Date archive for February, 2012
-
ನಿಮ್ಮ ಜೀವ ಉಳಿಸುವ ಪ್ಯಾರಚೂಟ್ ಯಾರ ಬಳಿಯಿದೆಯೋ?
ಪ್ರತಿದಿನ ನಮ್ಮ ಸುತ್ತ ಮುತ್ತ ಅವೆಷ್ಟೋ ಜನ ಓಡಾಡುತ್ತಿರುತ್ತಾರೆ. ಒಮ್ಮೊಮ್ಮೆ ನಾವು ಅವರನ್ನು ಕಣ್ಣೆತ್ತಿಯೂ ನೋಡಿರುವುದಿಲ್ಲ. ಒಮ್ಮೆ ನೋಡಿದರೂ ‘ಹೇಗಿದ್ದೀಯಾ? ಊಟ ಆಯ್ತಾ? ಚೆನ್ನಾಗಿದ್ದೀಯಾ ತಾನೆ? ಗುಡ್ ಮಾರ್ನಿಂಗ್್’ ಅಂತಾನೂ ಹೇಳಿರುವುದಿಲ್ಲ. ನಮಗೂ ಅವರಿಗೂ ಯಾವುದೇ ಸಂಬಂಧವೇ ಇಲ್ಲ ಎನ್ನುವ ರೀತಿ ಇರುತ್ತೇವೆ. ಹಾಗಂತ ಅವರು ನಮ್ಮ ಜತೆಯೇ ಕೆಲಸ ಮಾಡುತ್ತಿರುತ್ತಾರೆ.
ಮನೆಗೆ ಪೇಪರ್ ಹಾಕುವವ, ಹಾಲು, ಹೂವು ಕೊಡುವವಳು, ಮನೆಗೆಲಸದವಳು, ಆಫೀಸಿನಲ್ಲಿ ಅಟೆಂಡರ್ ಸಹಿತ ದಿನಕ್ಕೆ ನಲವತ್ತು-ಐವತ್ತು ಮಂದಿ ನಮ್ಮ ಸುತ್ತಲೂ ಇದ್ದರೂ ಅವರನ್ನು ನಾವು ಅಷ್ಟಾಗಿ [...] -
ಸ್ಪೂರ್ತಿಸೆಲೆ – 27 ಫೆಬ್ರವರಿ 2012
ನಗು ಹಾಗೂ ಮೌನದಿಂದ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಬಹುದು. ನಗುವಿನಿಂದ ಸಮಸ್ಯೆಗೆ ಪರಿಹಾರ ನೀಡಬಹುದು. ಮೌನದಿಂದ ಸಮಸ್ಯೆ ಉದ್ಭವಿಸುವುದನ್ನೇ ತಡೆಯಬಹುದು.
-
ವಕ್ರತುಂಡೋಕ್ತಿ – 27 ಫೆಬ್ರವರಿ 2012
ಗಂಡಸು ಎಂಬುದನ್ನು ಸಾಬೀತುಪಡಿಸುವುದಕ್ಕೆ ಮಾಡಬಹುದಾದ ಸುಲಭ ಉಪಾಯವೆಂದರೆ ಸುಮ್ಮನಿರುವುದು.
-
ಓದುಗರೊಂದಿಗೆ ಬಾಂಧವ್ಯಕ್ಕೆ ಕಾರಣವಾಗಿರುವುದು ಅಂಕಣದ ದೊಡ್ಡ ಸಾರ್ಥಕತೆ
ಈ ಅಂಕಣವು ಕೇವಲ ತಪ್ಪುಗಳ ಪಟ್ಟಿಯನ್ನು ಮಾತ್ರ ಒಪ್ಪಿಸುವ, ಒಪ್ಪಿಕೊಳ್ಳುವ ಜಾಗ ಎಂದು ಭಾವಿಸಬೇಕಿಲ್ಲ. ಆಗಾಗ ಕೆಲ ವಿಷಾಯಾಧಾರಿತ ಹರಟೆ ಹಾಗೂ ತಪ್ಪು ಗುರುತಿಸುವ ಓದುಗರ ಮನಸ್ಸು ಬಿಚ್ಚಿಕೊಳ್ಳುವುದಕ್ಕೂ ಇಲ್ಲಿ ಅವಕಾಶ ಕೊಡುತ್ತಲೇ ಬಂದಿದ್ದೇನೆ. ಪತ್ರಿಕೆಯ ಮೇಲೆ ಪ್ರೀತಿಯಿರಿಸಿಕೊಂಡು ಕೆಲವರು ಬೆಚ್ಚಗಿನ ಮುನಿಸು ತೋರಿದಾಗಲೂ ಅದನ್ನು ಪುರಸ್ಕರಿಸಲಾಗಿದೆ. ತಪ್ಪು ತೋರಿಸುವ ಅವಕಾಶವನ್ನು ಸುಮ್ಮನೇ ಒಂದು ಕಲ್ಲು ತೂರಿ ಬಿಡೋಣ ಎಂಬಂತೆ ಕಂಡವರನ್ನು ಮಾತ್ರವೇ ತುಸು ಪಕ್ಕಕ್ಕೆ ಇರಿಸಿರುವುದು.
