ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for January, 2012

 • ಸಿಟ್ಟಿನಲ್ಲಿ ಹೊಮ್ಮುವ ಸೃಜನಶೀಲತೆ!

  ಈ ಮಾಧ್ಯಮ ಕದನ ಭಲೇ ಮೋಜಿನದು. ಸುಮ್ಮನೇ ನಿಂತು ನೋಡುವುದಕ್ಕೆ ಒಳ್ಳೆ ಮಜಾ ಕೊಡುತ್ತಿದೆ. ಕೌತುಕವನ್ನೂ. ಇಲ್ಲ, ನಾನು ಕನ್ನಡದಲ್ಲಿ ಶುರುವಾಗಬಹುದಾದ ಮಾಧ್ಯಮ ಹಣಾಹಣಿ ಬಗ್ಗೆ ಪೀಠಿಕೆ ಹಾಕುತ್ತಿದ್ದೇನೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಆಂಗ್ಲದ ಪ್ರಮುಖ ದೈನಿಕಗಳಾದ ಟೈಂಸ್ ಆಫ್ ಇಂಡಿಯಾ ಹಾಗೂ ಹಿಂದು ಪತ್ರಿಕೆಗಳ ನಡುವೆ ನಾನಾ, ನೀನಾ ಎಂಬಂತೆ ಬಿರುಸು ಹೊತ್ತಿಕೊಂಡಿದೆ. ಎಲ್ಲ ಶುರುವಾಗಿದ್ದು ಟೈಂಸ್ ಆಫ್ ಇಂಡಿಯಾ ಪತ್ರಿಕೆ ಚೆನ್ನೈನಲ್ಲಿ ನೀಡಿದ ಒಂದು ಜಾಹೀರಾತಿನಿಂದ. ದೃಶ್ಯ ಮಾಧ್ಯಮದ ಮೂಲಕ ಹಿಂದು ಪತ್ರಿಕೆಗೆ […]

 • ಮತ್ತೆ ಮೂರು ದಿನ ‘ಆನ್ ಡ್ಯೂಟಿ’ ರಜಾ ಕೊಡಿ !

  ಮತ್ತೆ ಹಕ್ಕಿ ರೆಕ್ಕೆ ಬಿಚ್ಚಿಕೊಂಡಿದೆ. ಅದೇಗೆ ಒಂದು ವರ್ಷ ಎಲ್ಲಿಗೂ ಹೋಗದೇ ನನ್ನ ಪಾಡಿಗೆ ನಾನು ಗೂಟ ಹೊಡೆದು ಕೊಳಿತುಕೊಂಡವರ ಹಾಗೆ ಸುಮ್ಮನಿದ್ದೆ? ನನಗೇ ಆಶ್ಚರ್ಯವಾಗುತ್ತಿದೆ. ಮೂರು ದಿನಗಳ ಭೇಟಿಗಾಗಿ ಇಸ್ತಾನ್ ಬುಲ್ ಮತ್ತು ದುಬೈ ಗೆ ಹೋಗುತ್ತಿದ್ದೇನೆ. ಇವೆರಡೂ ಊರು ನನಗೆ ಹೊಸ ಮುಖಗಳಲ್ಲ. ಈ ಮೊದಲು ಇವೆರಡೂ ದೇಶಗಳಿಗೆ ಹೋಗಿದ್ದೆ. ದುಬೈಗೆ ಐದಾರು ಸಲ ಹೋಗಿರಬಹುದು. ಟರ್ಕಿಯ ರಾಜಧಾನಿ ಅಂಕಾರ್ ಆದರೂ, ಇಸ್ತಾನ್ ಬುಲ್ ಪ್ರಮುಖ ನಗರ. ಈ ಊರಿನಲ್ಲಿ ಸುಮಾರು ಎರಡೂವರೆ ವರ್ಷಗಳ […]

 • ಇಸ್ರೇಲ್ ಎಂಬ ಅದ್ಭುತ ‘ಮರುಳು’ ಭೂಮಿ!

