Date archive for February, 2011
-
ಕೇಳ್ರಪ್ಪೋ ಕೇಳಿ – 01 ಮಾರ್ಚ್ 2011
ರಾಧಿಕಾ ಬಾಣಾವರ, ಭದ್ರಾವತಿ
ಯಾರು ನಮ್ಮ ನಿಜವಾದ ಸ್ನೇಹಿತರು ಎಂಬುದೇ ನನಗೆ ತಿಳಿಯದಾಗಿದೆ…ಏನು ಮಾಡಲಿ?- ಯಾಕೆ ಆ ಉಸಾಬರಿ ನಿನಗೆ? ಯಾಕೆಂದ್ರೆ ಹಾಗೆ ತಿಳಿದುಕೊಳ್ಳುವ ಹೊತ್ತಿಗೆ ಅವರು ನಿಜವಾದ ಸ್ನೇಹಿತರಾಗಿರುವುದಿಲ್ಲ.
-
ಕೇಳ್ರಪ್ಪೋ ಕೇಳಿ – 01 ಮಾರ್ಚ್ 2011
ಚಂದ್ರಕಲಾ ಸಬರದ, ವಸಂತನಗರ
ನಿಮ್ಮ ಪತ್ರಿಕೆಯಲ್ಲೂ ‘ಕಿವಿ ಮೇಲೆ ಹೂ’ ಮಾದರಿಯ ಅಂಕಣವನ್ನು ಆರಂಭಿಸಬಾರದಾ?- ಬೇರೆ ಹೊಸತೇನಾದರೂ ಮಾಡುತ್ತೇನೆ, ನಮ್ಮಲ್ಲಿ ಡುಪ್ಲಿಕೇಟ್ ಇಲ್ಲ. ಕಾಪಿ ಹೊಡೆಯೊಲ್ಲ.
-
ಕೇಳ್ರಪ್ಪೋ ಕೇಳಿ – 01 ಮಾರ್ಚ್ 2011
ಸಂಜೀವ ಸೂತ್ರಧಾರ, ಕೆಂಗೇರಿ
ಕೆಲವರು ಎಲ್ಲ ವಿಷಯಗಳ ಕುರಿತೂ ಬರೆಯುತ್ತಾರಲ್ಲಾ?- ಬರೆದರೆ ಪರವಾಗಿಲ್ಲ, ಅದನ್ನು ಎಲ್ಲರೂ ಓದುತ್ತಾರೆ ಎಂದು ಭಾವಿಸುತ್ತಾರೆ..ಹೀಗಾಗಿ ಬರೆಯುತ್ತಲೇ ಇರುತ್ತಾರೆ.
-
ಕೇಳ್ರಪ್ಪೋ ಕೇಳಿ – 01 ಮಾರ್ಚ್ 2011
ದಾವಣಗೆರೆ ವೀರೇಶ, ಸುಧಾಮನಗರ
ಕನ್ನಡಪ್ರಭ ನನಗೆ ಈಗ ಬಹಳ ಆಪ್ತವಾಗುತ್ತಿದೆ…!- ಹುಡುಗಿಯ ಬಿಂದಿ ನೋಡಿ ತಾಳಿ ಕಟ್ಟಿದ್ರು ಎಂಬ ಗಾದೆ ನೆನಪಾಯ್ತು ನೋಡು
-
ಕೇಳ್ರಪ್ಪೋ ಕೇಳಿ – 01 ಫೆಬ್ರವರಿ 2011
ಎಚ್.ಎಂ.ರಾಜೀವ, ಮೈಸೂರು
ನೀವು ಬಂದ ನಂತರ ನನ್ನ ಕನ್ನಡಪ್ರಭದ ಸ್ನೇಹಿತರೆಲ್ಲ ಖುಷಿಯಾಗಿದ್ದರಲ್ಲ?- ಆ ಖುಷಿಯನ್ನು ಓದುಗರಿಗೂ ವಿಸ್ತರಿಸಲಾಗುವುದು.
