ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for October, 2010

 • ಜನಗಳ ಮನ – 31 ಅಕ್ಟೋಬರ್ 2010

  ದಲೈಲಾಮ ಎಂಬ ನಿರಂತರ ನಗೆಗಾರ ಜಗತ್ತಿನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ದಲೈಲಾಮ ಅವರ ಆತ್ಮಕತೆ My Spiritual Autobiographyಯನ್ನು ಕಳೆದ ಒಂದು ವಾರದಿಂದ ಓದುತ್ತಿದ್ದೇನೆ. ‘ದಿ ಟೈಮ್ಸ್’ ಪತ್ರಿಕೆ ದಲೈಲಾಮ ಕುರಿತು ಹೀಗೆ ಬರೆಯುತ್ತದೆ- ‘ಇವರು ಯಾವುದೇ ಧಾರ್ಮಿಕ ಮುಖಂಡ, ರಾಜಕೀಯ ನಾಯಕ, ಸಿನಿಮಾನಟನಿಗಿಂತ ಸೂಜಿಗಲ್ಲಿನಂತೆ ಜನರನ್ನು ಸೆಳೆಯುತ್ತಾರೆ. ಇವರು ಜೀವನವನ್ನು ನಮ್ಮೆಲ್ಲರಿಗಿಂತ ಭಿನ್ನವಾಗಿ ನೋಡು ವುದರಿಂದ ಆಪ್ತರಾಗುತ್ತಾರೆ. ಉಳಿದವರು ಉಪದೇಶ ಮಾಡುತ್ತಾರೆ. ಆದರೆ ಇವರು ದೇಶ (ಜೀವನ) ತೋರಿಸುತ್ತಾರೆ. ಎಷ್ಟು ಮಂದಿಗೆ ಆ ಭಾಗ್ಯ […]

 • ಸುದ್ದಿಮನೆ ಎಂಬ ಕಾರ್ಖಾನೆಯಲ್ಲಿ ಆಗೀಗ ಆಗುವ ಅವಘಡಗಳು

  ಸುದ್ದಿಮನೆ ಒಂದು ಕಾರ್ಖಾನೆ ಇದ್ದಂತೆ. ಸುದ್ದಿ ತರುವವರು ಹಾಗೂ ಅದನ್ನು ಪರಿಷ್ಕರಿಸುವವರು ಇಲ್ಲಿ ಅಕ್ಷರಶಃ ಯಂತ್ರಗಳಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಗುಣ ಮಟ್ಟದ ಉತ್ಪನ್ನ ತಯಾರಿಕೆಗೆ ಸಾಕಷ್ಟು ಕಸರತ್ತು ನಡೆಯುತ್ತದೆ. ಈ ಕಸರತ್ತಿಗೆ ಪೈಪೋಟಿಯ ಲೇಪವಿದೆ. ಹಿಂದಾದರೆ ‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಈಗಿನ ಪೈಪೋಟಿ ಯುಗದಲ್ಲಿ ‘ ಇಂದಿನ ಸುದ್ದಿ ಇಂದೇ ರದ್ದಿ’ ಎಂಬಂತಾಗಿದೆ. ಹೀಗಾಗಿ ಸುದ್ದಿ ಬೇಟೆಯ ವಸ್ತು. ಸುದ್ದಿ ಬೇಟೆ ಆಡಲು ವರದಿಗಾರರಲ್ಲಿ ಸದಾ ಪೈಪೋಟಿ. ಸ್ಪರ್ಧಾ ಯುಗದಲ್ಲಿ ಸೆಣಸಬೇಕಿರುವುದರಿಂದ […]

 • ದುಡಿವ ಕೈಗಳಲ್ಲಿ, ಯೋಚಿಸುವ ಮಿದುಳಿನಲ್ಲಿ, ಪ್ರೀತಿಸುವ ಹೃದಯದಲ್ಲಿ ನನಗೆ ನಂಬಿಕೆ!

