ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for June, 2011

 • ಅವರು ಯಾಕ ಹಾಂಗ, ಇವರು ಯಾಕ ಹೀಂಗ?

  ರಾಜಕೀಯ ಅಂಕಣ ಕುರಿತು ಬರೆಯುವವರಿಗೆ ಅನಿವಾರ್ಯ, ರಾಜಕಾರಣಿಗಳ ಬಗ್ಗೆ ಬರೆಯಲೇಬೇಕು. ಯಡಿಯೂರಪ್ಪ, ಸಿದ್ದರಾಮಯ್ಯನವರ ಹೇಳಿಕೆಗಳನ್ನೆಲ್ಲ ಸ್ಕ್ಯಾನ್ ಮಾಡಿ ವಿಶ್ಲೇಷಿಸಬೇಕು, ಕರ್ಮಕರ್ಮ!ಆದರೆ ವಿಧಿಯಿಲ್ಲ. ನನಗೆ ತಮಾಷೆಯಾಗಿ ಕಾಣುವುದು ಒಮ್ಮೊಮ್ಮೆ ವಿದ್ವಾಂಸರಾದ ಡಾ. ಕೆ.ಎಸ್. ನಾರಾಯಣಾಚಾರ್ಯರಂಥವರೂ ರಾಜಕೀಯ ವಿಶ್ಲೇಷಣೆಗಿಳಿದು ಬಿಡುತ್ತಾರೆ. ರಾಜಕೀಯ ನಾವು ತಿಳಿದುಕೊಂಡಷ್ಟು ಸರಳವಾಗಿರುವುದಿಲ್ಲ. ಆದರೆ ಪುಣ್ಯವಶಾತ್, ನಮ್ಮ ರಾಜಕಾರಣಿಗಳು ಅದನ್ನು ಸರಳಗೊಳಿಸಿದ್ದಾರೆ. ಆಡಳಿತ ಪಕ್ಷ ಏನೇ ಮಾಡಲಿ, ಎಷ್ಟೇ ಒಳ್ಳೆಯ ಕೆಲಸ ಮಾಡಲಿ ಪ್ರತಿಪಕ್ಷಗಳು ಟೀಕಿಸಬೇಕು. ಪ್ರತಿಪಕ್ಷಗಳನ್ನು ಟೀಕಿಸುತ್ತಾ ಆಡಳಿತಪಕ್ಷ, ಅವುಗಳ ಹೊಟ್ಟೆ ಉರಿಸಬೇಕು. ಒಂದು ಘಟನೆಯನ್ನು […]

 • ಪತ್ರಕರ್ತರಿಗೆ ಈ ಹೆಸರಿನ ಜತೆಗೆ ಏಗುವುದು ನಿಜಕ್ಕೂ ದೈನಂದಿನ ಸವಾಲೇ ಸರಿ!

  ಇದೊಂದು ಕಡೆ ಎಲ್ಲ ಪತ್ರಕರ್ತರೂ ಪದೇ ಪದೆ ತಪ್ಪುಗಳನ್ನು ಮಾಡುತ್ತಾರೆ. ಅದೆಂದರೆ ಹೆಸರು! ಊರಿನ ಹೆಸರಿರಬಹುದು, ವ್ಯಕ್ತಿಗಳ ಹೆಸರಿರಬಹುದು, ಪದವಿಯ ಹೆಸರಿರಬಹುದು, ಎಲ್ಲರೂ ಆಗಾಗ ತಪ್ಪುಗಳನ್ನು ಮಾಡುತ್ತಾರೆ. ಕೆಲವೊಂದು ತಪ್ಪುಗಳನ್ನು ಮಾಡಿದರೆ ಸಿಕ್ಕಿ ಬೀಳದೇ ಇರಬಹುದು, ಆದರೆ ಈ ತಪ್ಪನ್ನು ಮಾಡಿದರೆ ಬಚಾವ್ ಆಗೋದು ಕಷ್ಟ. ಒಬ್ಬರಲ್ಲದಿದ್ದರೆ ಮತ್ತೊಬ್ಬರಾದರೂ  ಹಿಡಿದೇ ಹಿಡಿಯುತ್ತಾರೆ. ಹಾಗಿದೆ ಈ ತಪ್ಪಿನ ಮಹಾತ್ಮೆ. ಕೆಲವು ವರ್ಷಗಳ ಹಿಂದೆ ಸುನಾಮಿ ಬೀಸಿದಾಗ, ಆ ಹೆಸರನ್ನು ಕೇಳದ (Tsunami ) ಕನ್ನಡ ಪತ್ರಕರ್ತರು  ತ್ಸುನಾಮಿ  ಎಂದೇ […]

