ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for April, 2012

 • ಯಶಸ್ಸು ಗಳಿಸುವುದು ಕಷ್ಟವಲ್ಲ, ಆದರೆ ಇಟ್ಟುಕೊಳ್ಳುವುದು!

  ಅನೇಕ ಮಂದಿ ಜೀವನದಲ್ಲಿ ಎಡವುತ್ತಾರೆ, ಸೋಲುತ್ತಾರೆ. ಹಾಗೆಂದು ಇವರು ಸಾಮಾನ್ಯರಲ್ಲ. ಅವರವರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮೆರೆದವರೇ. ಯಶಸ್ಸಿನ ನೆತ್ತಿ ಮೇಲೆ ಗುದ್ದಿ ಗೆಲುವನ್ನು ಎದೆಗವಚಿಕೊಂಡವರೇ. ಇಂಥ ಯಶಸ್ವಿ ವ್ಯಕ್ತಿಗಳು ವೈಯಕ್ತಿಕ ಜೀವನದಲ್ಲಿ ಮುಗ್ಗರಿಸುತ್ತಾರೆ. ಬಾಳನ್ನು ಗಾಳುಮೇಳಾಗಿಸಿಕೊಂಡು ತೊಳಲಾಡುತ್ತಾರೆ. ಇಂಥವರ ಬಹಳ ದೊಡ್ಡ ದುರಂತವೇನೆಂದರೆ ಇವರಿಗೆ ತಮಗೆ ಒದಗಿ ಬಂದ ಯಶಸ್ಸನ್ನು ಹೇಗೆ ನಿಭಾಯಿಸಬೇಕೆಂಬುದು ಗೊತ್ತಿಲ್ಲದಿರುವುದು. ಯಶಸ್ಸೇ ಅವರಿಗೆ ಮುಳುವಾಗಿರುತ್ತದೆ. ಯಶಸ್ಸನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಗೊತ್ತಿಲ್ಲದೇ, ತಲೆಯ ಕಿರೀಟವೇ ಭಾರವಾದಂತಾಗಿ ಇನ್ನಿಲ್ಲದ ಸಮಸ್ಯೆಗೆ ಈಡುಮಾಡಿಕೊಳ್ಳುತ್ತಾರೆ. ಹೀಗಾಗಿ ಯಶಸ್ಸು […]

 • ಭೀಮಾ ತೀರದಲ್ಲೀಗ ಶಾಂತಿಯ ತೇರು (ಭಾಗ-2)

  “ದೇವಣಗಾಂವ ಮತ್ತು ಸೊನ್ನ ಗ್ರಾಮದಲ್ಲೀಗ ಜಾತಿ ಜಗಳದ ರಗಳೆ ಇಲ್ಲ. ಬಂದೂಕಿನ ಸಪ್ಪಳವಂತೂ ಮೊದಲೇ ಇಲ್ಲ. ಯಾರೋ ಬಿತ್ತಿದ ದ್ವೇಷದ ಬೀಜದ ಪರಿಣಾಮ ದೂರಾಗಿದ್ದ ಕುಟುಂಬಗಳು ಒಂದಾಗಿವೆ. ಕೋಮು ಸಾಮರಸ್ಯಕ್ಕೆ ಮಾದರಿ ಎನಿಸಿಕೊಂಡಿವೆ ಈ ಹಳ್ಳಿಗಳು” ದೇವಣಗಾಂವ(ಬಿಜಾಪುರ): ಆ ಹಳ್ಳಿಗೆ ಸುರಕ್ಷಿತವಾಗಿ ಹೋಗಿ ಬರಬಹುದಾ? ಏನೂ ಅಪಾಯ ಇಲ್ಲ ತಾನೆ..? ದೇವಣಗಾಂವಕ್ಕೆ ಹೊರಡುವ ಮುನ್ನ ಬಿಜಾಪುರದಲ್ಲಿ ಈ ಪ್ರಶ್ನೆ ಕೇಳಿದಾಗ ಅಲ್ಲಿಯ ಜನ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದ್ದು,”ಹೋಗಿ ಬರ್ರಿ, ನಿಮಗೇ ಗೋತ್ತಾಗತೈತಿ’. ಬಿಜಾಪುರದಿಂದ ಹೊರಟು […]

 • The Bofors Story, 25 years after

  “I knew what I was doing when I leaked the documents to you. I could not count on my government or Bofors or the government of India to get to the bottom of this.” STEN LINDSTROM explains why he chose to turn whistleblower to CHITRA SUBRAMANIAM-DUELLA Posted/Updated Tuesday, Apr 24 11:19:37, 2012   April 2012 marks the 25 […]

