ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for December, 2010

 • ಸ್ಫೂರ್ತಿಸೆಲೆ – 9 ಡಿಸೆಂಬರ್ 2010

  ಅನುಕೂಲಕರ ವಾತಾವರಣದಲ್ಲಿ ನಾಯಕನ ಸಾಮರ್ಥ್ಯವನ್ನು ಅಳೆಯಲಾಗದು. ಅದೇ ಪ್ರತಿಕೂಲಕರ ವಾತಾವರಣ ಆತನ ಸಾಮರ್ಥ್ಯಕ್ಕೆ ಸವಾಲೊಡ್ಡಬಹುದು. ಸವಾಲುಗಳಿಗೆ ಬೆನ್ನೊಡ್ಡದೇ ಸವಾಲು ಹಾಕಿ.

 • ಅಪಸ್ವರ ಎತ್ತುವವರಲ್ಲಿ ನೀವೇ ಕೊನೆಯವರಾಗಿ

  ಮಾತೆತ್ತಿದರೆ ನಕಾರಾತ್ಮಕವಾಗಿ ಮಾತಾಡು ವುದು ಒಂದು ಕಾಯಿಲೆ. ಕೆಲವರಿಗೆ ಇದೊಂದು ವಾಸಿಪಡಿಸಲಾಗದ ಕಾಯಿಲೆ. ಅವರು ಪ್ರತಿಯೊಂದರಲ್ಲೂ ಹುಳುಕು ಹುಡುಕುತ್ತಾರೆ. ನೀವು ಚಂದ್ರನನ್ನು ತೋರಿಸಿ, ಅವರು ಚಂದ್ರನೊಳಗಿರುವ ಕಪ್ಪು ಕಲೆಯನ್ನು ಎತ್ತಿ ತೋರಿಸುತ್ತಾರೆ. ಗುಲಾಬಿ ಹೂವನ್ನು ತೋರಿಸಿ, ಅದರ ಮುಳ್ಳು ಚುಚ್ಚುತ್ತದೆ ಎಂದು ಹೇಳುತ್ತಾರೆ. ಜಿಲೇಬಿ ಬಹಳ ಚೆನ್ನಾಗಿದೆ ಅಂದ್ರೆ, ಅದಕ್ಕೆ ಬಣ್ಣ ಹಾಕಿದ್ದು ಹೆಚ್ಚಾಯಿತು ಅಂತಾರೆ. ಇಂಥವರು ಐಶ್ವರ್ಯ ರೈ ಅನ್ನು ನೋಡಿ, ಅವಳ ಮೂಗು ತುಸು ನೀಳವಾಗಿದಿದ್ದರೆ ಚೆನ್ನಾಗಿರುತ್ತಿದ್ದಳು ಎಂದು ಹೇಳಲು ಹಿಂದೇಟು ಹಾಕಲಾರರು. ಇವರಿಗೆ […]

 • ಸ್ಫೂರ್ತಿಸೆಲೆ – 8 ಡಿಸೆಂಬರ್ 2010

  ಸದವಕಾಶವೆಂಬುದು ಯಾವತ್ತೂ ತನ್ನ ನೈಜ ಸ್ವರೂಪದಲ್ಲಿ ಬರುವುದಿಲ್ಲ. ಅದು ಕೆಲವೊಮ್ಮೆ ಸೋಲು, ಹಿನ್ನಡೆಯ ಸ್ವರೂಪದಲ್ಲೂ ಬರಬಹುದು. ಆಗ ನಾವು ಅದೃಷ್ಟ ಕೈಕೊಟ್ಟಿತೆಂದು ಭಾವಿಸುತ್ತೇವೆ. ಸದವಕಾಶ ಮಾರುವೇಷದಲ್ಲಿ ಬಂದಿದ್ದನ್ನು ಗಮನಿಸುವುದೇ ಇಲ್ಲ. ಆದ್ದರಿಂದ ಸೋಲು ಹಿನ್ನಡೆಯಾದಾಗ ಕೈಚೆಲ್ಲಬೇಕಾಗಿಲ್ಲ.