 • ವಕ್ರತುಂಡೋಕ್ತಿ – 26 ಜನೆವರಿ 2012

  ಸಂಸಾರ ರಾಜಕೀಯ ಪಕ್ಷ ಇದ್ದಂತೆ. ಆದರೆ ಹೆಂಡತಿಯದು ಸದಾ ಆಡಳಿತ ಪಕ್ಷ.

 • ಆನಂದ ಸಂಕೇಶ್ವರ ಸ್ಮರಣ ಶಕ್ತಿ, ಸಿದ್ಧತೆ, ಇತ್ಯಾದಿ…!

  ಈ ಪರಿ ಸಿದ್ಧತೆ ಮಾಡಬೇಕು. ಆಗಲೇ ಅದಕ್ಕೊಂದು ಹಿಡಿತ, ಶಿಸ್ತು ಮೂಡುತ್ತದೆ. ಕೆಲ ದಿನಗಳ ಹಿಂದೆ ಆನಂದ ಸಂಕೇಶ್ವರ ಅವರ ಜತೆ ಸುಮಾರು ನಾಲ್ಕು ತಾಸು ಕಳೆಯುವ ಅವಕಾಶ ಸಿಕ್ಕಿತ್ತು. ಆನಂದ ಪಕ್ಕಾ ಅವರ ತಂದೆಯವರಾದ ವಿಜಯ ಸಂಕೇಶ್ವರ ಅವರ ಗರಡಿಯಲ್ಲಿ ಪಳಗಿ, ರೂಪುಗೊಂಡಿರುವವರು. ನಯ, ವಿನಯ, ಆತಿಥ್ಯದ ವಿಚಾರದಲ್ಲಂತೂ ಅವರ ತಂದೆಯವರಂತೆಯೇ. ಆನಂದ ಅವರ ಸ್ಮರಣಶಕ್ತಿ ಅಗಾಧವಾದುದು. ಕಳೆದ ಹತ್ತಾರು ವರ್ಷಗಳ ಹಿಂದೆ ನಡೆದ ಘಟನೆಗಳನ್ನೆಲ್ಲ ಪಟ ಪಟನೆ ದಿನಾಂಕ, ಸ್ಠಳ ಮತ್ತು ಸಂದರ್ಭ ಸಹಿತ […]

 • ವಕ್ರತುಂಡೋಕ್ತಿ – 24 ಜನೆವರಿ 2012

  ಹಾಳಾದ ಮಶೀನಿನ ಒಂದು ಸಮಸ್ಯೆ ಅಂದ್ರೆ ದುರಸ್ಠಿ ಮಾಡುವವ ಬಂದಾಗ ಅದು ಎಂದಿನಂತೆ ಕೆಲಸ ಮಾಡುತ್ತದೆ.

 • ವಕ್ರತುಂಡೋಕ್ತಿ – 23 ಜನೆವರಿ 2012

  ದುಬಾರಿ ಕಾರುಗಳನ್ನು ಡ್ರೈವ್ ಮಾಡುವ ಒಂದು ಸುಲಭ ಉಪಾಯವೆಂದರೆ ಅವುಗಳ ಡ್ರೈವರ್ ಆಗುವುದು.

 • ಗಾಝಾ ಎಂಬ “ಲಂಗೋಟಿ’ಗಾಗಿ ಅದೆಂಥ ಕಾದಾಟ?