  ಮತ್ತೆ ರಿಚರ್ಡ್ ಬ್ರಾನ್ಸನ್! ಕಳೆದ ಒಂದು ತಿಂಗಳಿಂದ ಆತ ಬರೆದ ಪುಸ್ತಕಗಳನ್ನೆಲ್ಲ ತಂದು ಓದುತ್ತಿದ್ದೇನೆ. ಆತ ಬಹಳ ಆಪ್ತನಾಗುತ್ತಿದ್ದೇನೆ. ಕೆಲವು ಓದುಗರಂತೂ ಆತನ ಬಗ್ಗೆ ಇನ್ನೂ ಬರೆಯಿರಿ ಅಂತ ವರಾತ ಮಾಡುತ್ತಿದ್ದಾರೆ. ನಿಮ್ಮ ಕೋರಿಕೆ ಮೇರೆಗೆ ಮತ್ತೆ ರಿಚರ್ಡ್ ಬ್ರಾನ್ಸನ್… ನಿಮ್ಮ ಮೇಲೆ ನಂಬಿಕೆ ಇರಲಿ ಕನಸನ್ನು ಬೆನ್ನಟ್ಟಿ ಆದರೆ ವಾಸ್ತವ ಪ್ರಪಂಚದಲ್ಲಿ ಬದುಕಿ ಒಟ್ಟಾಗಿ ಕೆಲಸ ಮಾಡಿ. ‘ನಿಮಗೆ ಹಾಲು ಬೇಕಿದ್ದರೆ, ಆಕಳ ಬಳಿ ಹೋಗಿ ಹಾಲನ್ನು ಹಿಂಡಬೇಕು. ಆಕಳ ಬಳಿ ಕುಳಿತುಕೊಂಡರೆ ಹಾಲು ಬರೊಲ್ಲ.’ […]

 • ಜನಗಳ ಮನ – 24 ಅಕ್ಟೋಬರ್ 2010

  ಭಾನುವಾರ, 24 ಅಕ್ಟೋಬರ್  2010 ಅಂದು ವಾಜಪೇಯಿ ಹೇಳಿದ್ದನ್ನು ಬಿಜೆಪಿ ನಾಯಕರು ಕೇಳಿಸಿಕೊಳ್ಳಲಿ! ಕರ್ನಾಟಕದಲ್ಲಿ ಎಲ್ಲರೂ ಕೋಟಿಯ ಮಾತಾಡುತ್ತಿದ್ದಾರೆ! ಒಂದೆರಡಲ್ಲ, ಇಪ್ಪತ್ತು, ಇಪ್ಪತ್ತೈದು, ಮೂವತ್ತು, ಐವತ್ತು ಕೋಟಿಯ ಮಾತಾಡುತ್ತಿದ್ದಾರೆ. ಇಪ್ಪತ್ತೈದು ಕೋಟಿಗೂ ಐವತ್ತು ಕೋಟಿಗೂ ಇರುವ ವ್ಯತ್ಯಾಸವೆಂದರೆ ನಿಜಕ್ಕೂ ಅಷ್ಟು ಹಣವಾ ಅಥವಾ ಕೇವಲ ಶಬ್ದವಾ ಅಥವಾ ಸೌಂಡಾ ಗೊತ್ತಾಗುತ್ತಿಲ್ಲ. ‘ಕೌನ್ ಬನೇಗಾ ಕರೋಡ್‌ಪತಿ?’ ಕಾರ್ಯಕ್ರಮ ಟಿವಿ ಯಲ್ಲಿ ಪ್ರಸಾರವಾಗುವಾಗಲೂ ಕೋಟಿ ಬಗ್ಗೆ ಜನ ಈ ರೀತಿ ಮಾತಾಡುತ್ತಿರಲಿಲ್ಲ. ಶಾಸಕರ ಖರೀದಿಗೆ ದಲ್ಲಾಳಿಗಳಂತೆ ನೇಮಕಗೊಂಡ ರಾಜಕೀಯ ಧುರೀಣರಂತೂ […]

