ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for September, 2010

 • ಜೀವನ ಪ್ರೀತಿ ಮೆರೆವ ಅಕ್ಷರಗಳ ಸಾನ್ನಿಧ್ಯದಲ್ಲಿ

  ಆಕೆಯ ಪತ್ರ ಓದಿ ಒಂದು ಕ್ಷಣ ಕಣ್ಮುಂದೆ ಕತ್ತಲೆಯ ಪರದೆ ಜಾರಿಬಿದ್ದಂತಾಯಿತು. ಮನಸ್ಸು ಏಟು ತಿಂದ ಹಾವಿನಂತೆ ತಿರುಚಿಕೊಂಡು, ಹೊರಳಿಕೊಂಡು ಬಿದ್ದಿತ್ತು. ಆಕೆ ಬರೆದಿದ್ದಳು- ‘ಸರ್, ನನ್ನ ಹೆಸರು ಭಾರತಿ ಹಿರೇಮಠ ಅಂತ. ವರ್ಷ ಇಪ್ಪತ್ತಾದರೂ ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ. ಕಾರಣವಿಷ್ಟೇ, ನಾನು ಹುಟ್ಟು ಕುರುಡಿ. ಹೀಗಾಗಿ ನನ್ನ ಅಪ್ಪ-ಅಮ್ಮ ನನ್ನನ್ನು ಶಾಲೆಗೆ ಕಳಿಸಲಿಲ್ಲ. ಒಂದು ದಿನ ಅಮ್ಮ ಅಪ್ಪನೊಂದಿಗೆ ಜಗಳವಾಡಿ ನನ್ನನ್ನು ಶಾಲೆಗೆ ಕಳಿಸಲೇಬೇಕೆಂದು ಹಠ ಹಿಡಿದೆ. ಆಯಿತು, ಮುಂದಿನ ವರ್ಷದಿಂದ ಕಳಿಸಿದರಾಯಿತು ಎಂದು ಅಪ್ಪ […]

 • ಜನಗಳ ಮನ 26 ಸೆಪ್ಟೆಂಬರ್ 2010

  ಭಾನುವಾರ, 26 ಸೆಪ್ಟೆಂಬರ್  2010 ಬದುಕು ಬೋರಾಗದಂತೆ ಒಂದಿಷ್ಟು… ಧೋರಣೆಗಳೇ ಬದುಕನ್ನು ನಿರೂಪಿಸುತ್ತವೆ. ಬದುಕನ್ನು ನೀವು ಯಾವ ಧೋರಣೆಯಿಂದ ನೋಡುತ್ತಿರೋ ಅದಕ್ಕೆ ತಕ್ಕಂತೆ ಅದು ಚೆಂದವೋ ಕುರೂಪವೋ ಕಾಣುತ್ತದೆ- ಹೀಗೆಂದು ಹೇಳಿದರೆ ಏನೋ ಒಣ ಫಿಲಾಸಫಿ ಹೇಳಿದ ಹಾಗಾಯಿತು. ಆದರೆ ಇದನ್ನು ಸೊಗಸಾಗಿ ನಿರೂಪಿಸುವ, ಆಟಿಟ್ಯೂಡ್‌ಗಳ ಬಗ್ಗೆ ಹೇಳುವ ಮಿಂಚಂಚೆಯೊಂದು ಒಳಪೆಟ್ಟಿಗೆಯಲ್ಲಿ ಬಂದು ಜಮೆ ಯಾಗಿದೆ. ಅದನ್ನು ನಿಮ್ಮೊಂದಿಗೆ ಹಂಚಿ ಕೊಳ್ಳಬೇಕೆನಿಸಿತು. ಯೋಧನೊಬ್ಬ ವರದಿ ಒಪ್ಪಿಸಿದ ನಂತೆ. ಸರ್, ಶತ್ರುಗಳು ನಮ್ಮನ್ನು ಎಲ್ಲ ಕಡೆಯಿಂದಲೂ ಸುತ್ತುವರಿದಿದ್ದಾರೆ. ಅದಕ್ಕೆ […]