 • ಭೀಮಾ ತೀರದಲ್ಲಿ ‘ಕನ್ನಡಪ್ರಭ’ ವರದಿಗಾರನಿಗೆ ಕಂಡಿದ್ದೇನು? – 1

  ಭೀಮಾ ತೀರದ ಕೊಲೆಗಳಿಗೆ ಅನಕ್ಷರತೆ, ಬಡತನ ಕಾರಣ ಎಂದು ತೀರ್ಪು ಕೊಟ್ಟವರು ಯಾರ್ರೀ? ನಮ್ಮ ಊರಿನ ಮಾನ ಮರ್ಯಾದೆ ಈ ಕೊಲೆಗಳಿಂದ ಹೋಗಲಿಲ್ಲ. ಪುಸ್ತಕ ಬರೆದ್ರಲ್ಲ, ಅವರಿಂದಲೇ ಹೋಗಿದ್ದು. ನಾವು ಹಂತಕರಲ್ರೀ.. (ಭೀಮಾ ತೀರದ ಅಮಾಯಕರು) ಕನ್ನಡಪ್ರಭ ವಾರ್ತೆ ದೇವಣಗಾಂವ (ಬಿಜಾಪುರ) ಏ.21 ಭೀಮಾ ತೀರದಲ್ಲಿ ಆಗಿ ಹೋದ ಕೊಲೆಗಳಿಗೆ ಬಡತನ ಮತ್ತು ಅನಕ್ಷರತೆ ಕಾರಣವಾಗಿತ್ತೇ..? ಇಂಥದೊಂದು ಪ್ರಶ್ನೆಯನ್ನು ಭೀಮಾ ತೀರದ ಹಂತಕರು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿದ್ದವರ ಪ್ರಮುಖ ತಾಣವಾಗಿದ್ದ ದೇವಣಗಾಂವ ಮತ್ತು ಸೊನ್ನ ಗ್ರಾಮದ ಜನರನ್ನು […]

 • ಜಾಹೀರಾಯ್ತು – 24 ಏಪ್ರಿಲ್ 2012

 • ಸಂದರ್ಭವೆಂಬುದು ಹೇಳಿ ಕೇಳಿ ಬರುವುದಿಲ್ಲ !  

  ಮೂವತ್ತು ವರ್ಷ ವಯಸ್ಸಿನ ಒಬ್ಬ ಯುವಕನಿದ್ದ. ಆತ ರೂಪವಂತ. ಗುಣವಂತ. ಅಷ್ಟೊಂದು ಚಿಕ್ಕ ವಯಸ್ಸಿಗೇ ಎರಡೆರಡು ಡಿಗ್ರಿ ಮಾಡಿಕೊಂಡಿದ್ದ. ಒಂದು ದೊಡ್ಡ ಕಂಪನಿಯಲ್ಲಿ ಅತ್ಯುತ್ತಮ ಸಂಬಳದ ನೌಕರಿಯೂ ಅವನಿಗಿತ್ತು. ಅವನ ಸೌಂದರ್ಯ, ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ ಹಾಗೂ ನೌಕರಿ… ಈ ಎಲ್ಲವನ್ನೂ ಗಮನಿಸಿದ ಹಲವರು ಅವನನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ನಾಮುಂದು-ತಾಮುಂದು ಎಂದು ಬರತೊಡಗಿದರು. ಕನ್ಯಾಪಿತೃಗಳ ಮಾತು ಒತ್ತಟ್ಟಿಗಿರಲಿ; ಈ ಚೆಲುವನನ್ನು ಬುಟ್ಟಿಗೆ ಹಾಕಿಕೊಳ್ಳಲೆಂದು ಅದೆಷ್ಟೋ ತರುಣಿಯರು ಮುಂದಾದರು. ಅಂಥ ಸಂದರ್ಭಗಳಲ್ಲೆಲ್ಲ- ‘ನೀನು ನನ್ನಷ್ಟು ಸುಂದರವಾಗಿಲ್ಲ’, ‘ನೀನು ನನಗಿಂತ […]

 • ಸ್ಪೂರ್ತಿಸೆಲೆ – 21 ಏಪ್ರಿಲ್ 2012

  ಯಾರೂ ಸಹ ಪರಿಪೂರ್ಣ ಅಲ್ಲ ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ. ಯಾರು ಬೇಕಾದರೂ ಬದಲಾಗುತ್ತಾರೆ ಎಂಬುದು ವರ್ತಮಾನದಿಂದ ತಿಳಿಯುತ್ತದೆ. ಪ್ರತಿದಿನವೂ ಪಾಠ ಕಲಿಯಬೇಕು. ಕಲಿಕೆಗೆ ಕೊನೆ ಇಲ್ಲ.

