Date archive for January, 2011
-
ವಕ್ರತುಂಡೋಕ್ತಿ – 01 ಫೆಬ್ರವರಿ 2011
ಪ್ರವಾಸ ಹೋಗಿ ಬಂದ ನಾಲ್ಕು ತಿಂಗಳ ನಂತರವೂ ಸೂಟಕೇಸಿಗೆ ಇನ್ನೂ ಟ್ಯಾಗ್ ಅಂಟಿಕೊಂಡೇ ಇದೆ ಅಂದ್ರೆ ವಿಮಾನದಲ್ಲಿ ಹೋಗಿ ಬಂದಿದ್ದು ಗ್ಯಾರಂಟಿ.
-
ಸ್ಫೂರ್ತಿಸೆಲೆ – 01 ಫೆಬ್ರವರಿ 2011
ನೀವು ತಪ್ಪು ಮಾಡಿದಾಗ ಕ್ಷಮೆಯಾಚಿಸುವುದು ಉಚಿತ. ಆದರೆ ನೀವು ನಂಬಿಕೆ ಮುರಿದು ಬೀಳಲು ಕಾರಣರಾದರೆ ಕ್ಷಮಾಯಾಚನೆ ಪ್ರಯೋಜನವಾಗುವುದಿಲ್ಲ. ಆದರಿಂದ ಜೀವನದಲ್ಲಿ ತಪ್ಪು ಮಾಡಿ, ಪರವಾಗಿಲ್ಲ. ಆದರೆ ನಂಬಿಕೆಗೆ ದ್ರೋಹವೆಸಗುವ ಕಾರ್ಯವನ್ನು ಮಾಡಬೇಡಿ. ಅದಕ್ಕಿಂತ ಘೋರ ಅಪರಾಧ ಮತ್ತೊಂದಿಲ್ಲ.
-
ಕೇಳ್ರಪ್ಪೋ ಕೇಳಿ – 01 ಫೆಬ್ರವರಿ 201
ಚಂದ್ರು ಮುದ್ದಾಪುರ, ಹೊಸಪೇಟೆ?
ಗಿಂಡಿಮಾಣಿ ಬ್ಲಾಗ್ ಗೆ ನೀವೇ ಸ್ಪೂರ್ತಿಯಂತೆ…?- ಸರಿಯಾಗಿ ಹೇಳಿದೆ .. ಕಣ್ಣು ಹೊಡೆದರೆ ಬಸಿರಾಗಿದ್ದನ್ನು ನಾನು ಇಲ್ಲಿ ತನಕ ಕೇಳಿಲ್ಲ!!
-
ಕೇಳ್ರಪ್ಪೋ ಕೇಳಿ – 01 ಫೆಬ್ರವರಿ 2011
ರಾಜೀವ ಎಣ್ಣೆಸರ, ರಾಜಾಜಿನಗರ
ಅಂದ ಹಾಗೆ ನೀವು ಜನಾಶ್ರೀ ಸೇರೋದಿಲ್ಲ ಅಂತಾಯ್ತು..?- ಸೇರ್ತೀನಿ ಅಂತ ನಾನು ಎಲ್ಲಿ ಹೇಳಿದ್ದೇನೆ? ಧೂಳು ಎದ್ದರೆ ಅದು ‘ಗಣಿ ಧೂಳು’ ಎಂದು ಹೇಳಿದ ಹಾಗಾಯ್ತು ನಿಮ್ಮ ಕತೆ!
-
ಟ್ವಿಭಾಷಿತ – 01 ಫೆಬ್ರವರಿ 2011
** ‘ವಿಜಯ ಕರ್ನಾಟಕ’ದ ದಿಲ್ಲಿ ವರದಿಗಾರ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಕ್ಕೆ -”ಕಳಚಿತು ಎಂಟು ಮುಕ್ಕಾಲು ವರ್ಷದ ನಂಟು, ಆದರೆ ಪತ್ರಿಕೋದ್ಯಮ ಇನ್ನೂ ಉಂಟು. ಮುಗಿಯಿತು ದಿಲ್ಲಿ ಋಣ, ಬೆಂಗಳೂರಿನತ್ತ ಪಯಣ.”
** ಸೆಲಿನಾ ಜೇಟ್ಲಿ ಜೀವನ – ಟ್ವಿಟ್ಟರ್ ಬಗ್ಗೆ – Life is lik twittr. Ppl will comnt on ur prblems bt no 1 is gonna solve thm As ever1is so busy updating their own status.
** [...] -
ಟ್ವಿಭಾಷಿತ – 31 ಜನವರಿ 2011
ನಿನ್ನೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯತಿಥಿ. ಈ ಸಂದರ್ಭದಲ್ಲಿ ಮೂಡಿ ಬಂದ ಕೆಲವು ಟ್ವಿಭಾಷಿತಗಳು ಃ
** ಗಾಂಧೀಜಿ ಮರಿ ಮೊಮ್ಮಗ ತುಷಾರ ಗಾಂಧಿ – My appologies to all the Bevdas who had to suffer without booz today because my great grandfather was murdered on this day.
