Date archive for November, 2010
-
ಬೇರೆಯವರ ಜೀವನದಲ್ಲೂ ನಾವು ನೆಲೆಸಬೇಕು
ಬಹುತೇಕ ಮಂದಿ ತಮ್ಮ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ತಾವಾಯಿತು, ತಮ್ಮ ಹೆಂಡತಿ ಮಕ್ಕಳಾಯಿತು. ಒಂದು ರೀತಿಯಲ್ಲಿ ಅವರದು ಅಪಾರ್ಟ್‌ಮೆಂಟ್ ಜೀವನ. ತಮ್ಮ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಯಾರಿರುತ್ತಾರೆ, ಅವರುಯಾರು, ಏನು ಮಾಡ್ತಾರೆ. ಹೀಗೆ ಯಾವ ಸಂಗತಿಗಳೂ ಗೊತ್ತಿರುವುದಿಲ್ಲ. ಯಾಕೆಂದರೆ ನಮಗೆ ಅವರ ಬಗ್ಗೆ ತಿಳಿದುಕೊಳ್ಳಲು ಇಷ್ಟವಿಲ್ಲ ಎಂಬುದಕ್ಕಿಂತ ನಮ್ಮ ಪ್ರಪಂಚದಲ್ಲಿಯೇ ಮುಳುಗಿರುತ್ತೇವೆ. ನಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತೇವೆ. ಹೀಗಾಗಿ ನಮಗೆ ಬೇರೆಯವರ ಜೀವನದಲ್ಲಿ ನೆಲೆಸಲು ಸಾಧ್ಯವಾಗುವುದೇ ಇಲ್ಲ. ಅವರೂ ಸಹ ನಮ್ಮನ್ನು ದೂರವೇ ಇಟ್ಟಿರುತ್ತಾರೆ.
ಬೇರೆಯವರ ಜೀವನದಲ್ಲಿ ನೆಲೆಸುವುದು ಅಂದ್ರೆ [...] -
ಸ್ಫೂರ್ತಿಸೆಲೆ – 30 ನವೆಂಬರ್ 2010
ಎಲ್ಲರೂ ಕೆಲಸ ಮಾಡುತ್ತಾರೆ, ಆದರೆ ನೀವು ಮಾಡುವ ಕೆಲಸವನ್ನು ಇತರರು ಅನುಕರಿಸಬೇಕು, ಆ ರೀತಿ ಮಾಡಬೇಕು. ಏನೇ ಮಾಡಿ ಅದನ್ನು ಪ್ರತಿಯೊಬ್ಬರೂ ಮೆಚ್ಚಬೇಕು. ನಿಮಗೆ ಇಷ್ಟವಾಗದ್ದು ಬೇರೆಯವರಿಗೆ ಹೇಗೆ ಇಷ್ಟವಾದೀತು?
-
ವಕ್ರತುಂಡೋಕ್ತಿ – 30 ನವೆಂಬರ್ 2010
ಇತಿಹಾಸವೆಂದರೆ ಗಣಿತವಿದ್ದ ಹಾಗೆ. ಇಸವಿ ಯನ್ನು ನೆನಪಿಟ್ಟುಕೊಳ್ಳಬೇಕು.