  ಮೊನ್ನೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಜತೆಗೆ ಇಸ್ರೇಲ್ ಗೆ ಹೋದ ಸಂದರ್ಭದಲ್ಲಿ ಜೆರುಸಲೆಮ್, ಟೆಲ್ ಅವಿವ್, ರಮಲ್ಲಾ, ಡೆಡ್ ಸೀ, ಅಮ್ಮಾನ್ ಮುಂತಾದೆಡೆ ಭೇಟಿ ಕೊಟ್ಟಿದ್ದೆವು. ನನಗೆ ಬಹಳ ಆಸೆಯಿತ್ತು. ನಮ್ಮ ಕಾರ್ಯಕ್ರಮದಲ್ಲಿ ಗಾಝಾ ಸ್ಟ್ರಿಪ್ ಭೇಟಿ ಸಹ ಒಳಗೊಂಡಿದೆಯಾ ಎಂಬುದು. ಇಲ್ಲವೆಂಬುದು ಗೊತ್ತಾದಾಗ ತುಸು ನಿರಾಸೆಯಾಯಿತು. ಯಾಕೆಂದರೆ ಗಾಝಾ ಪ್ರದೇಶಕ್ಕೆ ಒಬ್ಬ ಪತ್ರಕರ್ತನಾಗಿ ಇಲ್ಲವೇ ಪ್ರವಾಸಿಯಾಗಿ ಹೋಗಲು ಸಾಧ್ಯವಿಲ್ಲ. ಹಮಾಸ್ ಗಳು ಗಾಝಾ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇಸ್ರೇಲಿ ಮಿಲಿಟರಿ ಪಡೆ […]

 • ದಂಡಂ ದಶಗುಣಂ ಃ ಹಾಗಂದ್ರೆ ಏನು?

  ಕೆಲವು ಹೇಳಿಕೆ, ಶಬ್ದಗಳು ಒಂದು ಅರ್ಥದಲ್ಲಿ ಬಳಕೆಗೆ ಬಂದು ಬಿಡುತ್ತವೆ. ಆದರೆ ಅವುಗಳ ನಿಜವಾದ ಅರ್ಥ ಅದಾಗಿರುವುದಿಲ್ಲ. ಸಾಕಷ್ಟು ಜನ ಅದನ್ನು ತಪ್ಪು ಅರ್ಥದಲ್ಲೇ ಬಳಸುತ್ತಾರೆ. ಹೀಗಾಗಿ ತಪ್ಪು ಅರ್ಥವೇ ಸರಿಯಾದ ಅರ್ಥವೇನೊ ಎಂಬ ಭಾವನೆ ಮೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಥಟ್ಟನೆ ನೆನಪಾಗುವುದು “ನೀ ಹಿಂಗ ನೋಡಬ್ಯಾಡ ನನ್ನ’ ಎಂಬ ಬೇಂದ್ರೆಯವರ ಹಾಡು. ಅವರ ಪುತ್ರ ಮೃತಪಟ್ಟ ಸಂದರ್ಭದಲ್ಲಿ ಅವರ ಪತ್ನಿ ದ.ರಾ. ಬೇಂದ್ರೆಯವರನ್ನು ದುಃಖದಿಂದ ನೋಡುತ್ತಿದ್ದ ಸಂದರ್ಭದಲ್ಲಿ ಅವರು “ನೀ ಹಿಂಗ ನೋಡಬ್ಯಾಡ ನನ್ನ’ ಎಂಬ […]

 • ಸ್ಪೂರ್ತಿಸೆಲೆ – 23 ಜನೆವರಿ 2012

  ನಾವು ಪದೇ ಪದೆ ವೈಫಲ್ಯ ಹೊಂದುವುದು ಚಿಂತೆ ಹುಟ್ಟಿಸುವ ಸಂಗತಿಯಲ್ಲ. ಪ್ರತಿ ಸಲ ಸೋತಾಗಲೂ ಮೈ ಕೊಡವಿ ಎದ್ದು ನಿಂತು ಗೆಲುವಿನ ಕಡೆ ಮುಖ ಮಾಡದಿರುವುದು ನಿಜವಾದ ವೈಫಲ್ಯ. ಸೋಲು ಗೆಲವು ಹೇಳುವುದಕ್ಕಿಂತ ಹೆಚ್ಚಿನ ಪಾಠವನ್ನು ಹೇಳುತ್ತದೆ.