ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for May, 2012

 • ಸ್ಪೂರ್ತಿಸೆಲೆ – 28 ಮೇ 2012

  ಹೃದಯ ಶ್ರೀಮಂತಿಕೆ ಮುಂದೆ ಉಳಿದುದೆಲ್ಲವೂ ಗೌಣ. ನೀವು ಕಿಸೆಯಲ್ಲಿ ಎಷ್ಟೇ ತುಂಬಿಕೊಂಡರೂ ಅದು ಕೆಲವೇ ದಿನಗಳಿಗೆ ಸಾಕಾಗಬಹುದು. ಅದೇ ಹೃದಯದಲ್ಲಿ ತುಂಬಿಕೊಂಡರೆ ಜೀವನಪರ್ಯಂತ ಸಾಕಾಗುತ್ತದೆ. ಹೃದಯ ಶ್ರೀಮಂತಿಕೆ ಮುಂದೆ ಉಳಿದುದೆಲ್ಲವೂ ಗೌಣ.

 • ಮೈಸೂರಿನಲ್ಲಿ ಸುವರ್ಣ ವೀಕ್ಷಕರೊಂದಿಗೆ ಸಂವಾದ, ಬನ್ನಿ !

 • ಕುರ್ಚಿಯಿಂದ ಇಳಿಯಲಾರೆ ಎಂದು ಡಿವಿಸ್ ಹೇಳಿದ್ದೇಕೆ?

  ‘ಈ ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡೋಣ. ಬಹಳ ನಂಬಿಕಸ್ಥ. ನಾನು ಹೇಳಿದಂತೆ ಕೇಳುತ್ತಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿ ಎಂದಾಗ ಕೆಳಗಿಳಿಯುತ್ತಾರೆ. ಅವರನ್ನು ಮುಂದಿಟ್ಟುಕೊಂಡು ನಾನೇ ರಾಜ್ಯವಾಳಬಹುದು.’ ಹೀಗಂತ ಬಿ.ಎಸ್. ಯಡಿಯೂರಪ್ಪನವರು ಯೋಚಿಸಿ ಸದಾನಂದಗೌಡರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳ್ಳಿರಿಸಿದರು ತಾನೆ? ಆದರೂ ಗೌಡರು ಯಡಿಯೂರಪ್ಪನವರಿಗೆ ಕೈಯೆತ್ತಿದ್ದೇಕೆ? ಮೋಸ ಮಾಡಿದ್ದೇಕೆ? ಅದಕ್ಕೆ ಕಾರಣ ಯಡಿಯೂರಪ್ಪನವರು ಈಗ ನಾನು ಹೇಳಲಿರುವ ಕತೆ ಕೇಳದಿರುವುದು. ಕೇಳಿದ್ದರೆ ಖಂಡಿತವಾಗಿಯೂ ಹಾಗೆ ಮಾಡುತ್ತಿರಲಿಲ್ಲ. ಬಡ ಯುವಕನೊಬ್ಬ ಚೆನ್ನಾಗಿ ಓದಿ, ಸಾಕಷ್ಟು ಪರಿಶ್ರಮದಿಂದ ಅಮೆರಿಕಕ್ಕೆ ಹೋದ. ಅಲ್ಲಿ […]

 • ನಿದ್ದೆಗಣ್ಣಿನಲ್ಲಿ ಬಾಗಿಲನ್ನು ತಟ್ಟಬೇಕೋ, ಕುಟ್ಟಬೇಕೋ ?

