ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for December, 2011

 • ಸ್ಪೂರ್ತಿಸೆಲೆ – 30 ಡಿಸೆಂಬರ್ 2011

  ನಿಮ್ಮ ಬಗೆಗಿನ ಟೀರೆಗೆ ಎಷ್ಟೇ ಸಮಜಾಯಿಶಿ ಕೊಟ್ಟರೂಅದರಿಂದ ಜನರಿಗೆ ಮನವರಿಕೆಯಾಗುವುದಿಲ್ಲ. ನಿಮ್ಮ ಕೆಲಸ, ಸಾಧನೆಯೇ ಉತ್ತರವಾಗಬೇಕು. ಅದರ ಮುಂದೆ ಯಾರೂ ಚಕಾರ ಎತ್ತಲಾರರು.

 • ವಕ್ರತುಂಡೋಕ್ತಿ – 31 ಡಿಸೆಂಬರ್ 2011

  ತಮ್ಮ ದುಡಿಮೆಯ ಅರ್ಧ ಭಾಗವನ್ನು ತಿನ್ನುವುದಕ್ಕೆ, ಇನ್ನರ್ಧ ಭಾಗವನ್ನು ಬೊಜ್ಜು ಕರಗಿಸುವುದಕ್ಕೆ ವ್ಯಯಿಸುವ ದೇಶವನ್ನು ಅಮೆರಿಕ ಎಂದು ಕರೆಯಬಹುದು.

 • ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು

  ಆತ್ಮೀಯರೇ, ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ೨೦೧೨ ವರ್ಷದಲ್ಲಿ ನಿಮ್ಮೆಲ್ಲರಿಗೂ ಸುಖ, ಸಂತೋಷ, ನೆಮ್ಮದಿ ಮತ್ತು ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ, ನನಗೂ ಒಳ್ಳೆಯದಾಗಲಿ.

 • ಸ್ಪೂರ್ತಿಸೆಲೆ – 30 ಡಿಸೆಂಬರ್ 2011

  ದ್ವೇಷ ಅಂದ್ರೆ ನಾವು ವಿಷವನ್ನು ಸೇವಿಸಿ ಬೇರೆಯವರು ಸಾಯಲಿ ಎಂದು ಬಯಸಿದಂತೆ. ಆದರೆ ದ್ವೇಷಕ್ಕೆ ಬಲಿಯಾಗುವವರು ನಾವು. ದ್ವೇಷ ಮೊದಲು ನಮ್ಮನ್ನು ಅಷ್ಟಿಷ್ಟೇ ಸಾಯಿಸುತ್ತದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

 • ವಕ್ರತುಂಡೋಕ್ತಿ – 30 ಡಿಸೆಂಬರ್ 2011

  ನಿಮ್ಮ ಟೀಕಾಕಾರರು ನಿಮ್ಮನ್ನು ಹೊಗಳಿದರೆ ಬೀಗಬೀಡಿ. ಕಾರಣ ಗಲ್ಲಿಗೇರಿಸುವವನು ನಿಮ್ಮ ಕುತ್ತಿಗೆ ಚೆನ್ನಾಗಿದೆಯೆಂದು ಹೊಗಳುತ್ತಾನೆ.