 • ವಕ್ರತುಂಡೋಕ್ತಿ – 08 ಡಿಸೆಂಬರ್ 2010

  ದುಬಾರಿ ವಸ್ತುಗಳನ್ನು ಕಂಡಾಗ ಬೇಸರಿಸಿಕೊಳ್ಳ ಬಾರದು. ಅವುಗಳನ್ನು ಖರೀದಿಸದೇ ಮುಯ್ಯಿ ತೀರಿಸಿಕೊಳ್ಳಬೇಕು.

 • ಯಾರೂ ನಿಕೃಷ್ಟರಲ್ಲ

  ಪ್ರತಿದಿನ ನಾನು ಕನಿಷ್ಠ ಇಪ್ಪತ್ತು ಮಂದಿಯ ನ್ನಾದರೂ ಭೇಟಿ ಮಾಡುತ್ತೇನೆ. ಈ ಪೈಕಿ ಏಳೆಂಟು ಮಂದಿ ಹೊಸಬರು. ಅಂದರೆ ಅದಕ್ಕಿಂತ ಮೊದಲು ಭೇಟಿ ಮಾಡಿದವರಲ್ಲ. ಪ್ರತಿಯೊಬ್ಬರೂ ನನ್ನಲ್ಲಿ ಹೊಸ ಹೊಸ ವಿಚಾರ ಗಳನ್ನು ಹೇಳುತ್ತಾರೆ. ತಮ್ಮ ಅಪರೂಪದ ಅನುಭವಗಳನ್ನು ಹಂಚಿಕೊಳ್ಳು ತ್ತಾರೆ. ಪ್ರತಿಯೊಬ್ಬರೂ ಒಂದಿಲ್ಲೊಂದು ವಿಧದಲ್ಲಿ ಪರಿಣತರು, ನುರಿತವರು. ಅವರೆಲ್ಲರಿಗೂ ಹೇಳಲು ಒಂದು ಕತೆ, ಪ್ರಸಂಗ, ಅನುಭವವಿರುತ್ತದೆ. ಎಲ್ಲರೂ ಒಂದು ಹೊಸ ಸಂಗತಿಯನ್ನು ಹೇಳುತ್ತಾರೆ. ಅಂದರೆ ಪ್ರತಿಯೊಬ್ಬರ ಭೇಟಿಯಿಂದಲೂ ಒಂದಷ್ಟು ಹೊಸ ಸಂಗತಿಗಳನ್ನು ತಿಳಿಯಬಹುದು. ಕಲಿಯಬಹುದು. ಅವರು […]

 • ಸ್ಫೂರ್ತಿಸೆಲೆ – 7 ಡಿಸೆಂಬರ್ 2010

  ಪ್ರಮಾದಗಳು ನಿಮ್ಮ ಅನುಭವವನ್ನು ಹೆಚ್ಚಿಸುತ್ತವೆ. ಅನುಭವ ನಿಮ್ಮ ಪ್ರಮಾದಗಳನ್ನು ಕಡಿಮೆಗೊಳಿಸುತ್ತವೆ. ನೀವು ನಿಮ್ಮ ಪ್ರಮಾದಗಳಿಂದ ಕಲಿಯಿರಿ. ಬೇರೆಯವರು ನಿಮ್ಮ ಯಶಸ್ಸಿನಿಂದ ಕಲಿಯುತ್ತಾರೆ. ಆಗ ನೀವು ಆದರ್ಶರಾಗುತ್ತೀರಿ.

 • ವಕ್ರತುಂಡೋಕ್ತಿ – 07 ಡಿಸೆಂಬರ್ 2010

  ನೆನಪಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಮಾಡಬಹುದಾದ್ದೆಂದರೆ ಮರೆಯುವುದು.