ಅರಸೀಕೆರೆಯಿಂದ ಪತ್ರ ಬರೆದಿರುವ ಎಚ್. ಎಸ್. ನಾಗೇಂದ್ರರಾವ್ ಅವರ ಮುನಿಸು [...] -
ಜಾಹೀರಾಯ್ತು – 24 ಫೆಬ್ರವರಿ 2012
-
ಎಲ್ಲೋ ಇರುವ ನೋವು, ಬೇಸರ, ಹತಾಶೆ ಈ ಮೂಲಕ ಹರಿದು ಹೋಗಲಿ!
ಕೆಲ ದಿನಗಳ ಹಿಂದೆ ಯಜ್ನೇಶ್ ಅವರು ತಮ್ಮ ವಿಸಾ ತಡವಾಗುತ್ತಿರುವುದರ ಕುರಿತು ಮತ್ತು ಆ ಬಗ್ಗೆ ತಾವು ಯಾವ ಮನಸ್ಠಿತಿ ಹೊಂದಿದ್ದೇನೆಂಬುದನ್ನು ತುಂಬಾ ಆರೋಗ್ಯಪೂರ್ಣ ಚಿಂತನೆಯಿಂದ ಬರೆದಿದ್ದರು. ಅದಾಗಿ ಕೆಲ ದಿನಗಳ ಬಳಿಕ ಅವರಿಗೆ ವಿಸಾ ಬಂತು. ಈಗ ಅವರು ಅಮೆರಿಕಕ್ಕೆ ಹೋಗಿ ಅಲ್ಲಿ ನೆಲೆಸಿದ್ದಾರೆ. ಅಲ್ಲಿನ ತಮ್ಮ ಆರಂಭಿಕ ದಿನಗಳ ಬಗ್ಗೆ ಅವರು ಬರೆದಿದ್ದಾರೆ. ಇದನ್ನು ಇಲ್ಲಿ ಯಥಾವತ್ತು ನೀಡುತ್ತಿದ್ದೇನೆ.
** ** ** ** [...] -
ಮೊದಲು ತಪ್ಪು ಹುಡುಕೋದು ಸುಲಭವಾಗ್ತಿತ್ತು. ಈಗ ಅದೇ ಕಷ್ಟವಾಗಿದೆ !
ಅಬಕಾರಿ ಸಚಿವ ರೇಣುಕಾಚಾರ್ಯ ಅವರ ಕುರಿತು ರಾಘವೇಂದ್ರ ಭಟ್ ಬರೆದ ವರದಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಅದರ ಶೀರ್ಷಿಕೆ ಓದುಗರನ್ನು ಆಕರ್ಷಿಸಿದೆ. ಈ ಬಗ್ಗೆ ಮೈಸೂರು ಕೃಷ್ಣಮೂರ್ತಿಪುರಂ ನಿವಾಸಿ ಎಸ್. ರಾಘವೇಂದ್ರ ಅವರು ಮಿಂಚಂಚೆ ಕಳುಹಿಸಿದ್ದಾರೆ.