 • ಅಧ್ಯಾತ್ಮ, ಆಧ್ಯಾತ್ಮ, ಅಧ್ಯಾತ್ಮಿಕ, ಆಧ್ಯಾತ್ಮಿಕ ಇತ್ಯಾದಿ

  ‘ಕ.ಪ್ರ. ಕ್ರೀಡಾ ವರದಿ ನೋಡಿದರೆ ಕೊಂಚ ಬೇಸರವಾಗುತ್ತದೆ. ನಾವು ಓದುವುದರ ಪ್ರಭಾವವೋ ಅಥವಾ ನಿಮ್ಮ ವರದಿಗಾರರ ಪ್ರಭಾವವೋ ಒಂದೂ ತಿಳಿಯದು. ಡಿ.20ರಂದು ಪ್ರಕಟಗೊಂಡಿರುವ ಕ್ರೀಡಾ ಸುದ್ದಿಯಲ್ಲಿ ತಪ್ಪುಗಳದ್ದೇ ಚಮತ್ಕಾರ! ಸೌರವ್ ಗಂಗೂಲಿ ಹೆಸರಿನ ಮುಂದೆ ಮಾಜಿ “ಕಪಾನ’ ಎಂದಿದೆ. ಅದು “ಕಪ್ತಾನ’ ಎಂದಾಗಬೇಕಿತ್ತು. “ಟೀ ಇಂಡಿಯಾ’ ಎಂಬ ದಪ್ಪಕ್ಷರದ ಬರಹವೇ ಇದೆ. ಇದೇನು ಹೊಸ ಬಗೆಯು “ಟೀ’ಯಾ? ಕನ್ನಡ ಪ್ರಭದವರ ಕೊಡುಗೆಯಾ? ಪದಗಳಲ್ಲಿ ್ನತಪ್ಪಾಗಿರುವುದು ಮುದ್ರಣ ದೋಷ ಎಂದಾದರೆ “ಗ್ರೇಗ್ ಚಾಪೆಲ್ ಹುಚ್ಚ’ ಎಂಬ ಸುದ್ದಿಯಲ್ಲಿ ಗಂಗೂಲಿಯ […]

 • ಸಣ್ಣ ಪುಟ್ಟ ಸಂಗತಿಗಳಲ್ಲಿ ಸಮಾಧಾನ ಕಾಣುವುದೇ ಸಿರಿವಂತಿಕೆ!

  ದೊಡ್ಡ ಬಂಗಲೆ, ಐಷಾರಾಮಿ ಕಾರು, ಕೋಟಿಗಟ್ಟಲೆ ಬ್ಯಾಂಕ್ ಬ್ಯಾಲೆನ್ಸ್, ಕುತ್ತಿಗೆ ತುಂಬಾ ಆಭರಣ, ದುಬಾರಿ ಪೋಷಾಕು, ವಿದೇಶಿ ಮಾಲು, ಎಲೆಕ್ಟ್ರಾನಿಕ್ ಉಪಕರಣ, ವಿದೇಶ ಪ್ರಯಾಣ, ವಿದೇಶಗಳಲ್ಲಿ ಮಕ್ಕಳ ವಿದ್ಯಾಭ್ಯಾಸ, ಪಂಚತಾರಾ ಹೋಟೆಲ್್ಗಳಲ್ಲಿ ಊಟ, ವಾಸ, ವಿಮಾನ ಪ್ರಯಾಣ, ರೆಸಾರ್ಟ್-ಸ್ಪಾಗಳಲ್ಲಿ ವಿಶ್ರಾಂತಿ… ಇದು ಶ್ರೀಮಂತಿಕೆಯ ಕಲ್ಪನೆ! ವಿಚಿತ್ರವೆಂದರೆ ಇದು ಬರೀ ಕಲ್ಪನೆಯೊಂದೇ ಅಲ್ಲ. ಬಹುತೇಕ ಮಂದಿಯ ಗುರಿಯೂ ಇದೇ. ಈ ಎಲ್ಲವುಗಳನ್ನು ಸಾಕಾರಗೊಳಿಸುವುದಕ್ಕಾಗಿ ನಿರಂತರ ಹೋರಾಟ. ಶ್ರೀಮಂತಿಕೆಯನ್ನು ಪ್ರತಿನಿಧಿಸುವ ಈ ಎಲ್ಲ ಸಂಕೇತಗಳನ್ನು ಗಿಟ್ಟಿಸಿಕೊಳ್ಳಲೆಂದೇ ಬಹುತೇಕ ಮಂದಿಯ ಹೋರಾಟ […]

 • ಅಭಿಮಾನಿಯೊಬ್ಬರ ಪತ್ರ ಮತ್ತು ಪ್ರೀತಿ !