 • ನಿಮ್ಮನ್ನು ನೀವೇ ಆಳಬೇಕು

  ಹೀಗಂದ್ರೆ ಬೇರೆಯವರ ಮಾತುಗ ಳನ್ನು ಕೇಳಬಾರದು, ಅನ್ಯರ ಉಪದೇಶ ಗಳಿಗೆ ಕಿವಿಯಾಗಬಾರದು ಅಂತಲ್ಲ. ಅವರೆಲ್ಲರ ಮಾತುಗಳನ್ನು ಕೇಳಬೇಕು. ಬೇರೆಯವರ ಕಿವಿಮಾತು, ಸಲಹೆ ಗಳನ್ನು ಗಂಭೀರವಾಗಿಯೇ ಕೇಳ ಬೇಕು. ಉಡಾಫೆ ಮಾಡಬಾರದು. ಆದರೆ ಕೊನೆಯಲ್ಲಿ ಮಾತ್ರ ನಾವೇ ನಿರ್ಧಾರ ತೆಗೆದುಕೊಳ್ಳ ಬೇಕು. ಬೇರೆಯವರ ಅಧೀನದಲ್ಲಿರುವುದು ನಮ್ಮ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಯಾವತ್ತೂ ಧಕ್ಕೆಯೇ. ಆಗ ಬೇರೆಯ ವರು ನಮ್ಮನ್ನು ಆಳುತ್ತಾರೆ, ಸವಾರಿ ಮಾಡುತ್ತಾರೆ. ಸಹಜವಾಗಿ ನಾವು ನಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಮರದ ಮೇಲೆ ಕುಳಿತ ಹಕ್ಕಿಯಿದೆಯಲ್ಲ, ಅದಕ್ಕೆ ಮರ ಬೇಕು, […]

 • ಸ್ಫೂರ್ತಿಸೆಲೆ – 6 ಡಿಸೆಂಬರ್ 2010

  ನಮ್ಮ ಜೀವನದ ಮೂಲ ಉದ್ದೇಶ ಸಂತೋಷದ, ಸಮಾಧಾನದ ಜೀವನ ಸಾಗಿಸುವುದು. ಆದರೂ ನಾವೆಲ್ಲರೂ ಅದಕ್ಕೆ ವಿರುದ್ಧವಾದ ಸ್ಥಿತಿಯಲ್ಲಿರುತ್ತೇವೆ. ಸಂತೋಷವನ್ನು ಸೃಷ್ಟಿಸಿಕೊಳ್ಳಲು ಬಹಳ ಹೆಣಗಬೇಕಿಲ್ಲ. ಅದು ನಮ್ಮ ಮನಸ್ಸಿನಲ್ಲಿಯೇ ಇದೆ. ಅಂಥ ಮನಸ್ಥಿತಿಯನ್ನು ಸದಾ ಜಾಗೃತವಾಗಿ ಇಟ್ಟುಕೊಳ್ಳಬೇಕು.

 • ನಮ್ಮಂಥ ಸುಖಿಗಳು ಬೇರಾರಿಲ್ಲವೆಂದು ಭಾವಿಸಿ

  ಇದನ್ನು ಪಾಲಿಸುವುದು ಕಷ್ಟ. ಹಾಗೆಂದು ಬಹಳ ಕಷ್ಟವಲ್ಲ. ಸುಲಭವಾಗಿಯೂ ಪಾಲಿಸಬಹುದು. ಯಾಕೆಂದರೆ ಯೋಚಿಸಲು, ಅಂದುಕೊಳ್ಳಲು, ಭಾವಿಸಲು, ಕಲ್ಪಿಸಿಕೊಳ್ಳಲು ಬಹಳ ಕಷ್ಟಪಡಬೇಕಿಲ್ಲ. ಅನೇಕರು ಸ್ಥಿತಿವಂತರಾಗಿರುತ್ತಾರೆ. ಒಳ್ಳೆಯ ನೌಕರಿ, ಸ್ವಂತ ಮನೆ, ಹೆಂಡತಿ, ಮಕ್ಕಳು, ಕಾರು ಎಲ್ಲವೂ ಇರುತ್ತದೆ. ಆದರೆ ಅವರಿಗಿರುವ ಕಷ್ಟ ಒಂದೆರಡಲ್ಲ. ಅವರ ಜತೆ ಹತ್ತು ನಿಮಿಷ ಕಳೆದರೆ ತಲೆಚಿಟ್ಟು ಹಿಡಿಯುವುದೊಂದು ಬಾಕಿ. ಅದೇ ಇವೇನೂ ಇಲ್ಲದವರು ದುಃಖಿಸುವುದು ಸಹಜ ಬಿಡಿ. ನಾವು ಸುಖಜೀವನ ನಡೆಸಿದರಷ್ಟೇ ಸಾಲದು. ನಾವು ಸುಖಿಗಳೆಂದು ಭಾವಿಸಿಕೊಳ್ಳಬೇಕು. ಒಂದು ವೇಳೆ ಅಷ್ಟೇನೂ ಸುಖಜೀವನ […]