-
ನಗುವಿನಿಂದ ಆರಂಭಿಸಿ ನಿಮ್ಮ ದಿನವನ್ನು
ಇವತ್ತು ಇಡೀ ದಿನ ನನ್ನ ಮುಖದಲ್ಲಿ ನಗುವನ್ನು ಮಾಸಲು ಕೊಡುವುದೇ ಇಲ್ಲ-ಹಾಗೊಂದು ರೂಲನ್ನು ಬೆಳ್ಳಂಬೆಳಗ್ಗೆ ಹಾಸಿಗೆಯಲ್ಲೇ ನಿಮಗೆ ನೀವೆ ವಿಧಿಸಿಕೊಂಡು ಎದ್ದೇಳಿ. ಅದಕ್ಕೇನೂ ಬಹಳಷ್ಟು ಕಷ್ಟಪಡಬೇಕಾದದ್ದೇನೂ ಇಲ್ಲ. ನಿದ್ದೆ ನಿಮ್ಮನ್ನು ನಿನ್ನೆಯ ಎಲ್ಲ ಜಂಜಡ, ಸಮಸ್ಯೆಗಳನ್ನು ಮರೆಸಿ ಮನಸ್ಸನ್ನು ಹಗುರಾಗಿಸಿರುತ್ತದೆ. ಹೊಸತನ್ನು ಯೋಚಿಸಲು ಸ್ವಚ್ಛ ಬಿಳಿಯ ಕಾಗದದಂತೆ ಮನಃಪಟಲ ಸಿದ್ಧಗೊಂಡಿರುತ್ತದೆ. ನಾವು ಇಂಥ ಬಿಳಿಹಾಳೆಯಲ್ಲಿ ದಿನದ ಬರವಣಿಗೆಗೆ ಶ್ರೀಕಾರ ಹಾಕುವ ಮೊದಲೇ ಬೇಕಾದ್ದು, ಬೇಡದ್ದು…ಅರ್ಥಹೀನ, ಅನರ್ಥಕಾರಿ ಹೀಗೆ ಏನೆಂದರೆ ಅದನ್ನು ಗೀಚಲಾರಂಭಿಸಿಬಿಟ್ಟಿರುತ್ತೇವೆ.
ಎಷ್ಟೋ ವೇಳೆ ಎಚ್ಚರಾಗಿದ್ದರೂ ಹಾಸಿಗೆಯಲ್ಲೇ ಹೊರ [...] -
ವಕ್ರತುಂಡೋಕ್ತಿ – 29 ನವೆಂಬರ್ 2010
ಪ್ರತಿ ಗಂಡಸು ತನ್ನ ಹೆಂಡತಿ ಸುಂದರಳಾಗಿ ರಬೇಕು, ಬುದ್ಧಿವಂತೆಯಾಗಿರಬೇಕು, ಪ್ರೀತಿ ಸುವವಳಾಗಿರಬೇಕು, ಕಾಳಜಿಯಿಂದ ನೋಡಿಕೊಳ್ಳುವವಳಾಗಿರಬೇಕು ಎಂದು ಬಯಸುತ್ತಾನೆ. ಆದರೆ ಕಾನೂನಿನ ಪ್ರಕಾರ ಒಬ್ಬಳೇ ಹೆಂಡತಿಯನ್ನು ಹೊಂದಬಹುದು.
-
ಸ್ಫೂರ್ತಿಸೆಲೆ – 29 ನವೆಂಬರ್ 2010
‘ನೋ’ ಎನ್ನಲು ಧೈರ್ಯ ಬೇಕು. ಸತ್ಯ ಎದುರಿಸಲು ಎದೆಗಾರಿಕೆ ಇರಬೇಕು. ಸರಿಯಾದ ಹಾದಿಯಲ್ಲಿ ಸಾಗಲು ಸರಿಯಾದುದನ್ನೇ ಮಾಡಿರಿ. ಪ್ರಾಮಾಣಿಕತೆಯೊಂದಿಗೆ ಬದುಕಲು ಇವೇ ಮಂತ್ರದಂಡಗಳಾಗಿರುತ್ತವೆ.
-
ವಕ್ರತುಂಡೋಕ್ತಿ – 28 ನವೆಂಬರ್ 2010
ಹೊಸತು ಎಂದೇನೂ ಅನಿಸದ, ನಿಜಕ್ಕೂ ಮೂಲೆಯಲ್ಲಿ ಮುರಿದು ಬಿದ್ದಂತೆ ಕಾಣುವ ಸುದ್ದಿಗೆ ಬ್ರೇಕಿಂಗ್ ನ್ಯೂಸ್ ಎನ್ನಬಹುದು.