 • ಎಲ್ಲ ಅವಕಾಶ ತನ್ನದಾಗಿಸಿಕೊಳ್ಳುವವನ ಪರ ಜಗತ್ತು ನಿಲ್ಲುತ್ತದೆ!

  ನಾನೇ ಹಾಗೆ ಅಂತ ಅಂದುಕೊಂಡರೆ ನನಗಿಂತ ಹೆಚ್ಚು ಹುಚ್ಚರಿದ್ದಾರೆ. ರಿಚರ್ಡ್ ಬ್ರಾನ್್ಸನ್ ವಿಷಯದಲ್ಲಂತೂ ಅದು ನನಗೆ ಪದೇ ಪದೆ ಮನವರಿಕೆಯಾಗಿದೆ. ಅವನ ಬದುಕಿನ ಕೆಲವು ಘಟನೆ ಹಾಗೂ ಅದರಿಂದ ಅವನು ಪ್ರೇರಣೆ ಪಡೆದ ರೀತಿಯ ಬಗ್ಗೆ ಏಳೆಂಟು ವಾರ ಬರೆದ ಬಳಿಕ, ಆತ ನನಗಿಂತ ನನ್ನ ಓದುಗರಿಗೆ ಹತ್ತಿರವಾಗುತ್ತಾ ಹೋದ. ಅದಾದ ಬಳಿಕ ನಾನು ಆಗಾಗ ಅವನು ಬರೆದಿದ್ದು ಸಿಕ್ಕಾಗಲೆಲ್ಲ ನನ್ನ ಓದುಗರಿಗೆ ನೀಡುತ್ತಿದ್ದೆ. ಅದು ಓದುಗರಿಗೆ ಎಷ್ಟು ಹಿಡಿಸಿದೆಯೆಂದರೆ, ಈಗ ಅವರೇ ಡಿಮ್ಯಾಂಡ್ ಮಾಡುತ್ತಿದ್ದಾರೆ. ಮೊನ್ನೆ […]

 • ಕನ್ನಡದ ಸಣ್ಣಮನಗಳ ಸಾಹಿತ್ಯ ರಾಜಕಾರಣ!

  ಪ್ರತಾಪ್ ಸಿಂಹ ಬರೆದ ಈ ಲೆಖನ ಈಗಾಗಲೇ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜೋಕದಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನು ಒದಗಿಸಿದೆ. ನಮ್ಮ ಓದುಗರ ಒತ್ತಾಯದ ಮೇರೆಗೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ** ** ** ಭಾರತದ ಹೆಮ್ಮೆಯಂತಿರುವ ಭೈರಪ್ಪನವರನ್ನು 2011ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್್’ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಸುದ್ದಿ ಕಳೆದ ಏಪ್ರಿಲ್ 5ರಂದು ಪ್ರಕಟವಾದಾಗ ಕನ್ನಡಕ್ಕೆ ಮೊಟ್ಟಮೊದಲ ಬಾರಿಗೆ ಅಂತಹ ಪ್ರಶಸ್ತಿ ತಂದುಕೊಟ್ಟಿರುವ ಅವರನ್ನು ಸಂದರ್ಶನ ಮಾಡಬೇಕೆಂದು ನಮ್ಮ ‘ಕನ್ನಡಪ್ರಭ’ದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು […]

 • ಈಗ ಬಾಯಲ್ಲಿ ಸಿಗಾರ್, ಮುಂದೆ ಕೈಯಲ್ಲಿ ಗ್ಲಾಸ್ ಹಿಡಿದ ಫೋಟೊ ಹಾಕೋದಿಲ್ಲ ಅಂತ ಏನ್ ಗ್ಯಾರಂಟ?