 • ಪತ್ರಿಕೆಯಲ್ಲಿ ಸುದ್ದಿಗಾಗಿ ಜೀಕುವಾಗಿನ ಜೋಕು ಜೋಕಾಲಿ

  ಪತ್ರಕರ್ತರು ಬೇರೆ ಅಲ್ಲ, ಓದುಗರು ಬೇರೆ ಅಲ್ಲ. ಪತ್ರಿಕೆ ಯಿಂದಾಗಿ ಓದುಗರಲ್ಲಿ, ಓದುಗರಿಂದಾಗಿ ಪತ್ರಿಕೆಯಲ್ಲಿ ಸದಾ ತಿಳಿಹಾಸ್ಯ, ರಂಜನೆ ಇದ್ದೇ ಇರುತ್ತದೆ. ಸದಾ ಸುದ್ದಿಯಿಂದ ಗಿಜಿಗುಡುವ ಸುದ್ದಿಮನೆಯಲ್ಲಿ ಹಾಸ್ಯಪ್ರಸಂಗಗಳಿಗೇನೂ ಕೊರತೆ ಯಿಲ್ಲ. ಇಂಥ ರಸಪಾಕಗಳೆಲ್ಲ ಸೇರಿಯೇ ಪತ್ರಿಕೆ ಹೊರಹೊಮ್ಮುತ್ತದೆ. ಪತ್ರಿಕೆ ಹೊರಬಿದ್ದ ನಂತರವೂ ಹಾಸ್ಯಪ್ರಸಂಗಗಳು ಮುಂದುವರಿ ಯುತ್ತವೆ. ಅಂಥ ಕೆಲವು ಪ್ರಸಂಗಗಳನ್ನು ಮೆಲುಕು ಹಾಕೋಣ. * * ಒಂದು ಕಾರು ಅಪಘಾತಕ್ಕೀಡಾಯಿತು. ತಕ್ಷಣ ನೂರಾರು ಮಂದಿ ಸೇರಿದರು. ಅಲ್ಲಿ ಏನಾಗುತ್ತಿದೆಯೆಂದು ಗೊತ್ತಾಗದಷ್ಟು ಗೊಂದಲ, ಗೌಜು. ವರದಿಗಾರನೊಬ್ಬ ಸ್ಥಳಕ್ಕೆ […]

 • ಸುಮ್ಮನೆ ಕೆಲ್ಸಮಾಡ್ತಾ ಹೋಗಿ, ಯಶಸ್ಸು ಹಿಂಬಾಲಿಸುತ್ತಾ ಹೋಗುತ್ತದೆ!

  ನಾನು ವಾರವಾರ ಒಬ್ಬರ ಬಗ್ಗೇನೇ ಬರೆಯುವುದಿಲ್ಲ. ಆದರೆ ವರ್ಜಿನ್ ಕಂಪನಿ ಮಾಲೀಕ ರಿಚರ್ಡ್ ಬ್ರ್ಯಾನ್‌ಸನ್ ನಮ್ಮೆಲ್ಲರಿಗೂ ವಿಚಿತ್ರ ಹುಚ್ಚು ಹಿಡಿಸಿ ದ್ದಾನೆ. ಹೀಗಾಗಿ ಅವನ ಬಗ್ಗೆ ಮತ್ತಷ್ಟು ಹೇಳೋಣವೆನಿಸಿದ್ದರಿಂದ ಈ ವಾರವೂ ಅವನೇ ಇಲ್ಲಿ ಇದ್ದಾನೆ. ನಮ್ಮ ವರ್ಜಿನ್ ಸಂಸ್ಥೆಯ ಸಿಬ್ಬಂದಿ ನನಗೊಂದು ಹೆಸರಿಟ್ಟಿ ದ್ದಾರೆ. ಅವರೆಲ್ಲ ನನ್ನನ್ನು ‘ಡಾ. ಯಸ್’ ಎಂದು ಕರೆಯುತ್ತಾರೆ. ಅವರು ಹಾಗೆ ಯಾಕೆ ಕರೆಯುತ್ತಾರೆಂದರೆ ನಾನು ಎಂದೂ ‘ನೋ’ ಎಂದು ಹೇಳುವುದಿಲ್ಲ ಅಂತ. ಒಂದು ಕೆಲಸವನ್ನು ಮಾಡದೇ ಇರುವುದಕ್ಕಿಂತ ಆ ಕೆಲಸವನ್ನು […]

 • ಪ್ರಮಾದಗಳಾಗುವವರೆಗೆ ಸಂಪಾದಕರು ಕ್ಷಮೆ ಯಾಚಿಸುತ್ತಲೇ ಇರಬೇಕಾಗುತ್ತದೆ!

