮಾಡಿಕೊಂಡ ಶಿವಖೇರ, ಆ್ಯಂಥೋನಿ ವಿಲಿಯೆಮ್ಸ್, ಡಾ. ಭರತಚಂದ್ರ, ಯಂಡಮೂರಿ ವೀರೇಂದ್ರನಾಥ (ಹೊಸ ಸೇರ್ಪಡೆ) ಮುಂತಾದವರೊಂದಿಗೆ ಮಾತನಾಡುವಾಗ ಸಿದ್ಧ ಪಾಶ್ಚಿಮಾತ್ಯ ಮಾದರಿಯನ್ನು […]

 • ಪಿಕ್ ಪಾಕೆಟ್ – 01 ಆಗಸ್ಟ್ 12

 • ಜಾಹೀರಾಯ್ತು – 01 ಆಗಸ್ಟ್ 12