  ನಾವು ಹೇಗೆ ಕಾಣಬೇಕೆಂಬುದನ್ನೂ ಓದುಗರೇ ನಿರ್ಧರಿಸುತ್ತಾರೆ. ಅನೇಕ ಸಲ ನನಗೆ ಈ ಅನುಭವವಾಗಿದೆ. ಓದುಗರ ಒತ್ತಾಸೆ, ಒತ್ತಡಕ್ಕೆ ಗಂಟುಬಿದ್ದು ಅನೇಕ ಸಲ ನಾನು ಪತ್ರಿಕೆಯಲ್ಲಿ ಫೋಟೊ ಬದಲಾಯಿಸಿದ್ದೇನೆ. ಭಾನುವಾರ ಪ್ರಕಟವಾಗುವ ‘ನಂಗೆ ಇಷ್ಟಾನೋ’ ಅಂಕಣಕ್ಕೆ ಮೊದಲ ಬಾರಿಗೆ ಕೌಬಾಯ್ ಹ್ಯಾಟ್ ಧರಿಸಿದ್ದ ಫೋಟೊ ಬಳಸಿದ್ದೆ. ಅದೇ ಕೊನೆ. ಹಾಗಂತ ಓದುಗರು ತಾಕೀತು ಮಾಡಿದ್ದರು. ಯಾವ ಪ್ರಮಾಣದಲ್ಲಿ ಓದುಗರು ತಮ್ಮ Rejectionಅನ್ನು ವ್ಯಕ್ತಪಡಿಸಿದ್ದರೆಂದರೆ ಮತ್ತೊಮ್ಮೆ ಅದನ್ನು ಬಳಸಲು ಧೈರ್ಯ ಸಾಕಾಗಲಿಲ್ಲ. ಬಹುತೇಕ ಸಂದರ್ಭದಲ್ಲಿ ಓದುಗರೇ ನಿರ್ದೇಶಿಸುತ್ತಾರೆ. ನಾವು ಅದನ್ನು […]

 • ಮನೆ ಖಾಲಿ ಮಾಡಿದಾಗ ಮನಸ್ಸೂ ಖಾಲಿಯಾಗುವುದೇಕೆ?

  ಪುಸ್ತಕ ಓದುವುದು, ಪುಸ್ತಕ ಬರೆಯುವುದು, ಪ್ರವಾಸ ಹಾಗೂ ವಿದೇಶ ಪ್ರವಾಸವನ್ನು ಬಿಟ್ಟರೆ ನಾನು ಯಾವುದೇ ಕೆಲಸವನ್ನು ಸತತ ಮೂರು ದಿನಗಳ ಕಾಲ ಮಾಡಿರಲಿಲ್ಲ. ಸಿನಿಮಾ ನೋಡಿದರೆ ಹೆಚ್ಚೆಂದರೆ ಮೂರು ಗಂಟೆ, ಡ್ರೈವಿಂಗ್ ಮಾಡಿದರೆ ಅಬ್ಬಬ್ಬಾ ಅಂದ್ರೆ ಹತ್ತು ಗಂಟೆ, ಹರಟೆ, ಊಟ, ಸ್ನೇಹಿತರ ಜತೆ ಪಟ್ಟಾಂಗಕ್ಕೆ ಅಮ್ಮಮ್ಮಾ ಅಂದ್ರೆ ನಾಲ್ಕು ಗಂಟೆ, ಟ್ವಿಟರ್, ಫೇಸ್ ಬುಕ್, ಒಟ್ಟಾರೆ ಕಂಪ್ಯೂಟರ್ ಮುಂದೆ ದಿನಕ್ಕೆ ಹೆಚ್ಚೆಂದರೆ ಮೂರು ಗಂಟೆ, ನಿದ್ದೆಯ ಜತೆ ಜುಗ್ಗನಂತೆ ಚೌಕಾಶಿ ಮಾಡಿ ಆರು ಗಂಟೆ, ಬೆಂಗಳೂರಿನ […]