ಅವರು ಬರೆಯುತ್ತಾರೆ- ‘ಪತ್ರಿಕೆಯ ಒಳಪುಟಗಳಲ್ಲೇ ಸುದ್ದಿ ಮಾಡುತ್ತಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ಫೆ.21ರಂದು ಮುಖಪುಟದಲ್ಲಿ ಸುದ್ದಿ ಮಾಡಿದ್ದು, ಓದುಗರು ಲೇಖನವನ್ನು ಆಸಕ್ತಿಯಿಂದ ಓದುವಂತೆ ಮಾಡಿತು. ‘ರೇಣುವಿಗೆ ಜನರೇನು ತೃಣಕಾಷ್ಟವೇ?’ ಶೀರ್ಷಿಕೆ ಸೊಗಸಾಗಿ ಬಂದಿದೆ. ವರದಿ ಬರೆದ ರಾಘವೇಂದ್ರ [...] -
ವಕ್ರತುಂಡೋಕ್ತಿ – 24 ಫೆಬ್ರವರಿ 2012
ವರ್ತಮಾನವನ್ನು ನಗುತ್ತಲೇ ಕಳೆಯುವುದಕ್ಕೆ ಪ್ರಯತ್ನಿಸಿ. ಭವಿಷ್ಯದಲ್ಲಿ ನಿಮ್ಮ ಮುಂದಿನ ಎರಡು ಹಲ್ಲುಗಳು ಉಳಿದುಕೊಂಡಿರುತ್ತವೆ ಎಂದು ಹೇಳಲಾಗದು.
-
ಸ್ಪೂರ್ತಿಸೆಲೆ – 24 ಫೆಬ್ರವರಿ 2012
ಪ್ರತಿಯೊಂದು ಸಮಸ್ಯೆಯೂ ಟ್ರಾಫಿಕ್ ಸಿಗ್ನಲ್ ಮುಂದಿನ ಕೆಂಪು ದೀಪ ಎಂದು ಭಾವಿಸಿ. ಯಾಕೆಂದರೆ ನೀವು ಸ್ವಲ್ಪ ಹೊತ್ತು ಕಾದರೆ ಹಸಿರು ದೀಪ ಬರುತ್ತದೆ. ನಿಮ್ಮ ತೊಂದರೆ, ಸಂಕಟಗಳೂ ಕೆಂಪು ದೀಪದಂತೆ ಬೇಗನೆ ಮಾಯವಾಗುತ್ತದೆ. ಆದ್ದರಿಂದ ಜೀವನದಲ್ಲಿ ದುಡಕಬೇಡಿ, ಸಹನೆಯಿಂದ ನಿರ್ಧಾರ ತೆಗೆದುಕೊಳ್ಳಿ.
-
ಜಗಳ, ಹಗೆತನದಲ್ಲಿ ಕಾಲ ಕಳೆಯುವಷ್ಟು ಬದುಕು ಚಿರಂತನವಲ್ಲ!
ನಾನು ಈ ವಿಷಯದಲ್ಲಿ ನನ್ನಷ್ಟಕ್ಕೆ ನಾನು ಸೋತಿದ್ದೇನೆ. ನನಗೆ ಚೆನ್ನಾಗಿ ಜಗಳವಾಡಲು ಬರುವುದಿಲ್ಲ. ಒಂದು ದ್ವೇಷವನ್ನು ಬಹಳ ದಿನಗಳವರೆಗೆ ಪೊರೆಯಲು ಬರುವುದಿಲ್ಲ. ಒಂದು ಮನಸ್ತಾಪಕ್ಕೆ ಬಹಳ ದಿನಗಳ ಕಾಲ ಕಾವುಕೊಟ್ಟು ಅದು ಹಗೆತನದ ಮರಿಯಾಗಿ ಜನ್ಮ ತಾಳುವವರೆಗೆ ಆರೈಕೆ ಮಾಡಲು ನನಗೆ ಬರುವುದಿಲ್ಲ.
ಸಾಮಾನ್ಯವಾಗಿ ನಾನು ಯಾರ ವಿರುದ್ಧವೂ ಜಗಳಕ್ಕೆ ಹೋದವನಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಮಾತಾಡಿ ಬಗೆಹರಿಸಿಕೊಳ್ಳುವುದು ಸಾಧ್ಯವಾಗುವುದಾದರೆ ಜಗಳವನ್ನೇಕೆ ಆಡಬೇಕು, ಜಗಳದಿಂದ ಬಗೆಹರಿಸಿಕೊಳ್ಳುವುದು ಸಾಧ್ಯವಾಗುವುದಾದರೆ ಹೊಡೆದಾಟಕ್ಕೇಕೆ ಇಳಿಯಬೇಕು ಎಂಬುದು ನನ್ನ ಜನ್ಮ ಸಿದ್ಧಾಂತ. ಅಲ್ಲದೇ [...]