  ‘ಕೆಲವು ಸಂಪಾದಕರು ಬರೆಯುತ್ತಾರೆ ಹಾಗೂ ಪ್ರತಿದಿನ ವಿಷಾದವನ್ನು ಮಾತ್ರ ಬರೆಯುತ್ತಾರೆ’ ಎಂಬ ಮಾತು ಸುದ್ದಿಮನೆಯಲ್ಲಿ ಚಾಲ್ತಿಯಲ್ಲಿದೆ. ಇದು ಸುಳ್ಳೇನಲ್ಲ. ಸಂಪಾದಕರ ಬರವಣಿಗೆಯಲ್ಲಿ ವಿಷಾದ ಬರಹ ಅವಿಭಾಜ್ಯ ಅಂಗ. ಕೆಲವರಿಗೆ ಅದೇ ಮುಖ್ಯ ಬರಹ. ಅದೆಷ್ಟೇ ದೊಡ್ಡ ಅಥವಾ ಚಿಕ್ಕ ಪತ್ರಿಕೆಯಿರಬಹುದು, ಅದರ ಸಂಪಾದಕರಿಗೆ ಕ್ಷಮೆಯಾಚಿಸುವುದು, ವಿಷಾದ ವ್ಯಕ್ತಪಡಿಸುವುದು ದೈನಂದಿನ ಕೆಲಸಗಳಲ್ಲೊಂದು. ಕೆಲವು ಪತ್ರಿಕೆಗಳಂತೂ ಇದನ್ನೇ ‘ದೈನಂದಿನ ಅಂಕಣ’ಗಳಂತೆ ಪ್ರಕಟಿಸುತ್ತವೆ. ಇಂಗ್ಲಿಷ್ ಪತ್ರಿಕೆಗಳಂತೂ Corrections and Clarifications (ತಪ್ಪು-ಒಪ್ಪು)ಎಂಬ ಶೀರ್ಷಿಕೆಯಡಿಯಲ್ಲಿ ತಾವು ದಿನವೂ ಮಾಡುವ ತಪ್ಪುಗಳನ್ನು ಪ್ರಕಟಿಸಿ ಕೈತೊಳೆದುಕೊಳ್ಳುತ್ತವೆ. […]

 • ಸದಾ ಗೆಲುವಿನ ಮೊಟ್ಟೆಗೆ ಕಾವು ಕೊಡುವುದು ಹೇಗೆ?

  ಈಹೊಲಸು ರಾಜಕಾರಣದ ಬಗ್ಗೆ ಬರೆಯಬೇಕಾ? ನಿಮ್ಮ ಉತ್ತರವೇನೆಂಬುದು ಗೊತ್ತು. ಅದನ್ನು ಊಹಿಸಿಯೇ ನಾನು ಬಹುವಾಗಿ ಇಷ್ಟಪಡುವ ವರ್ಜಿನ್ ಏರ್‌ಲೈನ್ಸ್ ಸೇರಿದಂತೆ ವರ್ಜಿನ್ ಸಮೂಹಸಂಸ್ಥೆಗಳ ಮಾಲೀಕ ರಿಚರ್ಡ್ ಬ್ರ್ಯಾನ್‌ಸನ್ ಹೇಳಿದ್ದನ್ನು ನಿಮಗೆ ನೀಡುತ್ತಿದ್ದೇನೆ. ಈಗಾಗಲೇ ಈ ಅಂಕಣದಲ್ಲಿ ಹಿಂದೊಮ್ಮೆ ಅವನ ಬಗ್ಗೆ ಮೂರ್‍ನಾಲ್ಕು ಬಾರಿ ಪ್ರಸ್ತಾಪಿಸಿ ದಾಗ ನೀವು ಇಷ್ಟಪಟ್ಟಿದ್ದಿರಿ. ಇದೂ ನಿಮಗೆ ಅಂಥ ಆನುಭವ ನೀಡುತ್ತದೆ, ಓದಿ ನೋಡಿ. * * * ಯಾವುದೇ ಒಂದು ಹೊಸ ಕೆಲಸಕ್ಕೆ ಕೈ ಹಾಕಿದರೂ ಅಲ್ಲಿ ಒಂದಲ್ಲ ಒಂದು ತೊಂದರೆ […]