** ಸಿ.ಎನ್.ಎನ್ – ಐಬಿಎನ್ ಮುಖ್ಯಸ್ಥ ರಾಜದೀಪ ಸರದೇಸಾಯಿ – mahatma’s birth and death anniv get every govt [...] -
ಹೊಸ ಅಂಕಣ ‘ಟ್ವಿಭಾಷಿತ’ ಆರಂಭ
ನಾನು ಕೆಲ ದಿನಗಳಿಂದ ಹಿಡಿಸಿಕೊಂಡ ಹೊಸ ಹುಚ್ಚೆಂದರೆ ಟ್ವಿಟ್ಟರ್ !
ಅಕ್ಷರಶಃ ನಾನು ‘ಟ್ವೀಕ್ಷೆ’ಯನ್ನು ಸ್ವೀಕರಿಸಿದ್ದೇನೆ. ಪ್ರತಿದಿನ ಏನಿಲ್ಲವೆಂದರೂ ಎರಡು ತಾಸು ಟ್ವೀಟ್ ಮಾಡುತ್ತೇನೆ. ನಾಲ್ಕು ತಾಸು ಸುಮ್ಮನಿದ್ದರೆ, ಹತ್ತಾರು ಮಂದಿ ಕಾಲು ಕೆರೆದು ಗಿಕ್ಕಳಿಸಿ ಹೋಗಿರುತ್ತಾರೆ. ಟ್ವಿಟ್ಟರ್ ನಲ್ಲಿ ನಾನು ಯಾರ್ಯಾರನ್ನೋ ಹಿಂಬಾಲಿಸುತ್ತಿದ್ದರೆ, ನನ್ನನ್ನೂ ಅವೆಷ್ಟೋ ಮಂದಿ ಬೆನ್ನಟ್ಟುತ್ತಿರುತ್ತಾರೆ.
೧೪೦ ಅಕ್ಷರಗಳಲ್ಲಿ ಒಂದಷ್ಟು ಹೊಸ ಮಾಹಿತಿ, ನಗು, ಕಚಗುಳಿ, ಚೋದ್ಯ, ವ್ಯಂಗ್ಯ, ವಕ್ರತುಂಡೋಕ್ತಿ, ಕ್ರೇಜಿ ಹೇಳಿಕೆ…ಇನ್ನೂ ಏನೇನೋ..ಇವೆಲ್ಲವನ್ನೂ ಒಳಗೊಂಡ ಸಂಗತಿಗಳನ್ನು ಪ್ರೋಕ್ಷಣ ಮಾಡಿ ಹೋಗುತ್ತಾರೆ. ಪ್ರತಿಯೊಬ್ಬರಿಗೂ ತಾನು ಹೊಸ [...] -
ಸ್ಫೂರ್ತಿಸೆಲೆ – 31 ಜನವರಿ 2011
ನಮ್ಮ ನಗುವನ್ನು ಯಾವತ್ತೂ ಕಳೆದುಕೊಳ್ಳಬಾರದು. ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಗುವಿಗಿಂತ ಬೇರೆ ಯಾವ ಭಾವನೆಯೂ ಮುಚ್ಚಿಡಲಾರದು. ಸೋತವರು ನಗುತ್ತಿದ್ದರೆ, ಗೆದ್ದವರ ಗೆಲುವಿನ ಉತ್ಸಾಹ ತಕ್ಷಣ ಕುಗ್ಗಿ ಹೋಗುತ್ತದೆ. ಆದ್ದರಿಂದ ಸದಾ ನಗುತ್ತಿರಬೇಕು.
-
ಕೇಳ್ರಪ್ಪೋ ಕೇಳಿ – 31 ಜನವರಿ 2011
ಶ್ರೀನಿವಾಸ ನಾಕಟ್ಟೆ, ಹುಬ್ಬಳ್ಳಿ
ಯಶವಂತ ಸರದೇಶಪಾಂಡೆ ಸಿನಿಮಾದಲ್ಲಿ ವಿಲನ್ ಯಾರು ?- ಕತೆಯೇ ಹಾಗಿದೆ, ಅದರಲ್ಲಿ ವಿಲನ್ನೇ ಹೀರೋ !
-
ಕೇಳ್ರಪ್ಪೋ ಕೇಳಿ – 31 ಜನವರಿ 2011
ಶಿವಸ್ವಾಮಿ ವಡಗೆರೆ, ಗುಂಡ್ಲುಪೇಟೆ
ಮತ್ತೆ ಪತ್ರಿಕೆ ತುಂಬೆಲ್ಲ ಆನೆಗಳ ಹಾವಳಿ..?- ‘ಸರಿ ಬಿಡು, ಇನ್ನು ಕಾಡಿನಿಂದ ಬಂದ ಬಳಿಕ ಬಿಲ್ ಹಾವಳಿ’ ಎಂದು ಪತ್ರಿಕೆ ವರದಿಗಾರರೆಲ್ಲ 360 ಡಿಗ್ರಿ ತಿರುಗಿ ತಲೆ ಮೇಲೆ ಕೈಹೊತ್ತು ಕೂತರಂತೆ !