-
ಜನಗಳ ಮನ – 28 ನವೆಂಬರ್ 2010
ಸದ್ಯದ ರಾಜಕಾರಣ: ಎರಡು ಪ್ರಸಂಗಗಳು
ಈ ಜೋಕನ್ನು ನೀವು ಕೇಳಿರಬಹುದು.
ಅಮೆರಿಕದ ರಕ್ಷಣಾ ಪ್ರಧಾನ ಕಚೇರಿ ಪೆಂಟಗಾನ್ ಮೇಲೆ ದಾಳಿ ನಡೆದ ನಂತರ ಚೀನಾದ ಪ್ರಧಾನಿ, ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್‌ಗೆ ಫೋನ್ ಮಾಡಿ ಹೇಳಿದನಂತೆ: ‘ಪೆಂಟಗಾನ್ ಮೇಲೆ ದಾಳಿ ನಡೆ ಯಿತು ಎಂಬ ವಿಷಯ ತಿಳಿದು ಬಹಳ ದುಃಖವಾಯಿತು. ಇದೊಂದು ಬಹಳ ದೊಡ್ಡ ದುರಂತ. ಆದರೂ ಆ ಸಂದರ್ಭ ದಲ್ಲಿ ನಿಮಗೆ ಸಾಂತ್ವನದ ಮಾತು ಗಳನ್ನು ಹೇಳಬೇಕೆನಿಸುತ್ತಿದೆ. ಅದೇ ನೆಂದರೆ ಒಂದು ವೇಳೆ [...] -
ನಾವು ಪ್ರತಿದಿನವೂ ಒಳ್ಳೆಯರಾಗಬೇಕು
ಈ ರೂಲ್‌ಇದೆಯಲ್ಲಾ, ಇದನ್ನು ಅನುಸರಿಸುವುದು ಬಹಳ ಕಷ್ಟ. ಯಾಕೆಂದರೆ ಈ ನಿಯಮವನ್ನು ಒಂದೂ ದಿನ ಸಡಿಲಿಸುವಂತಿಲ್ಲ. ಪ್ರತಿದಿನವೂ ಕಠಿಣ ವ್ರತದಂತೆ, ಶಪಥದಂತೆ, ಪ್ರೀತಿಯಂತೆ. ಶಾಸನದಂತೆ ಆಚರಿಸಬೇಕು. ಒಂದು ದಿನ ಪಾಲಿಸದಿದ್ದರೂ ಗ್ರಹಚಾರ ತಪ್ಪಿದ್ದಲ್ಲ. ಒಂದು ದಿನ ಉಲ್ಲಂಘಿಸಿದರೂ ಜೀವನವಿಡೀ ಜನರ ಟೀಕೆಗೆ, ನಿಂದನೆಗೆ ಗುರಿಯಾಗಬೇಕು.
ಉದಾಹರಣೆಗೆ ನಿಮ್ಮ ಹೆಂಡತಿಯಿರಬಹುದು, ಮಕ್ಕಳಿರಬಹುದು ಅದರ ಜತೆ ಎಂದಿಗೂ ಸುಳ್ಳು ಹೇಳುವಂತಿಲ್ಲ. ಮೋಸ ಮಾಡುವಂತಿಲ್ಲ. ಈ ನಿಯಮವನ್ನು ಒಂದು ದಿನದ ಮಟ್ಟಿಗೆ ಮುರಿದಿರಿ ಎನ್ನಿ. ಅವರು ನಿಮ್ಮನ್ನು ಜೀವನವಿಡೀ ನಂಬುವುದಿಲ್ಲ. ಸದಾ ಸಂದೇಹದಿಂದಲೇ [...] -
ವಕ್ರತುಂಡೋಕ್ತಿ – 27 ನವೆಂಬರ್ 2010
ವಿವಾಹಿತನಾದವನು ತನ್ನ ತಪ್ಪುಗಳನ್ನೆಲ್ಲ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಆ ಕೆಲಸವನ್ನು ಹೆಂಡತಿ ಅಚ್ಚುಕಟ್ಟಾಗಿ ಮಾಡುತ್ತಾಳೆ.