 • ಸಂದರ್ಶನಕ್ಕೆ ಬೆನ್ನು ತಿರುಗಿಸುವ ಜಾಯಮಾನದ ಬೆಂಬತ್ತಿ…

  ಸಂದರ್ಶನವಿಲ್ಲದೇ ಪತ್ರಿಕೋದ್ಯಮವಿಲ್ಲ ಅಂತಾರೆ. ಸುದಿ ಯಲ್ಲಿರುವ ವ್ಯಕ್ತಿಗಳನ್ನು ಸಂದರ್ಶಿಸುವುದು ಅಥವಾ ಕೆಲವರನ್ನು ಸಂದರ್ಶಿಸಿ ಸುದ್ದಿ ಮಾಡುವುದು ವರದಿಗಾರ ನಾದವನಿಗೆ ಸಾಮಾನ್ಯ. ಗಣ್ಯ, ಪ್ರಭಾವಿ ವ್ಯಕ್ತಿಗಳ ಅಭಿಪ್ರಾಯಗಳನ್ನು ಜನ ಆಸಕ್ತಿಯಿಂದ ಓದುವುದರಿಂದ ಸಂದರ್ಶನಕ್ಕೆ ಸುದ್ದಿಮನೆಯಲ್ಲಿ ಮಹತ್ವ. ಸಂದರ್ಶನಕ್ಕೆ ಕೆಲವು ಪತ್ರಿಕೆಗಳು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಅವುಗಳ ದೃಷ್ಟಿಯಲ್ಲಿ ಸಂದರ್ಶನವೆಂದರೆ ಕೃತಕ, ವ್ಯಕ್ತಿ ವೈಭವೀಕರಣ. ಯಾವ ವ್ಯಕ್ತಿ ವರದಿಗಾರನ ಜತೆ ಮಾತಾಡುತ್ತಾನೋ, ಆತ ತನಗೆ ಪೂರಕವಾಗುವಂತೆ, ಅನುಕೂಲವಾಗುವಂತೆ ಮಾತಾಡುವುದರಿಂದ ಸಂದರ್ಶನ ಯಾವತ್ತೂ ಏಕಪಕ್ಷೀಯ ವಾಗಿರುತ್ತದೆ ಎಂಬ ಅಭಿಪ್ರಾಯವನ್ನು ಕೆಲವು ಪತ್ರಿಕೆಗಳು […]

 • ಕತೆಗಳ ಕೈ ಜಗ್ಗಿದರೆ ಅಂತಃಕರಣ ಜುಮ್ಮೆಂದಿತು!

  ಹಾಗೆ ನೋಡಿದರೆ ನಾನು ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ, ಸಂಪುಟ ವಿಸ್ತರಣೆ ಅವಾಂತರ, ಕೊಳಕು ರಾಜಕಾರಣ, ಅಧಿಕಾರಕ್ಕೆ ಕಿತ್ತಾಟ… ಬಗ್ಗೆ ಬರೆಯಬೇಕಾ ಗಿತ್ತು. ಬರೆದಿದ್ದರೆ  ನೀವೂ ಓದುತ್ತಿದ್ದಿರಿ. ಪ್ರಯೋಜನವೇನು ಬಂತು? ರಾಜಕಾರಣಿಗಳು ಅವರ ಕೊಳಕು ವ್ಯವಹಾರವನ್ನು ಮುಂದುವರಿಸುತ್ತಿ ದ್ದರು. ಹಾಗೆಲ್ಲ ಬರೆದು ನಾವು ಕೊಳಕಾಗಬೇಕಾಗುತ್ತಿತ್ತು. ಅವರ ದೃಷ್ಟಿಯಲ್ಲಿ ಕೆಟ್ಟವರಾಗಬೇಕಾಗುತ್ತಿತ್ತು. ಅದರ ಬದಲು ಇತ್ತೀಚೆಗೆ ಯೋಗಿ ದುರ್ಲಭಜೀ ಹೇಳಿದ ಕೆಲವು ಪ್ರಸಂಗಗಳನ್ನು ನಿಮಗೆ ಹೇಳೋಣವೆನಿಸಿತು. ಇಲ್ಲಿನ ಪ್ರತಿ ಪ್ರಸಂಗವೂ ನಿಮ್ಮ ಅಂತಃಕರಣ ತಟ್ಟದೇ ಇರದು. ಅದರಲ್ಲಿ ಅಡಕವಾಗಿರುವ ನೀತಿ  […]