 • ಇಲ್ಲೂ ಶುರು ಆಯ್ತಾ ‘ನೋಡ್ತಾ ಇರಿ…’

  ನಮ್ಮ ಪತ್ರಿಕೆಯ Catchy Line ಇದೆಯಲ್ಲ, ‘ನೋಡ್ತಾ ಇರಿ, ಏನೇನ್ ಮಾಡ್ತೀವಿ’ ಅದು ಜನರ ಮಾತುಕತೆಯ ಮಧ್ಯೆ ಹರಿದಾಡುತ್ತಿರುವುದನ್ನು ನೀವು ಕೇಳಿರಬಹುದು. ಇದನ್ನೇ ಸಿನಿಮಾ ಟೈಟಲ್ ಮಾಡಿದ್ರೆ ಹೇಗೆ, ಕೊಡ್ತೀರಾ ಎಂದು ಈಗಾಗಲೇ ಒಬ್ಬರು ಕೇಳಿದ್ದಾರೆ. ಈ ಮಧ್ಯೆ ‘ಕನ್ನಡ ಪ್ರಭ’ ಓದುಗರೊಬ್ಬರು ತಮ್ಮ ಹೊಸ ಇನ್ನೋವಾ ಕಾರಿನ ಹಿಂಬದಿಗೆ ಇದನ್ನೇ ಬರೆಸಿದ್ದಾರೆ. ನೋಡ್ತಾನೇ ಇರೋಣ… ಏನೇನ್ ಮಾಡ್ತಾರೋ ?

 • ಸ್ಫೂರ್ತಿಸೆಲೆ – 10 ಜೂನ್ 2011

  ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮದಿಂದ ದುಡಿಯಬೇಕು. ಇಲ್ಲದಿದ್ದರೆ ನಮ್ಮ ಪರಿಶ್ರಮವೆಲ್ಲ ಬೇರೆಯವರ ಕನಸು ನನಸಾಗಿಸಲು ದುಡಿಯಬೇಕಾಗುತ್ತದೆ.

 • ವಕ್ರತುಂಡೋಕ್ತಿ – 10 ಜೂನ್ 2011

  ಗಂಡ ಮತ್ತು ಹೆಂಡತಿ ಒಟ್ಟಾಗಿ ಒಂದೇ ಮನೆಯಲ್ಲಿ ಸಂಸಾರ ಸಾಗಿಸುವುದಕ್ಕೆ ಜಾಯಿಂಟ್ ಫ್ಯಾಮಿಲಿ ಎಂದು ಕರೆಯಬಹುದು.

 • ಕೇಳ್ರಪ್ಪೋ ಕೇಳಿ – 10 ಜೂನ್ 2011

  ಯತೀಶ್ (nryatish@gmail.com) ನೀವು “ಕನ್ನಡಪ್ರಭ’ಕ್ಕೆ ಬದಲಾದರೆ ನಾವ್ಯಾಕೆ ಬದಲಾಗಬೇಕು ಹೇಳಿ? – ನಮ್ಮ ಮಾತನ್ನು ಕೇಳಿದವರಿಗೆ, ಪಾಲಿಸಿದವರಿಗೆ ಇಲ್ಲಿ ತನಕ ಒಳ್ಳೆಯದಾಗಿದೆ, ನೋಡಿ ವಿಚಾರ ಮಾಡಿ!