 • ವಕ್ರತುಂಡೋಕ್ತಿ – 21 ಏಪ್ರಿಲ್ 2012

  ನಾವೆಲ್ಲ ‘ರಾಕೆಟ್ ಸಿದ್ಧಾಂತ’ದಂತೆ ಕೆಲಸ ಮಾಡುತ್ತೇವೆ. ಇದರ ಅರ್ಥ ಎತ್ತರಕ್ಕೆ ಜಿಗಿಯುತ್ತೇವೆ ಎಂದಲ್ಲ. ಬಾಲಕ್ಕೆ ಬೆಂಕಿಯಿಡದಿದ್ದರೆ ಸ್ವಲ್ಪವೂ ಕದಲುವುದಿಲ್ಲ.

 • ನಾನೊಬ್ಬನೇ ಏನು ತಾನೆ ಮಾಡಲು ಸಾಧ್ಯ?

  ನನ್ನೊಬ್ಬನಿಂದ ಏನಾಗುತ್ತದೆ? ನಾನೊಬ್ಬನೇ ಏನು ತಾನೆ ಮಾಡಲು ಸಾಧ್ಯ? ನಾನು ಒಬ್ಬಂಟಿಯಾಗಿಬಿಟ್ಟೆ. ಇಲ್ಲದಿದ್ದರೆ ಏನು ಮಾಡುತ್ತಿದ್ದೆ ಗೊತ್ತಾ? ಇಂಥ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ನನ್ನೊಬ್ಬನಿಂದ ಏನೂ ಸಾಧ್ಯವಿಲ್ಲ ಎಂಬುದು ಹಲವರ ಅಭಿಮತ. ಒಬ್ಬ ವ್ಯಕ್ತಿ ಹೆಚ್ಚೆಂದರೆ ಏನು ಮಾಡಬಹುದು? ಅವೆಲ್ಲ ನನ್ನಿಂದ ಆಗುಹೋಗುವ ಕಥೆಯಾ? ಎಂದು ನಾವೂ ಸಹ ಹೇಳಿ ಕೈ ಚೆಲ್ಲುತ್ತೇವೆ. ಇದರರ್ಥ ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ವಿಶ್ವಾಸವಿಲ್ಲ ಎಂದಂತಾಯಿತು. ನಾನೊಬ್ಬನೇ ಏನನ್ನೂ ಮಾಡಲಾರೆ. ಬೇರೆಯವರ ನೆರವಿಲ್ಲದೇ ನನ್ನಿಂದ ಏನೂ ಮಾಡಲು ಆಗುವುದಿಲ್ಲ […]

 • ಕೈ ಹಿಡಿದು ಜಗ್ಗಿದ ಆ ಒಂದು ವಾಕ್ಯದ ಕುರಿತು

  ಸಮಕಾಲೀನ ವಸ್ತುಸ್ಥಿತಿಯತ್ತ ಗಮನಹರಿಸಿದಾಗ ಶೀತಲ ಸಮರದ ದಿನಗಳನ್ನು ದಾಟಿ ಜಗತ್ತು ಜಾಗತೀಕರಣದ ಕಪಿಮುಷ್ಟಿಯ ಹೊಡೆತಕ್ಕೆ ಸಿಕ್ಕು ತತ್ತರಿಸುತ್ತಿರುವ ಸಂಗತಿ ಪಾಶ್ಚಾತ್ಯ ದೇಶಗಳ ಚಿಂತಕರನ್ನು ಸಹಜ ಆತಂಕಕ್ಕೆ ಗುರಿ ಮಾಡಿರುವ ಈ ಸನ್ನಿವೇಶ ನಮ್ಮ ಮುಂದೆ ಒದಗಿಬರುವ ಸಮಾಜದ ನೈಜ ಚಿತ್ರಣದ ದಿಕ್ಕು ದೆಸೆಗಳನ್ನು ವಸಾಹತುಶಾಹಿ ದಿನಗಳ  ವಿಸ್ಮೃತಿಯಂತೆ ಗೋಚರಿಸಿದರೂ ಅದು ನಮ್ಮ ನಡುವೆ ಮನೆ ಮಾಡಿರುವ ಆರೋಗ್ಯಕರ ಮನಸ್ಸುಗಳ ಮಧ್ಯೆ ವಿಘಟಿತ ಆಕ್ರೋಶಗಳ ಒಟ್ಟಂದದ ಫಲವಾಗಿ ಕಾಣದೇ ಒಂದು ಸಮೂಹದ ಪ್ರಜ್ಞೆಯಾಗಿ ಕಾಣುತ್ತಿರುವುದು ಹಾಗೂ ಈ ಚಿಂತನೆಯ […]