 • ಜನಗಳ ಮನ – 10 ಅಕ್ಟೋಬರ್ 2010

  ಭಾನುವಾರ, 10 ಅಕ್ಟೋಬರ್ 2010 ಕರ್ನಾಟಕದ ರಾಜಕಾರಣಿಗಳ ಮುಂದೆ ನಮ್ಮವರೇ ವಾಸಿ ಪ್ರಸ್ತುತ  ರಾಜ್ಯ ರಾಜಕಾರಣದ ಬಗ್ಗೆ ಬರೆಯಲೇಬಾರದೆಂದು ತೀರ್‍ಮಾನಿ ಸಿದ್ದೀರಾ ಎಂದು ಅನೇಕ ಓದುಗರು ಎಸ್ಸೆಮ್ಮೆಸ್ ಮೂಲಕ ಕೇಳಿದ್ದಾರೆ. ಬರೆಯಬೇಕಾದ ಅಗತ್ಯವಿಲ್ಲವೇನೋ ಎಂದೆನಿಸುತ್ತಿದೆ. ಯಾಕೆಂದರೆ ಇಂಥ ಅಸಹ್ಯ, ನೀಚ, ಲಜ್ಜೆಗೇಡಿ ಹಾಗೂ ಹೀನಾತಿಹೀನ ರಾಜಕಾರಣವನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬಲ್ಲರು. ರಾಜ್ಯದ ಊರೂರಿನಲ್ಲಿ, ಬೀದಿ ಬೀದಿಯಲ್ಲಿ, ಮನೆ ಮನೆಗಳಲ್ಲಿ ಈ ಹೊಲಸು ರಾಜಕಾರಣದ ಅತಿರೇಕವನ್ನು ಕಂಡು ಜನ ಹೌಹಾರಿ ಹೋಗಿದ್ದಾರೆ. ಪ್ರತಿಯೊಬ್ಬರ ನಡೆಯೂ ಅರ್ಥಮಾಡಿ ಕೊಳ್ಳಲು ಆಗದಷ್ಟು […]

 • ಆಧುನಿಕ ಭಾರತದ ಚರಿತ್ರೆಗೆ ವರ್ಗೀಸ್ ಸಾಕ್ಷಿಯಾದಾಗ

  ಜೂನ್ 26, 1975ರಂದು ನಸುಕಿನ ಎರಡು ಗಂಟೆಗೂ ತುಸು ಮೊದಲು ನನ್ನ ಬೆಡ್‌ರೂಮ್‌ನ ದೂರವಾಣಿ ಸದ್ದು ಮಾಡಿತು. ಇಂದೋರ್‌ನ ‘ನಯಿ ದುನಿಯಾ’ ಪತ್ರಿಕೆಯ ಸಂಪಾದಕ ಅಭಯ್ ಛಾಜ್‌ಲಾನಿ ಅವರಿಂದ ಬಂದ ಕರೆಯಾಗಿತ್ತದು. ‘ದಿಲ್ಲಿಯಲ್ಲಿ ವಿಶೇಷವಾದ್ದೇನಾದರೂ ನಡೆಯಲಿ ದೆಯೇ’ ಎಂದು ವಿಚಾರಿಸಿದ ಅವರ ದನಿಯಲ್ಲಿ ಕಳವಳವಿತ್ತು. ‘ನಿಮಗೆ ಹಾಗೇಕೆ ಅನ್ನಿಸುತ್ತಿದೆ?’ ಎಂದು ನಾನು ಪ್ರಶ್ನಿಸಿದೆ. ಅದಕ್ಕವರು, ‘ಇಂದೋರ್‌ನ ಇತರ ಪತ್ರಿಕೆಗಳ ವಿಷಯದಲ್ಲಾದಂತೆ ತಮ್ಮ ಪತ್ರಿಕಾ ಕಚೇರಿಯ ಮೇಲೂ ದಾಳಿ ಆಗಿ ವೃತ್ತಪತ್ರಿಕೆಯ ಬಂಡಲ್‌ಗಳನ್ನು ಸೀಜ್ ಮಾಡಲಾಗಿದೆ. ರಾಜಕೀಯ ನಾಯಕರನ್ನು […]