-
ಪಿಕ್ ಪಾಕೆಟ್ – 28 ಫೆಬ್ರವರಿ 2011
ಇವ್ರನ್ನ ‘ಕ್ರಿಕೇಟ್ ಟೀಮ್’ಗೆ ಸೇರಿಸಬಹುದಿತ್ತು!!! ಬೀಸೋ ಸ್ಟೈಲ್ ಸಕತ್ತಾಗಿದೆ ಅಲ್ವಾ?
-
ಸ್ಫೂರ್ತಿಸೆಲೆ – 28 ಫೆಬ್ರವರಿ 2011
ನೀವು ಹಗ್ಗದ ತುದಿಗೆ ಬಂದು, ಎಲ್ಲ ಮುಗಿದು ಹೋಯಿತು ಎಂದುಕೊಂಡಾಗಲೂ ಅವಕಾಶವೆಂಬುದು ಇದ್ದೇ ಇರುತ್ತದೆ. ಅದೇ ಹಗ್ಗಕ್ಕೆ ಗಂಟು ಹಾಕಿದರೆ ಜಾರದಂತೆ ಕನಿಷ್ಠ ಜೋತಾಡಬಹುದು. ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇದೆ.
-
ವಕ್ರತುಂಡೋಕ್ತಿ – 28 ಫೆಬ್ರವರಿ 2011
ಹುಡುಗರೆಂದರೆ ತೆಂಗಿನಕಾಯಿ ಇದ್ದಂತೆ. ಹೊರಗಡೆ ಗಟ್ಟಿ, ಒಳಗಡೆ ಮೃದು. ಆದರೆ ಹುಡುಗಿಯರೆಂದರೆ ಎಲೆಕೋಸು ಇದ್ದಂತೆ. ಎಷ್ಟು ಸಿಪ್ಪೆ ತೆಗೆದರೂ ಕೊನೆಗೆ ಉಳಿಯೋದು ಸಿಪ್ಪೆಯೇ.
-
ಈ ದಿನವೂ ನಿಮ್ಮದು.. ಕೇಂದ್ರ ಬಜೆಟ್ ಗೆ ನಿಮ್ಮ ಹೆಡ್ ಲೈನ್ ಏನು ?
ರಾಜ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ಗೆ ನೀವು ಸ್ಪಂದಿಸಿದ ರೀತಿ ಅಭೂತಪೂರ್ವ!
ರೈಲ್ವೆ ಬಜೆಟ್ ಗೆ ನೀವೇ ಸೂಚಿಸಿದ ಶೀರ್ಷಿಕೆಯನ್ನು ಬಳಸಲು ನಿರ್ಧರಿಸಿ, ಉಡುಪಿಯ ಮಂಜುನಾಥ ಪ್ರಸಾದ್ ಕಳಿಸಿದ ಹೆಡ್ ಲೈನ್ ನ್ನು ‘ಕನ್ನಡಪ್ರಭ’ದ ಲೀಡ್ ಸುದ್ದಿಗೆ ಬಳಸಿಕೊಂಡೆವು. ಈ ಶೀರ್ಷಿಕೆಯಲ್ಲಿ ಹೊಸತನ ಇತ್ತು. ಈ ಪ್ರಯೋಗವನ್ನು ಅನೇಕ ಮಂದಿ ಬಹಳ ಇಷ್ಟಪಟ್ಟರು. ಸುಮಾರು ಐನೂರಕ್ಕೂ ಹೆಚ್ಚು ಮಂದಿ ಓದುಗರು ಈ ಶೀರ್ಷಿಕೆ ಮತ್ತು ಈ ಪ್ರಯೋಗವನ್ನು ಮೆಚ್ಚಿ ಇಮೇಲ್ ಮಾಡಿದರು.
ಇಂದು ಸೋಮವಾರ, ಕೇಂದ್ರ [...] -
ವಕ್ರತುಂಡೋಕ್ತಿ – 27 ಫೆಬ್ರವರಿ 2011
ನೀವು ಮಹಾನ್ ಚಿಂತಕರಾಗಬೇಕೆಂದು ಬಯಸಿದರೆ ಆಳವಾಗಿ ಯೋಚಿಸುವ ಬದಲು, ಮೊದಲು ನಿಧಾನವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