  ತಪ್ಪಾಯ್ತು ತಿದ್ಕೋತೀವಿ ಅಂಕಣದಲ್ಲಿ ಪ್ರಕಟವಾದ ಪತ್ರವೊಂದಕ್ಕೆ ಆನಂದರಾಮ ಶಾಸ್ತ್ರಿಯವರು ಪ್ರತಿಕ್ರಿಯಿದ್ದಾರೆ. ಅವರ ಪತ್ರವನ್ನು ಇಲ್ಲಿ ಯಥಾವತ್ತಾಗಿ ನೀಡುತ್ತಿದ್ದೇನೆ. ಆಸಕ್ತಿಕರವಾಗಿದೆ. ಓದಿಕೊಳ್ಳಿ. ‘ಮೇ 10ರ ಸಂಚಿಕೆಯಲ್ಲಿ ನೀಲಕಂಠ ಶಾಸ್ತ್ರಿ ಅವರ ಪ್ರಶ್ನೆಗಳಿಗೆ ನೀವು ‘ತಪ್ಪಾಯ್ತು ತಿದ್ಕೋತೀವಿ ಅನ್ನೋದು ಬಿಟ್ಟರೆ ಬೇರೆ ಉತ್ತರ ನೀಡಲು ಸಾಧ್ಯವೇ ಇಲ್ಲ’ ಎಂದು ಉತ್ತರಿಸುವ ಮೂಲಕ ಸಂಪೂರ್ಣ ಶರಣಾಗತಿ ಘೋಷಿಸಿಬಿಟ್ಟಿದ್ದೀರಿ. (ಶರಣಾಗತಿ ಶಬ್ದವನ್ನು ಸರಸಕ್ಕಾಗಿ ಬಳಸಿದ್ದೇನೆ. ತಪ್ಪಾಗಿ ತಿಳ್ಕೋಬೇಡಿ) ಬೇರೆ ಉತ್ತರ ನೀಡಲು ಏಕೆ ಸಾಧ್ಯವಿಲ್ಲ. ನೀಲಕಂಠ ಶಾಸ್ತ್ರಿ ಅವರ ಬಹುಪಾಲು ಪ್ರಶ್ನೆಗಳಿಗೆ ಆನಂದರಾಮ […]

 • ವಕ್ರತುಂಡೋಕ್ತಿ – 21 ಮೇ 2012

  ಅವರು ಟಾಯ್ಲೆಟ್್ನಲ್ಲಿ ಸಂಗೀತ ಕೇಳುತ್ತ ಪೇಪರ್ ಓದುತ್ತಿರುತ್ತಾರೆ. ಕೆಲವರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ (ಮಲ್ಟಿಟಾಸ್ಕ್) ಮಾಡುತ್ತಾರೆ. ಅವರು ಟಾಯ್ಲೆಟ್್ನಲ್ಲಿ ಸಂಗೀತ ಕೇಳುತ್ತ ಪೇಪರ್ ಓದುತ್ತಿರುತ್ತಾರೆ.

 • ಸ್ಪೂರ್ತಿಸೆಲೆ – 17 ಮೇ 2012

  ಒಂದೋ ಸರಿಯಾಗಿ ತಿಳಿಯಲು ಕೇಳಿಸಿಕೊಳ್ಳುವುದಿಲ್ಲ, ಇಲ್ಲವೇ ಒಂದೋ ಸರಿಯಾಗಿ ತಿಳಿಯಲು ಕೇಳಿಸಿಕೊಳ್ಳುವುದಿಲ್ಲ, ಇಲ್ಲವೇ ಸಿದ್ಧ ಉತ್ತರ ನೀಡಲು ಕೇಳಿಸಿಕೊಳ್ಳುವುದರಿಂದ ನಮ್ಮ ಸಮಸ್ಯೆಗಳು ಆರಂಭವಾಗುತ್ತವೆ. ಬೇರೆಯವರು ಹೇಳುವುದನ್ನು ಕೇಳುವ ಸಹನೆ, ವ್ಯವಧಾನ ಇರಬೇಕು.

 • ದೇವರ ಮೇಲೆ ನಂಬಿಕೆ ಇದ್ದರೆ ತರ್ಕವನ್ನು ಗೌರವಿಸಬಾರದಾ?

  ಬಾಳಿಗೊಂದು ನಂಬಿಕೆ ಇರಬೇಕು ಖರೆ. ಆ ಬಗ್ಗೆ ದೂಸರಾ ಮಾತೇ ಇಲ್ಲ. ಆದರೆ ನಾವು ಭಾರತೀಯರ ಮೇಲೆ ಒಂದು ಆರೋಪವಿದೆ. ಅದೆಂದರೆ, ನಮಗೆ ವೈಜ್ಞಾನಿಕ ಮನೋಭಾವ ಇಲ್ಲ ಅನ್ನೋದು. ಅಂದರೆ ನಾವೇನೋ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಹಿಂದುಳಿದುಬಿಟ್ಟಿದ್ದೇವೆ, ತಂತ್ರಜ್ಞಾನದಲ್ಲಿ ನಾವು ಗ್ರೇಸ್್ಮಾರ್ಕ್ ಪಡೆಯುವುದಕ್ಕೂ ತಡಬಡಾಯಿಸುತ್ತಿದ್ದೇವೆ ಎಂಬ ಚಿಂತನೆಯ ಮುನ್ನುಡಿಯೇನೂ ಇದಲ್ಲ. ಬದಲಿಗೆ ನಮ್ಮ ನಿತ್ಯಜೀವನದಲ್ಲಿ ನಾವು ವರ್ತಿಸುತ್ತಿರುವ ರೀತಿ-ನೀತಿ ಎಂಥಾದ್ದು ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಕಮ್ಮಿ ಇದೆ ಎಂಬುದನ್ನು ಬಡಪೆಟ್ಟಿಗೆ ತಳ್ಳಿಹಾಕಲಿಕ್ಕಾಗುವುದಿಲ್ಲ. ನಾವು […]