  ಪ್ರತಿದಿನ ನೂರಾರು ಜನ ಪತ್ರ, ಇಮೇಲ್ ಬರೆಯುತ್ತಾರೆ. ತಮ್ಮ ಪ್ರೀತಿ, ಅಭಿಮಾನವನ್ನು ತೋರ್ಪಡಿಸುತ್ತಾರೆ. ಬಹುತೇಕ ಎಲ್ಲ ಪತ್ರಗಳಿಗೂ ನಾನು ಉತ್ತರ್ ಬರೆಯುತ್ತೇನೆ. ಕೆಲವೊಂದು ತಪ್ಪಿ ಹೋಗುತ್ತವೆ. ಆದರೂ ಓದುಗ ಮಿತ್ರರು ಬರೆಯುವುದನ್ನು ನಿಲ್ಲಿಸುವುದಿಲ್ಲ. ಅಭಿಮಾನವೆಂದರೆ ಇದೇ ತಾನೆ. ರಾಯಚೂರಿನ ಸಿರವಾರದ ರಾಘವೇಂದ್ರ ಕುಲಕರ್ಣಿಯವರು ಬರೆದ ಒಂದು ಪತ್ರವನ್ನು ಇಲ್ಲಿ ನೀಡುತ್ತಿದ್ದೇನೆ. – ವಿಶ್ವೇಶ್ವರ್ ಭಟ್ …. ಆತ್ಮೀಯರೇ,     ತಮ್ಮ ಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ ಅಟಲ್ ಅಚಲ  ಅಜಾತ ಶತ್ರುವಿನ ಜೀವನ ಚಿತ್ರ ಹೃದಯ ಸ್ಪಶರ್ಿಯಾಗಿತ್ತು.  ಕೇವಲ […]

 • ಆಪ್ತಕಾಲ ಃ ಕಂಡ ಕಂಡವಳಿಗೆ ಆಶ್ರಯ ಸು-ಲಲಿತವಲ್ಲ !

  *ನನ್ನ ಸ್ನೇಹಿತೆ ಗಂಡ ಮಕ್ಕಳೊಂದಿಗೆ ಹಾಯಾಗಿದ್ದಳು. ಈಗ ಅವರಿಬ್ಬರ ಮಧ್ಯೆ ‘ಅವಳು’ ಬಂದಿದ್ದಾಳೆ. ವಿಚಿತ್ರವೆಂದರೆ ಅವಳು ಕೂಡ ನನ್ನ ಸ್ನೇಹಿತೆ. ಅವರ ಮನೆಯಲ್ಲೀಗ ಮೂವರ ಮಧ್ಯೆ ಶೀತಲ ಸಮರ. ಅವಳನ್ನು ಬಿಡದಿದ್ದರೆ ಸತ್ತೇ ಹೋಗ್ತೀನಿ ಅಂತ ಸ್ನೇಹಿತೆ ಬೆದರಿಸಿದ್ದಕ್ಕೆ ಗಂಡ ಬಗ್ಗಿಲ್ಲ. ಕಷ್ಟಕಾಲಕ್ಕಾಗಿದ್ದಾಳೆ. ಗಂಡ ಮಕ್ಕಳಿಲ್ಲ. ಒಂಟಿ ಜೀವ. ಆಶ್ರಯ ಬೇಡಿದವಳನ್ನು ದೂರ ತಳ್ಳಲಾರೆ. ಹೊಂದಿಕೊಂಡು ಹೋಗು ಅಂತಾನೆ. ಇತ್ತ ಅವಳು ನನ್ನ ಬಳಿ ಬಂದು ‘ನಮ್ಮಿಬ್ಬರಿಗೂ ರಾಜಿ ಮಾಡಿಸು, ಗಂಗೆ-ಗೌರಿಯಂತಿರುತ್ತೇವೆ. ಸ್ನೇಹಿತಳಾಗಿ ಕೈ ಬಿಡಬೇಡ. ಯಡವಟ್ಟಾದ್ರೆ […]

 • ಸ್ಫೂರ್ತಿಸೆಲೆ – 25 ಡಿಸೆಂಬರ್ 2011

  ನಿಮ್ಮ ಬಗ್ಗೆ ಕೇಳಿದ ಟೀಕೆಗಳಿಗೆಲ್ಲ ಉತ್ತರಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ ಎಷ್ಟೋ ಸಲಟೀಕೆಗಳು ಟೀಕಾಕಾರರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ ಮತ್ತು ಅಸತ್ಯದಿಂದ ಕೂಡಿರುತ್ತದೆ. ಅಂಥ ಟೀಕೆಗಳನ್ನು ಉಪೇಕ್ಷಿಸುವುದೇ ಸರಿಯಾದ ಉತ್ತರವಾದೀತು.