 • ಸ್ಪೂರ್ತಿಸೆಲೆ – 17 ಮೇ 2012

  ನೀವು ಸದಾ ನಗುತ್ತಿದ್ದರೆ ಅದು ನಿಮ್ಮ ಮನಸ್ಸಿನ ಭಾವನೆಯನ್ನು ತೋರಿಸುತ್ತದೆ. ಅದೇ ನೀವು ಬೇರೆಯವರ ನಗುವಿಗೆ ಕಾರಣರಾದರೆ, ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ನೀವು ನಗಿ, ಬೇರೆಯವರ ನಗುವಿಗೂ ಕಾರಣರಾಗಿ.

 • ವಕ್ರತುಂಡೋಕ್ತಿ – 16 ಮೇ 2012

  ಬಾಲ್ಯವೆನ್ನುವುದು ನಶೆಯಿದ್ದಂತೆ. ನೀವೇನು ಮಾಡಿದಿರಿ ಅನ್ನುವುದು ಎಲ್ಲರಿಗೂ ಗೊತ್ತಿರುತ್ತದೆ, ಆದರೆ ನಿಮಗೊಂದೇ ಗೊತ್ತಿರುವುದಿಲ್ಲ!

 • ಕನ್ನಡಪ್ರಭ’ದಲ್ಲಿ ಸುದ್ದಿಗೆ ಕೊರತೆಯೇ? ಅಥವಾ ಸಿಬ್ಬಂದಿ ಕೊರತೆಯೇ?

  ‘ಸ್ವಾಮಿ, ‘ಕನ್ನಡಪ್ರಭ’ದಲ್ಲಿ ಸುದ್ದಿಗೆ ಕೊರತೆಯೇ? ಅಥವಾ ಸಿಬ್ಬಂದಿ ಕೊರತೆಯೇ?’ ಎಂದು ಮೈಸೂರಿನ ನೀಲಕಂಠ ಶಾಸ್ತ್ರಿ ಕೇಳಿದ್ದಾರೆ. ಕಾರಣವೇನೆಂದರೆ ಮೇ.8ರಂದು (ಪುಟ 8) ಒಂದೇ ಸುದ್ದಿ ಎರಡು ಬಾರಿ ಪ್ರಕಟವಾಗಿದೆ. ಅವರು ಬರೆಯುತ್ತಾರೆ- ‘ಸ್ವಾಮಿ ಸಂಪಾದಕರೇ, ‘ಕನ್ನಡಪ್ರಭ’ ಪತ್ರಿಕೆಗೆ ಸುದ್ದಿ ಕೊರತೆ ಇದೆಯೇ? ಅಥವಾ ಸಿಬ್ಬಂದಿ ಕೊರತೆ ಇದೆಯೇ? ಇದೆರಡೂ ಇಲ್ಲವೆಂದಾದಲ್ಲಿ ಒಂದೇ ಸುದ್ದಿಯನ್ನು ಎರಡು ಬಾರಿ ಏಕೆ ಪ್ರಕಟಿಸಿದ್ದೀರಿ? ಅದೂ ಒಂದರ ಕೆಳಗೆ ಇನ್ನೊಂದು. ಇದರರ್ಥ ನೀವು ಪುಟವನ್ನು ಗಮನವಿಟ್ಟು ನೋಡುವುದಿಲ್ಲ ಎಂದಲ್ಲವೇ?’ ‘8ನೇ ಪುಟದಲ್ಲಿ ‘ಕೊಲೆ […]